ಕೂಡಿಗೆ, ಜೂ. ೯ : ಕಳೆದ ೨೬ ರ್ಷಗಳಿಂದ ಯಾವುದೇ ಪ್ರಗತಿ ಇಲ್ಲದಂತಿದ್ದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ತೋಟಗಾರಿಕಾ ಕ್ಷೇತ್ರಕ್ಕೆ ಇದೀಗ ಕಾಯಕಲ್ಪ ದೊರೆತಿದ್ದು, ಆವರಣದಲ್ಲಿ ಹೊಸ ತಳಿಯ ಗಿಡಗಳನ್ನು ನೆಟ್ಟು, ಆಧುನಿಕ ಪದ್ಧತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಕಳೆದ ೫ ರ್ಷಗಳ ಹಿಂದೆ ಬಿಡುಗಡೆ ಆದ ರೂ. ೪೨ ಲಕ್ಷ ಅನುದಾನದಲ್ಲಿ ತೋಟಗಾರಿಕಾ ಇಲಾಖೆಯ ಕ್ಷೇತ್ರವಾದ ೬೦ ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿತ್ತು. ಅದರಂತೆ ಈ ಸಾಲಿನಲ್ಲಿ ಅಭಿವೃದ್ಧಿ ಪ್ರಗತಿ ಪರಿಶೀಲನೆ ಆಧಾರ ಮೇಲೆ ೨೦೨೦-೨೧ ಸಾಲಿಗೆ ಸರಕಾರದಿಂದ ಹಾರಂಗಿ ಕ್ಷೇತ್ರದಲ್ಲಿ ಹೆಚ್ಚುವರಿ ೪೫ ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸರಕಾರ ಕಳೆದ ಸಾಲಿನಲ್ಲಿ ರೂ. ೫೩ ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ. ಅದರಂತೆ ೪೫ ಎಕರೆಯ ಪ್ರದೇಶದಲ್ಲಿ ಗಿಡಗಳನ್ನು ನೆಡುವ ಕರ್ಯ ಆರಂಭವಾಗಿದೆ.
ತೋಟಗಾರಿಕಾ ಇಲಾಖೆಯ ಪ್ರದೇಶದಲ್ಲಿ ಇದೀಗ ತೆಂಗು, ಸಪೋಟ, ಸೀಬೆ, ಕಾಳು ಮೆಣಸು, ಕಿತ್ತಳೆ, ಬೆಣ್ಣೆಹಣ್ಣು ಬೇಸಾಯವನ್ನು ಮಾಡಲಾಗಿದೆ. ಗಿಡಗಳನ್ನು ನೆಡುವುದರ ಜೊತೆಗೆ ಹೊಸ ಹೊಸ ತಳಿಯ ಗಿಡಗಳನ್ನು ನೆಟ್ಟು ಅವುಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿ ರಾಷ್ಟç ಮತ್ತು ಅಂರ್ರಾಷ್ಟಿçÃಯ ಮಟ್ಟದ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ.
