
ಮಡಿಕೇರಿ, ಜೂ. ೮: ರಾಜ್ಯದಲ್ಲಿ ಲಾಕ್ಡೌನ್ ಕೊನೆಯಾಗಲು ೬ ದಿನ ಬಾಕಿಯಿದೆ. ಲಾಕ್ಡೌನ್ ನಿಯಮ ಜಾರಿಗೆ ಬಂದು ೧ ತಿಂಗಳಾಗಿದೆ. ಕೊಡಗಿನಲ್ಲಿ ಲಾಕ್ಡೌನ್ ಜಾರಿಯಾಗಿ ೩೭ ದಿನಗಳಾಗಿವೆ. ಶೇ. ೫ ಪಾಸಿಟಿವಿಟಿ ದರ ಇದ್ದ ಜಿಲ್ಲೆಗಳಿಗೆ ಮಾತ್ರ ಜೂನ್ ೧೪ ರ ನಂತರ ಲಾಕ್ಡೌನ್ ವಿನಾಯಿತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಖಡಕ್ ಆಗಿಯೇ ಹೇಳಿದ್ದಾರೆ.ಹಾಗಿದ್ದರೆ, ಕೊಡಗಿನಲ್ಲಿ ಮುಂದಿನ ಮಂಗಳವಾರದಿAದ ಲಾಕ್ಡೌನ್ ವಿನಾಯಿತಿ ಇರುತ್ತದೆಯೇ ಇಲ್ಲವೇ?ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದಂತೆಯೇ ಕೊಡಗು ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ಲಾಕ್ಡೌನ್ ರೀತಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಯಿತು. ವಾರದಲ್ಲಿ ಮೂರು ದಿನ ಅಂಗಡಿ ತೆರೆಯಲು ಮೇ ೧ ರಂದು ಆದೇಶ ಹೊರಡಿಸಲಾಯಿತು. ನಂತರ ಮೇ ೭ ರಂದು ಅಂದರೆ ಕೊಡಗಿನಲ್ಲಿ ನಿರ್ಬಂಧ ಹೇರಿದ ೭ ದಿನಗಳ ಬಳಿಕ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆಯಾಗಿತ್ತು.
ಕೊರೊನಾ ಸೋಂಕು ವ್ಯಾಪಿಸುವಿಕೆ ತಡೆಗಟ್ಟಲು ಅಥವಾ ಕೊರೊನಾ ವೈರಸ್ನ ಹರಡುವಿಕೆಯ ಸಂಪರ್ಕ ಕೊಂಡಿಗೆ ಕಡಿವಾಣ ಹಾಕಲು ಲಾಕ್ಡೌನ್ ಸಹಕಾರಿ ಯಾಗಿದೆ ಎಂದು ವೈಜ್ಞಾನಿಕ ಅಂಶಗಳ ತಳಹದಿಯಲ್ಲಿ ಸರ್ಕಾರ ಲಾಕ್ಡೌನ್ ಸೂತ್ರವನ್ನೇ ಪರಿಣಾಮಕಾರಿಯಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಜಾರಿಗೊಳಿಸಿತ್ತು.ಕೊಡಗು ಜಿಲ್ಲೆಯಲ್ಲಿ ಕಳೆದ ೩೭ ದಿನಗಳ ಅಂಕಿಅAಶಗಳನ್ನೇ ಗಮನಿಸುವುದಾದಲ್ಲಿ
ಮೇ ೧ ರಂದು ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ೮೪೯ ಸೋಂಕು ಪ್ರಕರಣಗಳು ವರದಿಯಾಗಿದ್ದವು.
ಮೇ ೮ ಕ್ಕೆ ಅಂದರೆ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆಯಾದ ಸಂದರ್ಭ ಜಿಲ್ಲೆಯಲ್ಲಿದ್ದ ಸೋಂಕು ಪ್ರಕರಣಗಳ ಸಂಖ್ಯೆ ೬೮೬. ಅಂದು ೮೮೬ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು.
ಅಂದು ಜಿಲ್ಲೆಯಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ - ೫೧೮೪. ಅಂದು ಸಾವನ್ನಪ್ಪಿದವರ ಸಂಖ್ಯೆ -೧೨, ಜಿಲ್ಲೆಯಲ್ಲಿದ್ದ ಕಂಟೈನ್ಮೆAಟ್ ವಲಯಗಳ
ಸಂಖ್ಯೆ - ೪೭೯.
