ನವದೆಹಲಿ, ಜೂ. ೭: ವಿಶ್ವ ಯೋಗ ದಿನವಾದ ಜೂ. ೨೧ ರ ಸೋಮವಾರದಿಂದ ೧೮ ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರಕಾರದಿಂದ ಉಚಿತ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಈ ಕುರಿತು ಇದುವರೆಗೆ ಎಲ್ಲ ರಾಜ್ಯಗಳಲ್ಲಿ ಮೂಡಿದ್ದ ಗೊಂದಲವನ್ನು ಬಗೆಹರಿಸಿರುವ ಮೋದಿ ಅವರು ಬಡವರು, ಮಧ್ಯಮ ವರ್ಗದವರು, ಶ್ರೀಮಂತರು ಎನ್ನುವ ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತ ಲಸಿಕೆ ನೀಡುವುದಾಗಿ ಪ್ರಕಟಿಸಿದ್ದಾರೆ. ಪ್ರಸಕ್ತ ಶತಮಾನದ ಅದೃಶ್ಯ ರೂಪದ ಹಾಗೂ ಇದೀಗ ರೂಪಾಂತರಿಯಾಗಿರುವ ಶತ್ರುಕೋವಿಡ್-೧೯ರ ವಿರುದ್ಧದ ಹೋರಾಟಕ್ಕೆ ಲಸಿಕೀಕರಣವೇ ಪರಮೌಷಧಿಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಇಂದು ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳ ಲಸಿಕೆ ವಿತರಣೆ ಇನ್ನು ಮುಂದೆ ಕೇಂದ್ರ ಸರ್ಕಾರದ ಹೊಣೆಯಾಗಲಿದೆ ಎಂದಿದ್ದಾರೆ..ಎಲ್ಲ ರಾಜ್ಯಗಳ ಕೋರಿಕೆಗೆೆ ಮನ್ನಣೆಯಿತ್ತು ಕೇಂದ್ರ ಸರ್ಕಾರ ಲಸಿಕಾ ಕಂಪೆನಿಗಳಿAದ ಲಸಿಕೆ ಖರೀದಿಸಿ ಎಲ್ಲಾ ರಾಜ್ಯಗಳಿಗೂ ಹಂಚಲಿದೆ. ಈ ಸಂಬAಧ ಶೀಘ್ರವೇ ಪ್ರತ್ಯೇಕ ಮಾರ್ಗಸೂಚಿ ಹೊರಬೀಳಲಿದೆ ಎಂದರು. ಸರ್ಕಾರಕ್ಕೆ ಹೊರೆಯಾಗಬಾರದು ಎಂದು ಭಾವಿಸುವ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ಖಾಸಗಿ ಆಸ್ಪತ್ರೆಗೆ ಶೇಕಡ ೨೫ರಷ್ಟು ಲಸಿಕೆ ಖರೀದಿಸಲು ಅವಕಾಶ ನೀಡಲಾಗುವುದು. ಇನ್ನು ಖಾಸಗಿ ಆಸ್ಪತ್ರೆಯವರು ಲಸಿಕೆ ಪಡೆಯುವವರಿಂದ ಹೆಚ್ಚುವರಿಯಾಗಿ ರೂ. ೧೫೦ ಮಾತ್ರ ಪಡೆಯಬೇಕು ಎಂದರು. ಲಸಿಕೆ ನೀಡಿಕೆಯ ವೆಚ್ಚಕ್ಕಾಗಿ ಮಾತ್ರ ಈ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದರು.

