ಭಾಗಮಂಡಲ, ಜೂ. ೮: ತಲಕಾವೇರಿಯ ಗಜ ಗಿರಿ ಬೆಟ್ಟದಲ್ಲಿ ಕಳೆದ ವರ್ಷ ಸಂಭವಿಸಿದ ಭೂಕುಸಿತಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ೨೦೧೫-೧೬ನೇ ಸಾಲಿನಲ್ಲಿ ಹಾಗೂ ೨೦೧೬-೧೭ನೇ ಸಾಲಿನಲ್ಲಿ ನಿರ್ಮಿಸಲಾಗಿದ್ದ ಇಂಗು ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಸೂಚಿಸಿದ್ದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಪ್ರಭಾಕರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಅವರ ಮಾರ್ಗದರ್ಶನದಲ್ಲಿ ಭಾಗಮಂಡಲದ ವಲಯ ಅರಣ್ಯಾಧಿಕಾರಿ ದೇವರಾಜು ಎಚ್.ಜಿ., ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್ ಅವರುಗಳು ಬ್ರಹ್ಮಗಿರಿ ಹಾಗೂ ಗಜಗಿರಿ ಬೆಟ್ಟದಲ್ಲಿ ಇರುವಂತಹ ಸುಮಾರು ೮೦೦ ಇಂಗು ಗುಂಡಿಗಳನ್ನು ಸ್ಥಳೀಯ ಕಾರ್ಮಿಕರ ಸಹಾಯದಿಂದ ಸಂಪೂರ್ಣವಾಗಿ ಮುಚ್ಚಿಸಿರುವುದಾಗಿ ತಿಳಿಸಿದ್ದಾರೆ. ಬ್ರಹ್ಮಗಿರಿ ಬೆಟ್ಟದಲ್ಲಿ ನೈಸರ್ಗಿಕವಾಗಿ ಬರುವಂತಹ ಆಮೆ ಮರ, ಸೀಬೆ ಮರ ಮುಂತಾದ
(ಮೊದಲ ಪುಟದಿಂದ) ಜಾತಿಯ ಮರಗಳ ಬೀಜಗಳನ್ನು ಸಂಗ್ರಹಿಸಿ ನಾಟಿ ಮಾಡಿರುವುದಾಗಿ ಹಾಗೂ ವೆಟ್ರಿವೇರ್ ಜಾತಿಯ ೩೦.೦೦೦ ಹುಲ್ಲುಗಳನ್ನು ನಾಟಿ ಮಾಡಿ ಹಸಿರೀಕರಣ ಹೆಚ್ಚಿಸಲು ನೇರಳೆ ಹಾಗೂ ಸೀಬೆ ಗಿಡಗಳನ್ನು ಜೊತೆಗೆ ೧೦ ಕೆಜಿ ಬಿದಿರು ಬೀಜಗಳನ್ನು
ನಾಟಿ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.