(ಮೊದಲ ಪುಟದಿಂದ) ಅದೇ ೧ ತಿಂಗಳ ನಂತರ ಅಂದರೆ ಜೂನ್ ೭ ರ ಸಂಖ್ಯೆ ಗಮನಿಸುವುದಾದಲ್ಲಿ ಕೊಡಗಿನಲ್ಲಿ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ - ೧೮೪ , ಗುಣಮುಖವಾದರು - ೨೭೩. ಮರಣ ಹೊಂದಿದವರು -೪, ಸಕ್ರಿಯ ಪ್ರಕರಣಗಳು - ೨,೦೪೩, ಪಾಸಿಟಿವಿಟಿ ದರ - ೧೧.೫೩.
ಈ ಅಂಕಿ ಅಂಶ ನೋಡಿದರೆ, ಕೊಡಗಿನಲ್ಲಿ ಕೊರೊನಾ ಸಂಬAಧಿತ ಗಂಟಲು ದ್ರವ ಪರೀಕ್ಷೆ ಕೈಗೊಂಡ ೧೦೦ ಮಂದಿಯಲ್ಲಿ ೧೨ ಮಂದಿಗೆ ಸೋಂಕು ಇರುವ ಅಂಶ ತಿಳಿದು ಬರುತ್ತಿದೆ. ಸರ್ಕಾರದ ಪ್ರಕಾರ ಈ ಸಂಖ್ಯೆ ೫ ಕ್ಕೆ ಅಂದರೆ, ೧೦೦ ಜನರ ಪರೀಕ್ಷೆ ಕೈಗೊಂಡಾಗ ೫ ಮಂದಿಗೆ ಮಾತ್ರ ಸೋಂಕು ಇರಬೇಕು.
ಈ ಸಂಖ್ಯೆಯನ್ನು ಕೊಡಗು ಜಿಲ್ಲೆ ಇನ್ನೂ ತಲುಪಿಲ್ಲ. ಕೊಡಗಿನಲ್ಲಿ ಪಾಸಿಟಿವಿಟಿ ದರ ಇನ್ನೂ ಸುರಕ್ಷಿತ ಎನ್ನುವ ಪ್ರಮಾಣ ತಲುಪಿಲ್ಲ. ಮುಂದಿನ ೬ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. ೫ ತಲುಪಿದರೆ ಮಾತ್ರ ಸುರಕ್ಷಿತ ಎಂಬ ಭಾವನೆಯಿಂದ ಜಿಲ್ಲೆಯನ್ನು ಅನ್ಲಾಕ್ ಮಾಡಬಹುದಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಕೋರೋನಾ ಎರಡನೇ ಅಲೆಯನ್ನು ಜನರೂ ಸೇರಿದಂತೆ ಸರ್ಕಾರ, ಆಡಳಿತ ನಿರ್ವಹಿಸಿದವರು ಎದುರಿಸಿದ ರೀತಿಯೇ ಅವೈಜ್ಞಾನಿಕವಾಗಿತ್ತು. ಮೊದಲ ವರ್ಷಕ್ಕಿಂತ ಎರಡನೇ ವರ್ಷದಲ್ಲಿ ಕೊರೊನಾ ಸೋಂಕು ಅತ್ಯಧಿಕ ಮಾರಣಾಂತಿಕವಾಗಿತ್ತಾದರೂ ಜನರು ತೀರಾ ನಿರ್ಲಕ್ಷö್ಯ ವಹಿಸಿದ್ದರು. ಆರೋಗ್ಯಕ್ಕಿಂತ ವ್ಯಾಪಾರವೇ ಮುಖ್ಯವಾಗಿತ್ತು. ಕಳೆದ ವರ್ಷದ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ಸೂಕ್ತ ರೀತಿಯಲ್ಲಿ ಮುಂದಾಗಲಿಲ್ಲ.