ಮಕ್ಕಳಿಗೂ ಲಸಿಕೆ ಸಿದ್ಧತೆ

ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹಾನಿಯಾಗಲಿದೆ ಎಂಬ ತಜ್ಞರ ಹೇಳಿಕೆಯಿಂದ ಜನರು ಆತಂಕಪಡುವ ಅಗತ್ಯವಿಲ್ಲ. ಅದಕ್ಕಾಗಿಯೇ ಮಕ್ಕಳಿಗಾಗಿ ಲಸಿಕೆ ತಯಾರಿಸಲಾಗುತ್ತಿದ್ದು, ಪ್ರಯೋಗದ ಹಂತದಲ್ಲಿವೆ. ಒಂದು ನೇಸಲ್ ಲಸಿಕೆ ಕುರಿತು ಸಂಶೋಧನೆ ನಡೆಯುತ್ತಿದೆ. ಇದನ್ನು ಮೂಗಿನಲ್ಲಿ ಸ್ಪ್ರೇ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರಲ್ಲಿ ಸಫಲತೆ ದೊರಕುವ ನಿರೀಕ್ಷೆಯಿದ್ದು ಅದು ಲಸಿಕಾ ಅಭಿಯಾನಕ್ಕೆ ವೇಗ ನೀಡಲಿದೆ ಎಂದರು.

೭ ಕಂಪನಿಗಳಿAದ ಲಸಿಕೆ ತಯಾರಿಕೆ

ದೇಶದಲ್ಲಿ ಅತ್ಯಂತ ವೇಗವಾಗಿ ಲಸಿಕೆಗಳು ತಯಾರಾಗುತ್ತಿವೆ. ಇಡೀ ವಿಶ್ವವೇ ನಿಬ್ಬೆರಗಾಗುವಂತೆ ನಮ್ಮ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮೇಡ್ ಇನ್ ಇಂಡಿಯಾ ಯೋಜನೆಯನ್ನು ೧ ವರ್ಷದಲ್ಲಿಯೇ ಜಾರಿಗೊಳಿಸುವ ಮೂಲಕ ದೇಶದ ಎರಡು ಕಂಪೆನಿಗಳಿAದ ತಯಾರಿತ ಎರಡು ಲಸಿಕೆಗಳು ಈಗಾಗಲೇ ನೀಡಲ್ಪಡುತ್ತಿವೆ. ಇವೂ ಸೇರಿದಂತೆ ದೇಶದಲ್ಲಿ ೭ ಕಂಪೆನಿಗಳಿAದ ಲಸಿಕಾ ತಯಾರಿಕೆಯಾಗುತ್ತಿದೆ. ಅವರ ಮೇಲಿನ ವಿಶ್ವಾಸದಿಂದ ೨೦೨೦ರ ಏಪ್ರಿಲ್‌ನಲ್ಲಿ ಸಂಶೋಧನೆ ನಡೆಯುತ್ತಿದ್ದಾಗಲೇ ತಯಾರಿ ಆರಂಭಿಸಿದ್ದೆವು. ಅದಕ್ಕಾಗಿ ಲಸಿಕಾ ಕ್ರಿಯಾಪಡೆಯನ್ನು ಕೂಡ ರಚಿಸಲಾಗಿತ್ತು. ಸಂಶೋಧನೆಗೆ ಅಗತ್ಯ ಹಣ ನೀಡಲಾಯಿತು ಎಂದರು. ಈಗ ದೇಶದಲ್ಲಿ ಏಳು ಕಂಪೆನಿಗಳು ವಿಭಿನ್ನ ಪ್ರಕಾರದ ಲಸಿಕೆ ತಯಾರಿಸುತ್ತಿವೆ. ೩ ಲಸಿಕೆ ಕುರಿತು ಮುಂದುವರಿದ ಹಂತದಲ್ಲಿ ಪ್ರಯೋಗ ನಡೆಯುತ್ತಿದೆ. ಜೊತೆಗೆ, ಜನರಿಗೆ ಅಗತ್ಯ ಪ್ರಮಾಣದ ಬೇರೆ ದೇಶಗಳಿಂದ ಲಸಿಕೆ ಖರೀದಿಸುವ ಪ್ರಕ್ರಿಯೆಗೂ ಕೂಡ ವೇಗ ನೀಡಲಾಗಿದೆ ಎಂದು ವಿವರಿಸಿದರು.. ಈಗಾಗಲೇ ಭಾರತದಲ್ಲಿ ೨೩ ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಮಿಷನ್ ಇಂದ್ರಧನುಷ್ ಮೂಲಕ ಭಾರತ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನೂ ಕೈಗೊಂಡಿದೆ ಎಂದರು.

