ಮಡಿಕೇರಿ, ಜೂ. ೯: ವಾಡಿಕೆಯಂತೆ ಪ್ರಸ್ತುತ ಮುಂಗಾರು ಮಳೆ ಜಿಲ್ಲೆಯಲ್ಲಿ ಪ್ರಾರಂಭಗೊಳ್ಳಬೇಕಿತ್ತಾದರೂ. ಸದ್ಯದಮಟ್ಟಿಗೆ ನಡು ನಡುವೆ ಮಳೆಯ ಸಿಂಚನವಾಗುತ್ತಿದೆಯೇ ಹೊರತು, ಮಳೆಗಾಲದ ಚಿತ್ರಣ ಆರಂಭಗೊAಡಿಲ್ಲ. ಬಹುತೇಕ ಎಲ್ಲೆಡೆ ಬಿಸಿಲಿನ ಸನ್ನಿವೇಶ ಕಂಡುಬರುತ್ತಿದೆ. ಆದರೆ ತಾ. ೯ರ ಅಪರಾಹ್ನ ಒಂದಷ್ಟು ಮಳೆ ಜಿಲ್ಲಾ ಕೇಂದ್ರವೂ ಸೇರಿದಂತೆ ಅಲ್ಲಲ್ಲಿ ಸುರಿದಿದ್ದು, ಮಳೆ ಪ್ರಾರಂಭದ ನಿರೀಕ್ಷೆ ಮೂಡಿಸಿದೆ. ಇದಕ್ಕೆ ಪೂರಕವೆಂಬAತೆ ಸಂಜೆ ಮೋಡಕವಿದ ವಾತಾವರಣವೂ ಎದುರಾಗಿತ್ತು. ಈ ನಡುವೆ ತಾ. ೧೨ ಮತ್ತು ೧೩ರಂದು ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂಬ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ದಿನಗಳಲ್ಲಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಡಗಿನೊಂದಿಗೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಈ ದಿನಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ. ತಾ. ೧೩ರ ಬೆಳಿಗ್ಗೆಯಿಂದ ತಾ. ೧೪ರ ಬೆಳಿಗ್ಗೆ ೮.೩೦ರ ತನಕ ದ.ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.