ಕ್ಯಾರೆಟನ್ನು ತೊಳೆದು ತುರಿ ಮಾಡಿ ಒಂದು ತೆಳ್ಳಗಿನ ನೀರು ಹಿಂಡಿದ ಬಟ್ಟೆಯಲ್ಲಿ ಹಾಕಿ ಕಣ್ಣಿನ ಮೇಲೆ ಒಂದು ಗಂಟೆಕಾಲ ಹಾಕಿಕೊಂಡು ಮಲಗಿದರೆ ಕಣ್ಣಿಗೆ ಸಂಬAಧಿಸಿದ ಹಲವು ತೊಂದರೆಗಳು ನಿವಾರಣೆ ಗೊಳ್ಳಲಿವೆ. ಕಣ್ಣು ಕಾಂತಿಯುತ ವಾಗುತ್ತದೆ. ಭೇದಿ, ರಕ್ತಭೇದಿ ಕರುಳು ಬಾಧೆಯಿಂದ ನರಳುವವರು ಬೇಯಿಸಿದ ಕ್ಯಾರೆಟ್ ರಸಕ್ಕೆ ಉಪ್ಪು ಹಾಕಿ ಕುಡಿದಲ್ಲಿ ಭೇದಿ ನಿಲ್ಲುತ್ತದೆ.
ಒಂದು ಲೋಟ ಕ್ಯಾರೆಟ್ ರಸಕ್ಕೆ ಒಂದು ಚಮಚೆ ಬೆಟ್ಟದ ನೆಲ್ಲಿಕಾಯಿ ರಸ ಹಾಗೂ ಒಂದು ಚಮಚೆ ಜೇನುತುಪ್ಪ ಬೆರೆಸಿ ಪ್ರತಿ ದಿನ ಒಂದು ಬಾರಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಉತ್ಪನ್ನ ವಾಗುತ್ತದೆ. ನೆಗಡಿ ಇದ್ದರೆ ವಾಸಿಯಾಗುತ್ತದೆ.
ಇದು ಚರ್ಮ ಸುಕ್ಕು ಬಾರದಂತೆ ತಡೆಯುತ್ತದೆ. ಹಸಿ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ನರಗಳಿಗೆ ಶಕ್ತಿ ದೊರೆಯುತ್ತದೆ. ದೃಷ್ಟಿ ದೋಷ ನಿವಾರಣೆಯಾಗಲಿದೆ. ರಾತ್ರಿ ಊಟದ ಬಳಿಕ ಒಂದು ಬಟ್ಟಲು ಕ್ಯಾರೆಟ್ ರಸ ಸೇವಿಸುವುದರಿಂದ ಮಲ ಬದ್ಧತೆ ನಿವಾರಣೆ ಆಗುತ್ತದೆ.
(ಸಂಗ್ರಹ)