*ವೀರಾಜಪೇಟೆ, ಜೂ. ೭: ಶಾಸಕ ಕೆ.ಜಿ ಬೋಪಯ್ಯ ಅಧ್ಯಕ್ಷತೆ ಯಲ್ಲಿ ವೀರಾಜಪೇಟೆಯ ಸೆರೆನಿಟಿ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್, ಆಶಾಕಾರ್ಯಕರ್ತೆಯರು, ಶುಶ್ರೂಷಕಿಯರ ಸಭೆ ನಡೆಯಿತು. ವೀರಾಜಪೇಟೆ ಪ. ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಕೋವಿಡ್-೧೯ ಕಡಿಮೆ ಯಾಗಿದ್ದು ಇನ್ನು ಒಂದು ವಾರದಲ್ಲಿ ಕೊರೊನಾ ಇಲ್ಲದಂತೆ ಆಗಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೆ.ಜಿ. ಬೋಪಯ್ಯ ಹೇಳಿದರು.
ಕೊರೊನಾ ಸೋಂಕಿತರು, ಮನೆ ಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರು ವವರು ಅನಗತ್ಯ ಹೊರಗೆ ಒಡಾಡು ವುದು ಕಂಡಲ್ಲಿ ಕೂಡಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಸರ್ಕಾರದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಲೇಬೇಕು. ಕೋವಿಡ್-೧೯ನ್ನು ಓಡಿಸಲು ಒಗ್ಗಟ್ಟಿ ನಿಂದ ಹೋರಾಟ ನಡೆಸಬೇಕಾಗಿದೆ. ಎಲ್ಲರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಎಚ್ಚರದಿಂದ ಇರುವಂತೆ ಹೇಳಿದರು. ವೀರಾಜಪೇಟೆ ತಹಶೀಲ್ದಾರ್ ಆರ್.ಯೋಗಾನಂದ ಮಾತನಾಡಿ, ಕೊರೊನಾ ಸೋಂಕಿತರು ಯಾರು ಮನೆಯಲ್ಲಿರುವ ಅಗತ್ಯ ಇಲ್ಲ. ಕೋವಿಡ್-೧೯ ಸೆಂಟರ್‌ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳ ಬೇಕು. ಕೊರೊನಾ ಸೋಂಕಿತರು ಮನೆಯಿಂದ ಹೊರಗೆ ಅನಗತ್ಯ ಸಂಚರಿಸುವುದು ಕಂಡಲ್ಲಿ ಸಾರ್ವಜನಿ ಕರು ದೂರವಾಣಿ ಮೂಲಕ ಅಧಿಕಾರಿ ಗಳಿಗೆ ತಿಳಿಸಿದರೆ ಕೂಡಲೆ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಿರುವ ಸುಭಾಷ್ ನಗರ ಹಾಗೂ ಮೊಗರಗಲ್ಲಿ ವಾರ್ಡುಗಳ ಬಗ್ಗೆ ಸಂಬAಧಪಟ್ಟ ಸದಸ್ಯರ ಜೊತೆಗೆ ಶಾಸಕರು ಹಾಗೂ ತಹಶೀಲ್ದಾರ್ ಚರ್ಚಿಸಿದರು. ಅಲ್ಲದೆ ಆ ವಾರ್ಡ್ ಗಳಲ್ಲಿ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡುವ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದರು. ವೇದಿಕೆಯಲ್ಲಿ ಡಿವೈಎಸ್‌ಪಿ ಜಯಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಅಧ್ಯಕ್ಷೆ ಸುಶ್ಮಿತ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಯತಿರಾಜು, ಪಟ್ಟಣ ಪಂಚಾಯಿತಿ ಸದಸ್ಯರು ಗಳಾದ ದೇಚಮ್ಮ ಕಾಳಪ್ಪ, ಎಸ್.ಹೆಚ್. ಮತೀನ್, ಮೊಹಮ್ಮದ್ ರಾಫಿ, ಡಿ.ಪಿ. ರಾಜೇಶ್, ರಂಜಿ ಪೂಣಚ್ಚ, ಸಿ.ಕೆ. ಪ್ರಥ್ವಿನಾಥ್ ಸಭೆಯಲ್ಲಿ ಮಾತನಾಡಿದರು.