ಲಸಿಕೆ ತಯಾರಿಸಿದ ನಂತರ ಕೂಡ ದೇಶದ ಅತ್ಯಂತ ಕಡಿಮೆ ದೇಶಗಳಲ್ಲಿ ಲಸಿಕೀಕರಣ ಆರಂಭವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ದಿಸೆಯಲ್ಲಿ ಮಾರ್ಗಸೂಚಿ ಕೂಡ ನೀಡಿದೆ. ಲಸಿಕೆಯ ಒಂದು ಡೋಸ್ ಕೂಡ ಎಷ್ಟು ಮಹತ್ವ ಎಂಬುದನ್ನು ನಾವು ಅರಿತಿದ್ದೇವೆ. ಪ್ರತಿ ಡೋಸ್‌ನೊಂದಿಗೆ ಒಂದು ಜೀವ ಉಳಿಯಬಹುದು ಎಂದರು. ಇನ್ನು ಜನರಲ್ಲಿ ಗೊಂದಲ ತಪ್ಪಿಸುವ ಸಲುವಾಗಿ ರಾಜ್ಯಗಳಿಗೆ ಒಂದು ವಾರ ಮುಂಚೆಯೇ ಯಾವಾಗ ಎಷ್ಟು ಡೋಸ್ ದೊರೆಯಲಿದೆ ಎಂಬ ವಿವರ ನೀಡಲಾಗುತ್ತ್ತದೆ ಎಂದು ಖಚಿತಪಡಿಸಿದರು..

(ಮೊದಲ ಪುಟದಿಂದ)

ದೀಪಾವಳಿವರೆಗೆ ಉಚಿತ ಪಡಿತರ

ಕಳೆದ ಏಪ್ರಿಲ್‌ನಲ್ಲಿ ಘೋಷಣೆಯಾದ ಲಾಕ್‌ಡೌನ್ ಅವಧಿಯಲ್ಲಿ ಬಡಜನರಿಗೆ ಉಚಿತ ಪಡಿತರ ವಿತರಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಇದನ್ನು ಪ್ರಸಕ್ತ ಜೂನ್ ತಿಂಗಳವರೆಗೂ ವಿಸ್ತರಿಸಲಾಗಿತ್ತು. ಮತ್ತೆ ಇದೀಗ ದೀಪಾವಳಿವರೆಗೆ ಅಂದರೆ, ನವೆಂಬರ್ ತಿಂಗಳವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಪ್ರಕಟಿಸಿದರು. ಈ ಯೋಜನೆಯಡಿ ಬಡಜನರಿಗೆ ಪ್ರತಿ ತಿಂಗಳು ಉಚಿತ ಪಡಿತರ ದೊರೆಯಲಿದೆ ಎಂದರು. ಈ ಸಂಕಷ್ಟ ಸಮಯದಲ್ಲಿ ಸರ್ಕಾರ ಬಡವರ ಜೊತೆಗಿದೆ. ಯಾವುದೇ ಬಡ ಸಹೋದರರು ಹಸಿವಿನಿಂದ ಮಲಗಬಾರದು ಎಂಬುದು ಇದರ ಉದ್ದೇಶ ಎಂದು ಹೇಳಿದರು.

ಅಪಪ್ರಚಾರ ಸಲ್ಲದು

ಕೋವಿಡ್‌ನಿಂದ ತಲೆದೋರಿದ ಸಂಕಷ್ಟ ಸ್ಥಿತಿಯನ್ನು ಇಡೀ ವಿಶ್ವವೇ ಎದುರಿಸುತ್ತಿದೆ. ಭಾರತವೂ ಇದರಿಂದ ಹೊರತಾಗಿಲ್ಲ ಹೀಗಿರುವಾಗ ಇಂತಹ ಸಂಕಷ್ಟದ ಸಂದರ್ಭದಲ್ಲಿ ಲಸಿಕೆ ಕುರಿತು ರಾಜಕೀಯಕ್ಕಾಗಿ ನೀಡುವ ಪ್ರತಿರೋಧ ಹೇಳಿಕೆಗಳನ್ನು ಯಾರೂ ಮೆಚ್ಚುವುದಿಲ್ಲ. ಲಸಿಕೆ ಕುರಿತು ಕೆಲವರು ಹುಟ್ಟಿಸುವ ಭ್ರಮೆ, ಅಪಪ್ರಚಾರಗಳು ಚಿಂತೆಗೀಡು ಮಾಡುತ್ತಿವೆ. ಲಸಿಕೆ ಕುರಿತು ದೇಶದಲ್ಲಿ ಕೆಲಸ ಆರಂಭಿಸಿದಾಗಿಲಿನಿAದ ಆ ಕುರಿತು ಜನರಲ್ಲಿ ಶಂಕೆ ಉತ್ಪನ್ನ ಮಾಡುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಲಸಿಕೆ ಹಾಕದಂತೆ ತರ್ಕ ವಿತರ್ಕ ಮಾಡಲಾಯಿತು. ಅದನ್ನು ದೇಶ ನೋಡುತ್ತಿದೆ. ಯುವಕರು ಇಂತಹ ಹೇಳಿಕೆಗಳನ್ನು ನಂಬಬಾರದು. ಜಾಗೃತಿ ಮೂಡಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು

