ಕುಶಾಲನಗರ, ಜೂ. ೧೦: ಕೊಡಗು ಜಿಲ್ಲೆಯ ಕುಶಾಲನಗರ ಮೂಲದ ಯುವಕನೋರ್ವ ಅಬುದಾಬಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕುಶಾಲನಗರದ ಶಿವರಾಂ ಕಾರಂತ್ ಬಡಾವಣೆ ನಿವಾಸಿ ರಾಜಪ್ಪ ಮತ್ತು ರಾಣಿ ಎಂಬವರ ಪುತ್ರ ಕೆ.ಆರ್.ಪ್ರದೀಪ್ ಕುಮಾರ್ (೩೫) ಮೃತ ದುರ್ದೈವಿ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾದ್ದ ಪ್ರದೀಪ್ಕುಮಾರ್ ಇತ್ತೀಚೆಗೆ ವಿವಾಹವಾಗಿದ್ದ. ಪ್ರದೀಪ್ ಕಿವಿ ನೋವಿನಿಂದ ಬಳಲುತ್ತಿದ್ದ ಎನ್ನಲಾಗಿದ್ದು ನೋವು ತೀವ್ರಗೊಂಡ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅಬುದಾಬಿಯಿಂದ ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆ ನಡೆದಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.