೨೦೧೮-೧೯ ಸಾಲಿನಲ್ಲಿ ೨.೫ ಲಕ್ಷ ಸಸಿ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಹಾಗೂ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ ಮತ್ತು ಜಿಲ್ಲಾ ತೋಟಗಾರಿಕಾ ಇಲಾಖೆಯ ಮುಖೇನ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ರೈತರಿಗೆ ರಿಯಾಯಿತಿ ದರದಲ್ಲಿ ಗಿಡಗಳನ್ನು ವಿತರಣೆ ಮಾಡಲಾಗಿದೆ. ನೂತನವಾಗಿ ವಿಯೆಟ್ನಾಂ ತಾಂತ್ರಿಕತೆ ಪದ್ಧತಿಯನ್ನು ಉಪಯೋಗಿಸಿ ಒಂದು ಎಕರೆ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲು ಮುಂದಾಗಿದೆ. ಅದರಂತೆ ಕಾಳು ಬಳ್ಳಿಯನ್ನು ಬೆಳೆಯಲು ಎರಡು ಮೀಟರ್ ಅಂತರಕ್ಕೆ ಸಿಮೆಂಟ್ ಕಂಬಗಳನ್ನು ನೆಡಲಾಗಿದೆ. ಅಲ್ಲದೆ ಮೆಣಸು ಕಡ್ಡಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.(ಮೊದಲ ಪುಟದಿಂದ) ನೀರು ಸಂಗ್ರಹವಾಗಲು ಮತ್ತು ಸದುಪಯೋಗಕ್ಕೆ ಕೃಷಿ ಹೊಂಡವನ್ನು ತೆಗೆಯಲಾಗಿದೆ. ಈ ಕೃಷಿ ಹೊಂಡಕ್ಕೆ ನೂತನ ತಾಂತ್ರಿಕತೆಯಲ್ಲಿ ನೀರು ಸಂಗ್ರಹವಾಗಿ ಜೊತೆಗೆ ೧೦ ಹೆಚ್.ಪಿ. ಮೋಟಾರ್ ಬಳಸಿ ಏಕಕಾಲದಲ್ಲಿ ೬೫ ಸಾವಿರ ಲೀಟರ್ ನೀರು ಕ್ಷೇತ್ರದ ಎಲ್ಲಾ ಸಸಿಗಳಿಗೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಈ ಸಾಲಿನಲ್ಲಿ ಉತ್ತಮವಾದ ಬೆಳೆ ಬಂದು ವಿವಿಧ ಗಿಡಗಳ ಮತ್ತು ಫಸಲುಗಳಿಂದಾಗಿ ಸರಕಾರ ತೋಟಗಾರಿಕಾ ನಿಯಮಾನುಸಾರವಾಗಿ ಮಾರಾಟ ಮಾಡಿ ರೂ. ೩೨ ಲಕ್ಷದ ೯೮ ಸಾವಿರ ಆದಾಯ ಈ ಕ್ಷೇತ್ರದಿಂದ ಬಂದಿದ್ದು, ಸರಕಾರಕ್ಕೆ ಹಣವನ್ನು ಸಂದಾಯ ಮಾಡಲಾಗಿದೆ ಎಂದು ಹಾರಂಗಿ ತೋಟಗಾರಿಕಾ ಕ್ಷೇತ್ರದ ಸಹಾಯಕ ನಿರ್ದೇಶಕ ಎಸ್.ವರದರಾಜ್ ತಿಳಿಸಿದ್ದಾರೆ.
ಹಾರಂಗಿಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವುದನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ರಾಜ್ಯ ಮಟ್ಟದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಇನ್ನೂ ಇಲಾಖೆಯ ಉಳಿದಿರುವ ಜಾಗವನ್ನು ಅಭಿವೃದ್ಧಿ ಪಡೆಸಲು ತೋಟಗಾರಿಕಾ ಇಲಾಖೆಯ ಅಭಿವೃದ್ಧಿ ಪ್ರದೇಶ ಯೋಜನೆಯ ಅಡಿಯಲ್ಲಿ ಸರಕಾರ ಮತ್ತು ತೋಟಗಾರಿಕಾ ಇಲಾಖೆ ೫೩ ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದೆ.
ಅದರಂತೆಯೇ ಹಾರಂಗಿಯ ತೋಟಗಾರಿಕಾ ಇಲಾಖೆಯ ೧೨೩ ಎಕರೆ ಪ್ರದೇಶದಲ್ಲಿ ಈಗಾಗಲೇ ೬೦ ಎಕರೆಗಳಷ್ಟು ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಗಿಡಗಳನ್ನು ನೆಟ್ಟು ಬೆಳೆಸಿ ಇಲಾಖೆಗೆ ಮತ್ತು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗಿದೆ. ಬಾಕಿ ಇರುವ ೪೫ ಎಕರೆಗಳಷ್ಟು ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸರಕಾರ ರೂ. ೫೩ ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ.
ಅದರ ಅನುಗುಣವಾಗಿ ಪ್ರದೇಶದಲ್ಲಿ ಆನೆ ಕಂದಕಗಳನ್ನು ನಿರ್ಮಿಸುವುದರ ಜೊತೆಗೆ ೧೦ ಎಕರೆ ಪ್ರದೇಶದಲ್ಲಿ ಸಪೋಟ, ೧೦ ಎಕರೆ ಪ್ರದೇಶದಲ್ಲಿ ಗೇರು, ೧೦ ಎಕರೆಯಲ್ಲಿ ಬೆಣ್ಣೆಹಣ್ಣು, ೧೦ ಎಕರೆ ಪ್ರದೇಶದಲ್ಲಿ ತೆಂಗು, ೫ ಎಕರೆ ಪ್ರದೇಶದಲ್ಲಿ ಗೋಡಂಬಿ ಗಿಡಗಳನ್ನು ಬೆಳೆಸಲಾಗುವುದು. ಜೊತೆಯಲ್ಲಿ ಜಿಲ್ಲೆಯ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ತೋಟ ಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಅಲ್ಲದೆ ಕ್ಷೇತ್ರದಲ್ಲಿ ಬೆಳೆದ ವಿವಿಧ ತಳಿ ಸಸಿಗಳನ್ನು ಜಿಲ್ಲೆಯ ರೈತರಿಗೆ ತೋಟಗಾರಿಕಾ ಇಲಾಖೆಯ ನಿಯಮಾನುಸಾರವಾಗಿ ಹಣ ನಿಗದಿ ಮಾಡಿ ವಿತರಣೆ ಮಾಡಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ ತಿಳಿಸಿದ್ದಾರೆ.
ಹಾರಂಗಿ ತೋಟಗಾರಿಕಾ ಕ್ಷೇತ್ರಕ್ಕೆ ಸರಕಾರ ಬಿಡುಗಡೆ ಮಾಡಿದ ೭೦ ಲಕ್ಷ ರೂ ವೆಚ್ಚದಲ್ಲಿ ೬೦ ಎಕರೆ ಪ್ರದೇಶದಲ್ಲಿ ವಿವಿಧ ರೀತಿಯ ಸಸಿಗಳನ್ನು ಬೆಳೆಸಿ ಅಭಿವೃದ್ಧಿ ಪಡಿಸಲಾಗಿದೆ. ಈ ಸಾಲಿನಲ್ಲಿ ಸರಕಾರ ತೋಟಗಾರಿಕಾ ಇಲಾಖೆಯ ಮೂಲಕ ಒದಗಿಸುತ್ತಿರುವ ಹಣವನ್ನು ಉಪಯೋಗಿಸಿ ಕಾಡುಮಯವಾಗಿದ್ದ ೪೫ ಎಕರೆಗಳಷ್ಟು ಪ್ರದೇಶದಲ್ಲಿ ವಿವಿಧ ಹೈಬ್ರೀಡ್ ತಳಿಯ ಗಿಡಗಳನ್ನು ನೆಡುವ ಮೂಲಕ ರೈತರಿಗೆ ಪ್ರಾತ್ಯಕ್ಷಿಕೆಯನ್ನು ಒದಗಿಸಿ ಜಿಲ್ಲೆಯ ರೈತರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಗಿಡಗಳನ್ನು ವಿತರಣೆ ಮಾಡಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಒಂದು ಕೋಟಿಗೂ ಅಧಿಕ ಆದಾಯವನ್ನು ಮಾಡುವ ಚಿಂತನೆಯನ್ನು ಕೇಂದ್ರದ ಅಧಿಕಾರಿ ವ್ಯಕ್ತಪಡಿಸಿದ್ದಾರೆ. ತೋಟಗಾರಿಕಾ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಹಕಾರದಲ್ಲಿ ಅಭಿವೃದ್ಧಿ ಪಡಿಸಲು ಮುಂದಾಗಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಹಾರಂಗಿಯ ತೋಟಗಾರಿಕಾ ಕ್ಷೇತ್ರದ ಒಟ್ಟು ೧೦೫ ಎಕರೆಗಳಷ್ಟು ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿಗಳು ಕಾಯಕದಲ್ಲಿ ತೊಡಗಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.