ವೈಜ್ಞಾನಿಕವಾಗಿ ಗಮನಿಸುವುದಾದಲ್ಲಿ ಲಾಕ್ಡೌನ್ ಪರಿಣಾಮ ಸ್ಪಷ್ಟವಾಗಿ ತಿಳಿಯಲು ಕನಿಷ್ಟ ೨೦-೨೫ ದಿನಗಳು ಬೇಕು.ಅಂಕಿ ಅಂಶ ಗಮನಿಸುವುದಾದರೆ, ಏಪ್ರಿಲ್ ೨೭ ರವರೆಗೆ ಇದ್ದ ಒಟ್ಟು ಪ್ರಕರಣಗಳ ಸಂಖ್ಯೆ - ೯,೨೮೮. ಮೇ ೧೭ ಕ್ಕೆ ಈ ಸಂಖ್ಯೆ ೨೦,೪೨೮. ಕೇವಲ ೨೦ ದಿನಗಳಲ್ಲಿಯೇ ಏರಿಕೆಯಾದ ಸಂಖ್ಯೆ - ೧೧,೧೪೦. ಜೂನ್ ೬ ಕ್ಕೆ ವರದಿಯಾಗಿದ್ದ ಆವರೆಗಿನ ಒಟ್ಟು ಸೋಂಕಿತರ ಸಂಖ್ಯೆ ೨೫,೯೫೮ ಮೇ ೧೭ ರಿಂದ ಜೂನ್ ೬ ರವರೆಗೆ ಹೆಚ್ಚಾದ ಕೊರೊನಾ ಸೋಂಕಿನ ಸಂಖ್ಯೆ ೫,೫೩೦. ಲಾಕ್ಡೌನ್ನಿಂದಾಗಿ ಗಣನೀಯವಾಗಿ ಕೊಡಗಿನಲ್ಲಿಯೂ ಕೊರೊನಾ ಸೋಂಕಿನ ಸಂಖ್ಯೆ ಕುಸಿತವಾಗಿದೆ ಎಂಬುದು ಸ್ಪಷ್ಟ.
ಮರಣ ಪ್ರಮಾಣದ ಅಂಕಿ ಅಂಶ ಗಮನಿಸುವುದಾದಲ್ಲಿ -ಕಳೆದ ವರ್ಷ ಕೊರೊನಾ ಪ್ರಕರಣ ವರದಿಯಾದಲ್ಲಿಂದ ಕೊಡಗಿನಲ್ಲಿ ಏಪ್ರಿಲ್ ಅಂತ್ಯದವರೆಗೆ ವರದಿಯಾದ ಮರಣ ಪ್ರಕರಣ ಒಟ್ಟು ೯೦. ಆದರೆ ಆ ೧೩ ತಿಂಗಳಲ್ಲಿ ವರದಿಯಾದ ಸಾವಿನ ಸಂಖ್ಯೆಯನ್ನು ಮೇ ತಿಂಗಳು ಒಂದೇ ಒಂದು ತಿಂಗಳು ಹಿಂದಿಕ್ಕಿದ್ದು ಮಾತ್ರವಲ್ಲ ೧೩ ತಿಂಗಳ ಲೆಕ್ಕವನ್ನೇ ಮರಣ ಸಂಖ್ಯೆಯಲ್ಲಿ ದುಪ್ಪಟ್ಟು ಮಾಡಿತ್ತು. ಮೇ ತಿಂಗಳೊAದರಲ್ಲಿಯೇ ಕೊಡಗಿನಲ್ಲಿ ಒಟ್ಟು ೧೩,೧೪೩
ಕೊಡಗಿಗೆ ಅಭಯವಾದ ಲಾಕ್ಡೌನ್
(ಮೊದಲ ಪುಟದಿಂದ) ಸೋಂಕಿನ ಸಂಖ್ಯೆ ವರದಿಯಾಗಿದ್ದು ೨೦೭ ಸಾವಿನ ಸಂಖ್ಯೆ ವರದಿಯಾಗಿತ್ತು.
ಇದು ಕೊರೊನಾ ಎರಡನೇ ಅಲೆಯ ತೀವ್ರತೆಗೆ ಸಾಕ್ಷಿಯಾಗಿದೆ. ಲಾಕ್ಡೌನ್ ಮಾಡದೇ ಹೋಗಿದ್ದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಮೂರು ಪಟ್ಟು, ನಾಲ್ಕು ಪಟ್ಟು ಹೆಚ್ಚುತ್ತಿತ್ತಲ್ಲದೇ ಸಾವಿನ ಸಂಖ್ಯೆಯೂ ತೀವ್ರರೀತಿಯಲ್ಲಿ ಏರಿಕೆಯಾಗುತ್ತಿತ್ತು ಎಂಬದು ವೈದ್ಯಕೀಯ ತಜ್ಞರ ಅಭಿಪ್ರಾಯ.
ಈ ಅಂಕಿ ಅಂಶ ಗಮನಿಸಿ ಹೇಳುವುದಾದಲ್ಲಿ ಲಾಕ್ ಡೌನ್ ಪರಿಣಾಮಗಳು ಕೊಡಗಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಲಾಕ್ ಡೌನ್ ಮಾಡದೇ ಹೋಗಿದ್ದರೆ ಕೊಡಗಿನಲ್ಲಿ ನೂರಾರು ಸೋಂಕಿತರು ಮತ್ತೆ ಸಾವಿರಾರು ಮಂದಿಯ ಸಂಪರ್ಕಕ್ಕೆ ಬಂದು ೪೦ -೫೦ ಸಾವಿರದಷ್ಟು ಸಕ್ರಿಯ ಪ್ರಕರಣಗಳಿಗೆ ಕಾರಣವಾಗುತ್ತಿದ್ದವು. ಲಾಕ್ಡೌನ್ನಿಂದಾಗಿ ಸೋಂಕಿತರ ಸಂಪರ್ಕ ತಪ್ಪುವುದರೊಂದಿಗೆ ಸೋಂಕಿನ ತೀವ್ರ ಹರಡುವಿಕೆಗೂ ತಡೆ ಉಂಟಾಗಿದೆ.