ಶನಿವಾರಸಂತೆ, ಜೂ. ೭: ಹಂಡ್ಲಿ ಗಾ. ಪಂ.ಯ ಹಂಡ್ಲಿ ಪ್ರಾ. ಕೃ. ಪ.ಸ.ಸಂ. ವತಿಯಿಂದ ಹಂಡ್ಲಿ ಕೃಷಿ ಪತ್ತಿನ ಕಾರ್ಯವ್ಯಾಪ್ತಿಯ ೧೦ ಮಂದಿ ಕೋವಿಡ್ ಸೋಂಕಿತರಿಗೆ ಅವರ ಮನೆಗಳಿಗೆ ತೆರಳಿ ತಲಾ ರೂ. ೧ ಸಾವಿರ ಧನ ಸಹಾಯ ನೀಡಲಾಯಿತು. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಲ್. ಲಕ್ಷಿö್ಮಶೆಟ್ಟಿ, ನಿರ್ದೇಶಕರುಗಳಾದ ಎಸ್.ಆರ್. ವೀರೇಂದ್ರಕುಮಾರ್, ಎಂ.ಪಿ. ನಾಗೇಶ್, ಕೆ.ಪಿ. ಯಶೋಧ, ಕುಸುಮ, ಎಸ್.ಜೆ. ರವಿಕುಮಾರ್, ಎಸ್.ಎಸ್. ಗಣೇಶ್, ನಿರಂಜನ್, ಜಯರಾಮ್, ಕೆ.ಎಂ. ಮದು, ಕಾರ್ಯನಿರ್ವಾಹಣಾಧಿಕಾರಿ ಎಂ.ಎನ್. ಬಸಪ್ಪ, ಆಡಳಿತ ಮಂಡಳಿ ಸಿಬ್ಬಂದಿಗಳು ಹಾಗೂ ಆಶಾಕಾರ್ಯಕರ್ತೆಯರು ಹಾಜರಿದ್ದರು.