ಬಹಳ ಕಡಿಮೆ ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಭಾರತ ಕಂಡಿದೆ. ವಿಶ್ವದ ಎಲ್ಲೆಡೆಗಳಿಂದಲೂ ಭಾರತಕ್ಕೆ ನೆರವು ಬಂದಿದೆ. ಜಗತ್ತಿನ ಮೂಲೆಮೂಲೆಗಳಿಂದಲೂ ವೈದ್ಯಕೀಯ ಸಹಾಯ ಪಡೆದಿದ್ದೇವೆ. ಕಣ್ಣಿಗೆ ಕಾಣದ ಕೊರೊನಾ ವೈರಸ್ ವಿರುದ್ಧ ಸಾಮಾಜಿಕ ಅಂತರ, ಮಾಸ್ಕ್, ಲಸಿಕೆಗಳೇ ಪ್ರಬಲ ಅಸ್ತç ಎಂದು ಪ್ರಧಾನಿ ಹೇಳಿದರು.

ಜಗತ್ತಿನಲ್ಲಿಯೇ ಲಸಿಕೆಗೆ ಬೇಡಿಕೆಯಿದೆ. ಭಾರತ ಜಗತ್ತಿನಲ್ಲಿ ಲಸಿಕೆ ಉತ್ಪಾದನೆಯೊಂದಿಗೆ ಬೇಡಿಕೆಗೆ ತಕ್ಕಂತೆ ಸರಬರಾಜು ಮಾಡುತ್ತಿದೆ. ನಾವು ಲಸಿಕೆ ಕಂಡು ಹಿಡಿಯದೇ ಹೋಗಿದ್ದಲ್ಲಿ ಬೃಹತ್ ದೇಶದ ಸ್ಥಿತಿ ಏನಾಗುತಿತ್ತು ಎಂದು ಯೋಚಿಸಿ; ಭಾರತ ಕಳೆದ ವರ್ಷವೇ ಲಸಿಕೆ ಉತ್ಪಾದನೆಗೆ ಸೂಕ್ತ ಗಮನ ನೀಡಿದ್ದರಿಂದ ಈಗ ಲಸಿಕೆ ಒದಗಿಸಲು ಸಾಧ್ಯವಾಗುತ್ತಿದೆ ಎಂದರು.

ಕೊರೊನಾ ಸಂದರ್ಭ ಸಮರ ಸೈನಿಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗಿದೆ. ವೈದ್ಯಕೀಯ ಸಿಬ್ಬಂದಿಗಳು, ಪೌರಕಾರ್ಮಿಕರು, ಡಿ ಗ್ರೂಪ್ ಸಿಬ್ಬಂದಿಗಳಿಗೆ ಲಸಿಕೆ ನೀಡದಿದ್ದರೆ ಮತ್ತಷ್ಟು ಸಮಸ್ಯೆ ಆಗುತ್ತಿತ್ತು. ಇದರಿಂದಾಗಿ ಈ ಸಮರ ಸೈನಿಕರು ದೇಶದಲ್ಲಿ ಲಕ್ಷಾಂತರ ಮಂದಿಯ ಪ್ರಾಣ ಉಳಿಸಲು, ಸಮರೋಪಾದಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಪ್ರಶಂಸಿಸಿದರು.