ಕೂಡಿಗೆ, ಜೂ.೯: ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆಬ್ಬಾಲೆ ವ್ಯಾಪ್ತಿಯಲ್ಲಿ ಅನವಶ್ಯಕ ವಾಗಿ ಬೈಕ್ ಸವಾರರು ಓಡಾಡುತ್ತಿರುವುದನ್ನು ಗಮನಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸರ ತಂಡ ಅಂತಹ ಬೈಕ್‌ಗಳನ್ನು ತಡೆದು ದಂಡ ವಿಧಿಸಿದರು.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ೨೦ ಬೈಕ್‌ಗಳನ್ನು ವಶ ಪಡಿಸಿಕೊಂಡು ದಂಡ ಹಾಕಲಾಯಿತು.