ಮಡಿಕೇರಿ, ಜೂ.೧೧: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತರ್ಜುಮೆ ಸಾಹಿತ್ಯಕ್ಕೆ ಉತ್ತೇಜನ ನೀಡಲು ಕವನ ಸ್ಪರ್ಧೆಯನ್ನು ಈ ಹಿಂದೆ ಏರ್ಪಡಿಸಿದ್ದು, ಹಾಗೆಯೇ ಕಳೆದ ತಿಂಗಳು ಕೆಲವು ನಿಯಮಗಳಿಗೆ ಅನುಸಾರವಾಗಿ ತರ್ಜುಮೆ ಕಥಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಅದರಂತೆ ಸ್ಪರ್ಧೆಗೆ ಬಂದಿದ್ದ ಕಥೆಯನ್ನು ನುರಿತ ತಜ್ಞರಿಂದ ವಿಮರ್ಶೆ ಮಾಡಿಸಿ ಅವರು ನೀಡಿದ ಅಂಕದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಈ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಇಂತಿದೆ. ಬಲ್ಲಮಾವಟಿ ಅಪ್ಪಚೆಟ್ಟೋಳಂಡ ವನು ವಸಂತ (ಪ್ರಥಮ), ಮಡಿಕೇರಿ ಮೊಣ್ಣಂಡ ಶೋಭಾ ಸುಬ್ಬಯ್ಯ (ದ್ವಿತೀಯ) ಮತ್ತು ಮಡಿಕೇರಿ ಬೊಳ್ಳೆರ ಸುಮನ್ ಸೀತಮ್ಮ (ತೃತೀಯ) ಸ್ಥಾನ ಪಡೆದು ಕೊಂಡಿದ್ದಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.