ಗುಡ್ಡೆಹೊಸೂರು, ಜೂ. ೯: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಗಿರಿಜನ ಕಾಲೋನಿಯಲ್ಲಿ ಗಿರಿಜನರಿಗಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಅಪ್ಪಚ್ಚುರಂಜನ್ ಚಾಲನೆ ನೀಡಿ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಕರೆ ನೀಡಿದರು. ಈ ಸಂದÀರ್ಭ ಪಿ.ಡಿ.ಓ. ಶಾಂತಮ್ಮಯ್ಯ, ಡಾ. ಚೇತನ್, ಡಾ. ಸಚಿನ್, ಆರೋಗ್ಯ ಕಾರ್ಯಕರ್ತೆ ನೀಲಮ್ಮ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಮಾಜ ಕಲ್ಯಾಣ ಇಲಾಖಾಧಿಕಾರಿ ಶಿವಕುಮಾರ್, ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ಮುಂತಾದವರು ಹಾಜರಿದ್ದರು.