ಮಡಿಕೇರಿ, ಜೂ. ೧೦: ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ೨೦೨೦-೨೧ ನೇ ಸಾಲಿನ ಜಿಲ್ಲಾಮಟ್ಟದ ಪ್ರಶಸ್ತಿಗಳು ಪ್ರಕಟವಾಗಿದೆ. ಗ್ರಾ.ಪಂ. ಮತ್ತು ತಾ.ಪಂ.ಗಳಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿ ಸಿಬ್ಬಂದಿ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉತ್ತಮ ತಾ.ಪಂ.ಇಒ ಸೋಮವಾರಪೇಟೆ, ಉತ್ತಮ ಸಹಾಯಕ ನಿರ್ದೇಶಕರು ವೀರಾಜಪೇಟೆ ತಾ.ಪಂ, ಉತ್ತಮ ತಾಂತ್ರಿಕ ಸಂಯೋಜಕರು ಸೋಮವಾರಪೇಟೆ ತಾ.ಪಂ, ಉತ್ತಮ ತಾಂತ್ರಿಕ ಸಹಾಯಕರು ಆಶಾ, ವೀರಾಜಪೇಟೆ ತಾ.ಪಂ, ಉತ್ತಮ ಗ್ರಾ.ಪಂ ಮಾಲ್ದಾರೆ, ವೀರಾಜಪೇಟೆ ತಾಲೂಕು. ಮಾನವ ದಿನಗಳ ಸೃಜನೆಯಲ್ಲಿ ಉತ್ತಮ ಸಾಧನೆ ನೆಲ್ಲಿಹುದಿಕೇರಿ, ನಾಪೋಕ್ಲು ಹಾಗೂ ನಿಟ್ಟೂರು ಗ್ರಾ.ಪಂ, ಸಕಾಲದಲ್ಲಿ ಕೂಲಿ ಪಾವತಿ ಹೊಸೂರು ಗ್ರಾ.ಪಂ. ವೀರಾಜಪೇಟೆ ತಾಲೂಕು, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಬಿಟ್ಟಂಗಾಲ ಗ್ರಾ.ಪಂ, ಕೂಲಿ ಸಾಮಗ್ರಿ ಅನುಪಾತ ಕುಂಜಿಲ ಗ್ರಾ.ಪಂ. ಮಾನವ ದಿನಗಳ ಸೃಜನೆಯಲ್ಲಿ ಪ.ಪಂಗಡಗಳ ಭಾಗವಹಿಸುವಿಕೆ ತಿತಿಮತಿ ಗ್ರಾ.ಪಂ, ಮಹಿಳೆಯರ ಭಾಗವಹಿಸುವಿಕೆ ಗಾಳಿಬೀಡು ಗ್ರಾ.ಪಂ. ವಿಶೇಷ ಚೇತನರ ಭಾಗವಹಿಸುವಿಕೆ ಕಣ್ಣಂಗಾಲ ಗ್ರಾ.ಪಂ, ಶೇಕಡವಾರು ಮುಕ್ತಾಯಗೊಳಿಸಿದ ಕಾಮಗಾರಿಗಳ ವಿಭಾಗ ಮಕ್ಕಂದೂರು ಗ್ರಾ.ಪಂ., ೧-೭ ದಾಖಲಾತಿಗಳ ಉತ್ತಮ ನಿರ್ವಹಣೆ ಗಣಗೂರು ಗ್ರಾ.ಪಂ., ಸಿದ್ದಾಪುರ ಗ್ರಾ.ಪಂ, ಪೆರಾಜೆ ಗ್ರಾ.ಪಂ., ಉತ್ತಮ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹಾಕತ್ತೂರು ಗ್ರಾ.ಪಂ., ಕೆದಮಳ್ಳೂರು ಗ್ರಾ.ಪಂ, ೭ನೇ ಹೊಸಕೋಟೆ ಗ್ರಾ.ಪಂ. ಉತ್ತಮ ತ್ಯಾಜ್ಯ ವಿಲೇವಾರಿ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾ.ಪಂ, ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ, ಹಾತೂರು, ರ‍್ವತ್ತೊಕ್ಲು, ಹೊಸೂರು, ಗೋಣಿಕೊಪ್ಪಲು, ಹುದಿಕೇರಿ, ದೇವರಪುರ, ಕುಟ್ಟ, ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ, ಗುಡ್ಡೆಹೊಸೂರು, ನೆಲ್ಲಿ ಹುದಿಕೇರಿ, ನಂಜರಾಯಪಟ್ಟಣ, ದೊಡ್ಡಮಳ್ತೆ. ಪಂಚಾಯತ್ ರತ್ನ ಪ್ರಶಸ್ತಿ (ಡಿಜಿಟಲ್ ಲೈಬ್ರರಿ) ಮಡಿಕೇರಿ ತಾಲೂಕಿನ ಹೊದ್ದೂರು, ಮರಗೋಡು, ನಾಪೋಕ್ಲು, ಕಕ್ಕಬ್ಬೆ, ಮೂರ್ನಾಡು, ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ, ಕೂಡುಮಂಗಳೂರು, ಕೆದಕಲ್, ವೀರಾಜಪೇಟೆ ತಾಲೂಕಿನ ದೇವರಪುರ ಪೊನ್ನಪ್ಪಸಂತೆ. ಪಂಚಾಯತ್ ರತ್ನ (ವಿಶೇಷ ಉದ್ಯಾನವನ) ಮಡಿಕೇರಿ ತಾಲೂಕಿನ ಮೇಕೇರಿ, ಹಾಕತ್ತೂರು, ಮರಗೋಡು, ಹೊಸ್ಕೇರಿ, ನಾಪೋಕ್ಲು, ಮೂರ್ನಾಡು, ಸಂಪಾಜೆ. ಸೋಮವಾರಪೇಟೆ ತಾಲೂಕಿನ ಹರದೂರು, ದುಂಡಳ್ಳಿ, ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ. ಸ್ವಚ್ಛ ಭಾರತ್ ಮಿಷನ್ ಉತ್ತಮ ಸಂಯೋಜಕರಾಗಿ ವೀರಾಜಪೇಟೆ ತಾಲೂಕಿನ ಸೂರಜ್ ಆಯ್ಕೆಯಾಗಿದ್ದಾರೆಂದು ಜಿ.ಪಂ. ಸಿಇಒ ಭನ್ವರ್‌ಸಿಂಗ್ ಮೀನಾ ತಿಳಿಸಿದ್ದಾರೆ.