ಉದಾಹರಣೆಗೆ - ಅಂತರಜಿಲ್ಲಾ, ಅಂತರರಾಜ್ಯ ಸಂಚಾರಕ್ಕೆ ಯಾವುದೇ ಅಡ್ಡಿಯಿರಲಿಲ್ಲ. ಇಂದಿಗೂ ಅಂತರಜಿಲ್ಲಾ ಸಂಚಾರ ಸುಗಮವಾಗಿಯೇ ಸಾಗಿದೆ. ಚೆಕ್ಪೋಸ್ಟ್ಗಳಲ್ಲಿಯೂ ಬಿಗಿಯಾದ ತಪಾಸಣೆ ಕಂಡುಬರುತ್ತಿಲ್ಲ.
ಜೂನ್ ೧೪ ರ ನಂತರ ಅನ್ಲಾಕ್ ಆದ ಬಳಿಕದ ಸಮಸ್ಯೆಗಳು ಏನು?
- ಅಣೆಕಟ್ಟಿನ ದ್ವಾರಗಳನ್ನು ತೆರೆದಾಗ ನೀರು ಹೊರಬರುವಂತೆ ಜನ ಪಟ್ಟಣ ಪ್ರದೇಶಗಳಿಗೆ ಮನೆಗಳಿಂದ ಸುನಾಮಿಯಂತೆ ಬರುವ ಎಲ್ಲಾ ಸಾಧ್ಯತೆಗಳಿದೆ. (ಇದನ್ನು ಈಗಲೂ ಕೊಡಗಿನಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಲಾದ ವಾರದ ಮೂರು ದಿನಗಳೂ ಕಾಣುತ್ತಿದ್ದೇವೆ.) - ಕೊರೊನಾ ಹೋಗಿಯೇಬಿಟ್ಟಿದೆ ಎಂಬAತೆ ಹಲವರ ವರ್ತನೆ ಇರಲಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸುವಿಕೆಯತ್ತ ನಿರ್ಲಕ್ಷö್ಯದ ಸಾಧ್ಯತೆ ಹೆಚ್ಚಿದೆ.
- ಅಗತ್ಯವಿದೆಯೋ ಇಲ್ಲವೋ ಮನೆಮಂದಿ ನಗರ , ಪೇಟೆಗಳತ್ತ ಹೋಗುತ್ತಾರೆ. ಮಳೆಗಾಲದ ಖರೀದಿ, ಸಂತೆ ವ್ಯಾಪಾರದ ಹೆಸರಿನಲ್ಲಿ ಜನರ ಸಂಚಾರ, ವಹಿವಾಟು ಬಿರುಸಾಗಲಿದೆ.
- ಕೊಡಗಿನಲ್ಲಿ ಈ ವೇಳೆಗೆ ಮಳೆ ಪ್ರಾರಂಭವಾಗಿರುತ್ತದೆ. ಮಳೆಯಲ್ಲಿ ಕೊಡೆ ಹಿಡಿದುಕೊಂಡು ಎಷ್ಟರ ಮಟ್ಟಿಗೆ ಕಿಕ್ಕಿರಿದ ಸಂತೆ ಪ್ರದೇಶಗಳಲ್ಲಿ ಜನರು ಸಾಮಾಜಿಕ ಅಂತರ ಪಾಲಿಸುತ್ತಾರೆ, ಪಾಲಿಸಲು ಸಾಧ್ಯವೇ ಎಂಬುದನ್ನು ಯಾರೂ ಕೂಡ ಊಹಿಸಬಹುದು.
- ಹೀಗಿದ್ದರೂ, ಮಳೆಗಾಲದಲ್ಲಿ ಹೋಲಿಕೆಯಲ್ಲಿ ಕೊಡಗಿನಲ್ಲಿ ಜನಸಂಚಾರ ವಿರಳವಾಗಿರುವು ದರಿಂದ ಒಂದು ರೀತಿಯಲ್ಲಿ ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣದ ಸಾಧ್ಯತೆ ಇಲ್ಲದಿಲ್ಲ. ಆದರೆ ಸಂತೆ ಪ್ರದೇಶಗಳಲ್ಲಿ ಜನದಟ್ಟಣೆಗೆ ಕಡಿವಾಣ ಹಾಕಲು ಸ್ಥಳೀಯ ಸಂಸ್ಥೆಗಳ ಆಡಳಿತ ಕೂಡಲೇ ಸೂಕ್ತ ಕಾರ್ಯಯೋಜನೆ ರೂಪಿಸುವ ಅತ್ಯಗತ್ಯವಿದೆ.
