ಸೋಮವಾರಪೇಟೆ, ಜೂ. ೬: ಕೊರೊನಾ ೨ನೇ ಅಲೆಯ ಈ ಸಂಕಷ್ಟದ ದಿನಗಳಲ್ಲಿ ರಾಜ್ಯ ದಾದ್ಯಂತ ಇಂದಿರಾ ಕ್ಯಾಂಟೀನ್ ಗಳ ಮೂಲಕ ಬಡವರ ಹೊಟ್ಟೆ ತಣಿಸುತ್ತಿರುವ ಹಿಂದಿನ ಸಾಲಿನ ಕಾಂಗ್ರೆಸ್ ಸರ್ಕಾರದ ವಿನೂತನ ಯೋಜನೆಗೆ ಸೋಮವಾರಪೇಟೆ ಯಲ್ಲಿ ಕವಡೆ ಕಾಸಿನ ಕಿಮ್ಮತ್ತೂ ನೀಡದ ಹಿನ್ನೆಲೆ ಪಟ್ಟಣದಲ್ಲಿರುವ ಬಡಮಂದಿ ಊಟಕ್ಕಾಗಿ ಪರದಾಡುತ್ತಿದ್ದಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಿ.ಕೆ. ಸುಬ್ಬಯ್ಯ ರಸ್ತೆಗೆ ಹೊಂದಿ ಕೊಂಡಿರುವ ಮಾರ್ಕೆಟ್ ಏರಿಯಾದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆಂದು ಒಂದೆರಡು ಲಕ್ಷ ವ್ಯಯ ಮಾಡಿ ಮಣ್ಣು ಅಗೆದು ತಳಪಾಯ ನಿರ್ಮಿಸಿದ್ದನ್ನು ಹೊರತುಪಡಿಸಿದರೆ ಇತರ ಕಾಮಗಾರಿ ಕೈಗೊಳ್ಳದ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಈ ಭಾಗದ ಬಡವರ ಪಾಲಿಗೆ ಮರೀಚಿಕೆ ಯಾಗಿದೆ!

೨೦೧೭ ರಲ್ಲಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ಬಹುತೇಕ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಆದರೆ ಸೋಮವಾರಪೇಟೆ ಪಟ್ಟಣದಲ್ಲಿ ಮಾತ್ರ ಈ ಕ್ಯಾಂಟೀನ್‌ನ ಕಟ್ಟಡ ಕಾಮಗಾರಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

ರಾಜ್ಯದ ಇತರ ಜಿಲ್ಲೆಗಳಲ್ಲಿ ಕಡಿಮೆ ಹಣಕ್ಕೆ ಊಟ ಒದಗಿ ಸುತ್ತಿರುವ ಇಂದಿರಾ ಕ್ಯಾಂಟೀನ್ ಯೋಜನೆ ಜನಪ್ರಿಯವಾಗಿದ್ದು, ಈಗಿನ ಕೊರೊನಾ ಸಂಕಷ್ಟದ ಸಮಯದಲ್ಲಿ ