ಸೋಮವಾರಪೇಟೆ, ಜೂ.೯: ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸೀಲ್‌ಡೌನ್ ಆಗಿರುವ ಮನೆಯವರ ಯೋಗ ಕ್ಷೇಮ ವಿಚಾರಿಸಲು ತೆರಳಿದ ಗ್ರಾ.ಪಂ. ಅಧ್ಯಕ್ಷೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆವಾಜ್ ಹಾಕಿದ ಪುಂಡರ ಗುಂಪೊAದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿರುವ ಘಟನೆ ಸಮೀಪದ ಹಾನಗಲ್ಲು ಬಾಣೆಯಲ್ಲಿ ನಡೆದಿದೆ.
ಹಾನಗಲ್ಲುಬಾಣೆ ನಿವಾಸಿ ಚಂದ್ರ, ಪತ್ನಿ ಹಾಗೂ ಪುತ್ರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದರೊಂದಿಗೆ ಗ್ರಾಮದ ಇನ್ನೂ ಮೂರು ಕುಟುಂಬಗಳ ಸದಸ್ಯರಿಗೆ ಸೋಂಕು ತಗುಲಿ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇಂತಹ ಮನೆಗಳಿಗೆ ಸ್ಥಳೀಯ ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯರು, ಆಶಾ ಕಾರ್ಯಕರ್ತೆಯರು ಆರೋಗ್ಯ ವಿಚಾರಿಸಲು ತೆರಳಿದ ಸಂದರ್ಭ ಅಡ್ಡಿಪಡಿಸಿರುವ ಪುಂಡರ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನ ನಡೆಸಿದೆ ಎಂದು ಚಂದ್ರ ಅವರು ಪೊಲೀಸರಿಗೆ ವಾಟ್ಸಾಪ್‌ನಲ್ಲಿ ದೂರು ನೀಡಿದ್ದಾರೆ.
ಚಂದ್ರ ಅವರ ಮನೆಗೆ ಆಗಮಿಸಿ ಆರೋಗ್ಯ ವಿಚಾರಿಸುತ್ತಿದ್ದ ಗ್ರಾ.ಪಂ. ಅಧ್ಯಕ್ಷೆ ಲಕ್ಷಿö್ಮÃ, ಆಶಾ ಕಾರ್ಯಕರ್ತೆ ಬಿಂದು ಅವರುಗಳಿಗೆ ತಡೆಯೊಡ್ಡಿ, ಸೀಲ್‌ಡೌನ್ ಆಗಿರುವ ಕುಟುಂಬ ಸದಸ್ಯರನ್ನು ನಿಂದಿಸಿ ಆವಾಜ್ ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಾನಗಲ್ಲುಬಾಣೆ ಗ್ರಾಮದ ಮಹೇಂದ್ರ ಅವರ ಪುತ್ರ ರಂಜಿತ್, ರಾಜು ಅವರ ಪುತ್ರ ಸುಭಾಷ್, ಸರಸ್ವತಿ ಅವರ ಪುತ್ರ ವಿಜಯ್, ಗೋಪಾಲ ಅವರ ಪುತ್ರ ಮಧು, ಈರಪ್ಪ ಅವರ ಪುತ್ರ ದರ್ಶನ್, ಚೆಲುವಿ ಅವರ ಮಗ ರಘು, ಆಲೇಕಟ್ಟೆಯ ಚಂದ್ರ ಅವರ ಮಗ ಪ್ರಮೋದ್ ಸೇರಿದಂತೆ ಇತರರು ತಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಪ್ರಯತ್ನಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ವಾಟ್ಸಾಪ್ ಮೂಲಕ ದೂರು ಸಲ್ಲಿಸಲಾಗಿದೆ ಎಂದು ಚಂದ್ರ ಅವರು ತಿಳಿಸಿದ್ದಾರೆ.
ಎಸ್.ಪಿ. ಭೇಟಿಗೆ ಅನುಮತಿ ನೀಡಿ: ನಮ್ಮ ಮನೆ ಸೀಲ್‌ಡೌನ್ ಆಗಿದ್ದು, ಹೊರಗೆ ಹೋಗಲು ಅಸಾಧ್ಯವಾಗಿದೆ. ಹಾಗಾಗಿ ವಾಟ್ಸಾಪ್ ಮೂಲಕ ದೂರು ನೀಡಿದ್ದೇವೆ. ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಗಲಾಟೆ ಮಾಡಿದ ಯುವಕರು ರಾಜಾರೋಷವಾಗಿ ಓಡಾಡಿಕೊಂಡಿದ್ದು, ರಾತ್ರಿ ವೇಳೆಯಲ್ಲಿ ಮನೆಯ ಸುತ್ತಮುತ್ತ ಸಂಚರಿಸುತ್ತಿದ್ದಾರೆ. ಸೀಲ್‌ಡೌನ್ ಟೇಪ್ ಕಿತ್ತೆಸೆದಿದ್ದಾರೆ. ಹಾಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಲು ಗ್ರಾ.ಪಂ.ನಿAದ ಅನುಮತಿ ನೀಡುವಂತೆ ಸೀಲ್‌ಡೌನ್ ಆಗಿರುವ ಕುಟುಂಬ ಮನವಿ ಸಲ್ಲಿಸಿದೆ.
ಘಟನೆಯ ಬಗ್ಗೆ ಮಾಹಿತಿ ಲಭಿಸಿದ್ದು, ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಸುಮೋಟೋ ಕೇಸ್ ದಾಖಲಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ತಿಳಿಸಿದ್ದಾರೆ.