
ವರದಿ: ಚಂದ್ರಮೋಹನ್ ಕುಶಾಲನಗರ,ಜೂ. ೯: ಲಾಕ್ಡೌನ್ ನಡುವೆ ಅವೈಜ್ಞಾನಿಕ ವಾಗಿ ಹಾಗೂ ನಿಧಾನ ಗತಿಯಲ್ಲಿ ನಡೆಯುತ್ತಿರುವ ಕೆಲವು ಯೋಜನೆಗಳ ಮೂಲಕ ಸರ್ಕಾರದ ಹಣ ಪೋಲಾಗುವುದರೊಂದಿಗೆ ಇಡೀ ಪಟ್ಟಣದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗುತ್ತಿರುವ ರೀತಿಯಲ್ಲಿ ಕುಶಾಲನಗರ ಪಟ್ಟಣದಲ್ಲಿ ಕಾಮಗಾರಿ ನಡೆಯುತ್ತಿರುವ ಬೆಳವಣಿಗೆ ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮಡಿಕೇರಿಯಿಂದ ಕುಶಾಲನಗರದ ತನಕ ಮೇ ತಿಂಗಳಲ್ಲಿ ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ರಸ್ತೆ ಕೆಲಸ ಅಂತಿಮ ರೂಪ ಪಡೆಯುತ್ತಿದ್ದಂತೆ ಕುಶಾಲನಗರ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯ ೨ ನೇ ಹಂತದ ಕೆಲಸ ಇಡೀ ರಸ್ತೆಯನ್ನು ಹದಗೆಡಿಸುತ್ತಿದೆ.ಕೋಟಿಗಟ್ಟಲೇ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣಗೊಂಡ ರಸ್ತೆಯನ್ನು ಅಗೆದು ಪೈಪ್ ಅಳವಡಿಸುವ ಕಾಮಗಾರಿ ಕಳೆದ ಕೆಲವು ದಿನಗಳಿಂದ ಕುಶಾಲನಗರ ಪಟ್ಟಣದಲ್ಲಿ ಕಂಡುಬAದಿದೆ. ಕಳೆದ ೮ ವರ್ಷಗಳಿಂದ ನೆನೆಗುದಿಗೆ ಬಿದ್ದ ಕುಶಾಲನಗರ ಒಳಚರಂಡಿ ಕಾಮಗಾರಿಯ ೨ನೇ ಹಂತದ ಕೆಲಸ ಮತ್ತೆ (ಮೊದಲ ಪುಟದಿಂದ) ಪ್ರಾರಂಭಗೊAಡಿದ್ದು ಪಟ್ಟಣದ ಉದ್ದಕ್ಕೂ ಜೆ.ಸಿ.ಬಿ ಯಂತ್ರಗಳು ರಸ್ತೆಯನ್ನು ಅಗೆಯಲು ಪ್ರಾರಂಭಿಸಿವೆ. ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ ರಸ್ತೆಯನ್ನು ಸಂಪೂರ್ಣ ಗುಂಡಿಮಯವಾಗಿಸಿದ್ದು, ಸಂಚಾರಕ್ಕೆ ಕೂಡ ತೊಡಕು ಉಂಟಾಗುತ್ತಿರುವುದು ಕಾಣಬಹುದು. ಒಳಚರಂಡಿ ಕಾಮಗಾರಿ ಬಾಕಿ ಇರುವ ಹಿನ್ನಲೆಯಲ್ಲಿ ಕುಶಾಲನಗರ ಪಟ್ಟಣದ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ರಾಷ್ಟಿçÃಯ ಹೆದ್ದಾರಿ ಇಲಾಖೆ ಸ್ವಲ್ಪ ಕಾಲ ತಡೆ ಹಿಡಿದಿದ್ದರೂ ಈ ಸಂದರ್ಭ ಒಳಚರಂಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯದಿರುವುದು ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಹೆದ್ದಾರಿ ರಸ್ತೆಯನ್ನು ಮತ್ತೆ ಸರಿಪಡಿಸಲು ಒಳಚರಂಡಿ ಮಂಡಳಿ ಅಧಿಕಾರಿಗೆ ಸೂಚಿಸಲಾಗಿದೆ, ಈ ಬಗ್ಗೆ ಹೆದ್ದಾರಿ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳಿಂದ ಅವೈಜ್ಞಾನಿಕ ಯೋಜನೆಗಳ ಮೂಲಕ ಸರ್ಕಾರದ ಹಣ ಪೋಲಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಶಕ್ತಿ ಮೂಲಕ ಆಗ್ರಹಿಸಿದ್ದಾರೆ.
ನಿಗಧಿತ ಅವಧಿಯಲ್ಲಿ ಒಳಚರಂಡಿ ಅಧಿಕಾರಿಗಳು ಕಾಮಗಾರಿ ನಡೆಸಿದ್ದರೆ ರಸ್ತೆ ಅಗೆಯುವ ಕೆಲಸದ ಅವಶ್ಯಕತೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಒಳಚರಂಡಿ ಮಂಡಳಿಯ ಇಂಜಿನಿಯರ್ ಆನಂದ್, ಪಟ್ಟಣದ ಗಣಪತಿ ದೇವಾಲಯದ ಮುಂಭಾಗ ಡಾಂಬರೀಕರಣ ಅಗೆದಿರುವ ಸ್ಥಳಕ್ಕೆ ಕಾಂಕ್ರೀಟ್ ಹಾಕಿ ಮುಚ್ಚಲಾಗುವುದು ಉಳಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆಬದಿಯ ೧.೨ ಮೀಟರ್ ಅಗಲಕ್ಕೆ ಮತ್ತೆ ಡಾಂಬರೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮಳೆಗಾಲದ ಅವಧಿಯಲ್ಲಿ ಪಟ್ಟಣದ ಜನತೆ ರಸ್ತೆ ಬದಿಯಲ್ಲಿ ಓಡಾಡಲು ಸಮಸ್ಯೆ ಉಂಟಾಗಲಿದೆ. ಎಂದು ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು, ಪಟ್ಟಣದ ಮುಖ್ಯರಸ್ತೆ ಕೆಸರುಮಯವಾಗುವ ಮುನ್ನ ಶಾಶ್ವತವಾಗಿ ಸರಿಪಡಿಸಲು ಶಕ್ತಿ ಮೂಲಕ ಆಗ್ರಹಿಸಿದ್ದಾರೆ.