ಚೆಟ್ಟಳ್ಳಿ, ಜೂ. ೧೦: ಕೊರೊನಾದಿಂದಾಗಿ ಜನರ ಓಡಾಟಕ್ಕೆ ನಿಯಂತ್ರಣ ಹೇರುವ ಮೂಲಕ ಸಾಮಗ್ರಿ ಖರೀದಿಗೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಅವಕಾಶ ನೀಡಲಾಗಿದೆ. ಮಳೆಗಾಲದ ಸಿದ್ಧತೆಯಲ್ಲಿ ತೊಡಗಿರುವ ರೈತರು ಬೆಳೆದ ಭತ್ತವನ್ನು ಅಕ್ಕಿಗಿರಣಿಗಳ ಮೂಲಕ ಅಕ್ಕಿಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ವಾರದ ಮೂರು ದಿನ ಮಾತ್ರ ಅಕ್ಕಿಗಿರಣಿ ತೆರೆಯುತ್ತಿದ್ದು, ರೈತರು ಭತ್ತವನ್ನು ವಾಹನಗಳಲ್ಲಿ ತುಂಬಿ ಅಕ್ಕಿಗಿರಣಿಯ ಮುಂದೆ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಕಂಡುಬರುತ್ತಿದೆ.
- ಕರುಣ್ ಕಾಳಯ್ಯ