ಮಡಿಕೇರಿ, ಜೂ. ೯: ಕಳೆದ ವರ್ಷದಿಂದಲೂ ಆನ್ಲೈನ್ ಪಠ್ಯಕ್ರಮಕ್ಕೆ ಹೊಂದಿಕೊAಡಿರುವ ವಿದ್ಯಾರ್ಥಿಗಳಿಗೆ ೨೦೨೧-೨೨ ಹೊಸ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಶುಲ್ಕ ಪಾವತಿಸಲು ಸೂಚಿಸಿದಲ್ಲದೇ ಆನ್ಲೈನ್ ತರಗತಿಗೆ ಸಮವಸ್ತç ಕೂಡ ಧರಿಸಿ ತಮ್ಮ ಕಂಪ್ಯೂಟರ್, ಫೋನ್ಗಳ ಮುಂದೆ ಕುಳಿತುಕೊಳ್ಳುವಂತೆಯೂ ಜಿಲ್ಲೆಯ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳ ಪೋಷಕರಿಗೂ ಸೂಚಿಸಿವೆ. ಕೇಂದ್ರದ ಹಿಡಿತದಲ್ಲಿರುವ ಜಿಲ್ಲೆಯ ಹಲವು ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳ, ಪೋಷಕರುಗಳ ಫೋನ್ಗಳಿಗೆ ಸಂದೇಶಗಳನ್ನು ಕಳುಹಿಸಿವೆ. ಜೂನ್ ೧೪ ರಿಂದಲೇ ಎಲ್.ಕೆ.ಜಿ ಯಿಂದ ೧೦ನೇ ತರಗತಿಗಳ ಆನ್ಲೈನ್ ಕ್ಲಾಸ್ ಪ್ರಾರಂಭವಾಗಲಿದ್ದು, ಜೂನ್ ೩೦ ರೊಳಗಾಗಿ
(ಮೊದಲ ಪುಟದಿಂದ) ಶಾಲಾ ಪ್ರವೇಶ ಶುಲ್ಕದ ಮೊದಲ ಹಂತದ ಮೊತ್ತವನ್ನು ಜಮಾ ಮಾಡುವಂತೆ ಸಂದೇಶದಲ್ಲಿ ತಿಳಿಸಲಾಗಿದೆ. ಈ ಕುರಿತು ಕೆಲ ಪೋಷಕರು ಪತ್ರಿಕೆಯ ಗಮನಕ್ಕೆ ತಂದಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲನೆಯ ಹಂತದ ಶುಲ್ಕದ ಮೊತ್ತ ಸುಮಾರು ೧೦,೦೦೦ ದಷ್ಟು ಇದ್ದು, ತಾ. ೩೦ ರೊಳಗಾಗಿ ಇದನ್ನು ಪಾವತಿಸಲು ಕಷ್ಟಸಾಧ್ಯವಾಗಿದೆ ಎಂದು ಪೋಷಕರು ಪತ್ರಿಕೆಯೊಂದಿಗೆ ಹೇಳಿಕೊಂಡಿದ್ದಾರೆ.
ಈ ಮೊತ್ತದಲ್ಲಿ ಸಮವಸ್ತç ಹೊಲಿಸುವ ಮೊತ್ತವೂ ಸೇರಿದ್ದು, ಎಲ್.ಕೆ.ಜಿ. ವಿದ್ಯಾರ್ಥಿಗಳು ಕೂಡ ಸಮವಸ್ತç ಧರಿಸಿ ಆನ್ಲೈನ್ ಕ್ಲಾಸ್ಗೆ ಹಾಜರಾಗುವುದು ಕಡ್ಡಾಯವಾಗಿರುವುದಾಗಿ ತಿಳಿದುಬಂದಿದೆ.