- ಈಗಾಗಲೇ ರಚಿತವಾಗಿರುವ ಟಾಸ್ಕ್ ಫೋರ್ಸ್ಗಳನ್ನು ಲಾಕ್ಡೌನ್ ಮುಗಿದ ಬಳಿಕವೂ ಕಾರ್ಯಪ್ರವೃತ್ತ ವಾಗುವಂತೆ ನೋಡಿಕೊಳ್ಳಬೇಕು, ಮಡಿಕೇರಿಯಲ್ಲಿ ವಾರ್ಡ್ವಾರು ಟಾಸ್ಕ್ ಫೋರ್ಸ್ಗಳು, ಉಳಿದೆಡೆ ಗ್ರಾಮಪಂಚಾಯತ್ , ಪಟ್ಟಣ ಪಂಚಾಯತ್ ಮಟ್ಟದಲ್ಲಿನ ಕಾರ್ಯಪಡೆಗಳು ಮತ್ತಷ್ಟು ಬಿಗಿಯಾಗಿ ಕೊರೊನಾ ಸೋಂಕಿನ ತಡೆಗೆ ಶ್ರಮವಹಿಸುವ ಅತ್ಯಗತ್ಯ ಇದೆ.
- ಲಾಕ್ಡೌನ್ ಸಡಿಲಿಕೆ ಖಂಡಿತಾ ಕರ್ನಾಟಕ ಅಥವಾ ಕೊಡಗು ಜಿಲ್ಲೆ ಕೊರೊನಾ ಮುಕ್ತ ಎಂದು ಭಾವಿಸಲು ಸಾಧ್ಯವೇ ಇಲ್ಲ. ಕೊರೊನಾ ಸೋಂಕಿಗೆ ಇನ್ನೂ ಔಷಧಿ ದೊರಕಿಲ್ಲ. ಲಸಿಕೆಗಳು ರೋಗ ನಿರೋಧಶ ಶಕ್ತಿ ವೃದ್ದಕವೇ ವಿನಾ ಕೊರೊನಾ ನಿರ್ಮೂಲನೆಯ ಮಂತ್ರವಲ್ಲ. ಹೀಗಾಗಿ, ಕೊರೊನಾ ಇನ್ನೂ ಕೆಲವಾರು ತಿಂಗಳು ಇರುತ್ತದೆ.
- ಕಳೆದ ಬಾರಿಯ ಅನುಭವದ ಪಾಠವನ್ನು ಈ ವರ್ಷ ಅನುಸರಿಸದೇ ಪಟ್ಟಿರುವ ಸಂಕಷ್ಟ ಎಲ್ಲರಿಗೂ ತಿಳಿದಿದೆ. ಹೀಗಿರುವಾಗ, ಅನ್ಲಾಕ್ ಆದ ಬಳಿಕವೂ ನಿರ್ಲಕ್ಷö್ಯ ತೋರಿ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಮತ್ತೊಂದು ಅಲೆಯಲ್ಲಿ ನಿರ್ಲಕ್ಷಿತರು ಕೊಚ್ಚಿಕೊಂಡು ಹೋಗುವ ಅಪಾಯದ ಎಲ್ಲಾ ಸಾಧ್ಯತೆಗಳಿವೆ.
- ಅನ್ಲಾಕ್ ನಂತರ ಕೊಡಗು ಜಿಲ್ಲೆಯಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಕೂಡಲೇ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸಭೆ ನಡೆಸಿ ತೀರ್ಮಾನಿಸಲು ಇದು ಸಕಾಲ. ಕೋಟೆ ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಮುಚ್ಚುವುದ ಕ್ಕಿಂತ ಕೋಟೆಯ ಒಳಗಡೆ ಶತ್ರುಗಳನ್ನು ಬರದಂತೆ ತಡೆಯುವ ಮುನ್ನೆಚ್ಚರಿಕೆಯ ಕ್ರಮ ಮುಂದಿನ ಹಂತದಲ್ಲಿ ಅತ್ಯಗತ್ಯವಾಗಿ ಆಗಲೇಬೇಕಾಗಿದೆ.