ಮಡಿಕೇರಿ, ಜೂ. ೯: ನಗರದಲ್ಲಿ ಕಾನೂನು ಬಾಹಿರವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿರುವ ಸಂಬAಧ ಸಾರ್ವಜನಿಕರಿಂದ ದೂರುಗಳು ಬಂದ ಮೇರೆಗೆ ಇಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಯ ವತಿಯಿಂದ ಜಂಟಿಯಾಗಿ ಪರಿಶೀಲನೆ ನಡೆಯಿತು. ಅನುಮತಿ ಇಲ್ಲದೆ ವಾಣಿಜ್ಯ ಕಟ್ಟಡ ನಿರ್ಮಾಣ, ನವೀಕರಣ ಕಾರ್ಯಗಳು ನಗರದ ಕೆಲವು ಕಡೆ ನಡೆಯುತ್ತಿದ್ದು, ಹಾಗೂ ಜಾಗ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಲಾಗಿದ್ದು, ಮಾಲೀಕರಿಗೆ ನೋಟೀಸ್ ನೀಡಲಾಯಿತು. ನಗರದಲ್ಲಿನ ವಾಣಿಜ್ಯ ಕಟ್ಟಡವೊಂದನ್ನು
(ಮೊದಲ ಪುಟದಿಂದ) ನವೀಕರಣಗೊಳಿಸಲು ನಗರಸಭೆಯಿಂದ ಅನುಮತಿ ಕೋರಲಾಗಿತ್ತು. ಯಾವುದೇ ದಾಖಲಾತಿಗಳನ್ನು ನೀಡದೆ ಇದ್ದ ಕಾರಣ ಅನುಮತಿ ದೊರೆತಿರಲಿಲ್ಲ. ಅನುಮತಿ ದೊರಕದೆಯೇ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.
ಕಾವೇರಿ ಲೇಔಟ್, ಗೌಳಿಬೀದಿಗಳಲ್ಲಿ ಜಾಗ ಒತ್ತುವರಿ ಮಾಡಿಕೊಂಡಿದ್ದ ೨ ಮನೆಗಳಿಗೂ ನೋಟೀಸ್ ನೀಡಲಾಗಿದೆ. ಕಾವೇರಿ ಲೇಔಟ್ನಲ್ಲಿ ರಾಜ ಕಾಲುವೆಯ ಮೇಲೆ ಅನಧಿಕೃತವಾಗಿ ಮನೆ ನಿರ್ಮಿಸಲಾಗಿದೆ. ಗೌಳಿಬೀದಿಯಲ್ಲಿಯೂ ಚರಂಡಿಯ ಮೇಲೆ ಮನೆ ನಿರ್ಮಿಸಿದ್ದು, ಮಾಲೀಕರಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ರಾಮ್ದಾಸ್ ತಿಳಿಸಿದ್ದಾರೆ. ಪರಿಶೀಲನೆ ಸಂದರ್ಭ ಮೂಡಾ ಅಧ್ಯಕ್ಷ ರಮೇಶ್ ಹೊಳ್ಳಾ, ಪೌರಾಯುಕ್ತ ರಾಮ್ದಾಸ್, ನಗರಸಭೆಯ ೧೬ ಬಿ.ಜೆ.ಪಿ ಸದಸ್ಯರು ಹಾಗೂ ಇತರರು ಹಾಜರಿದ್ದರು.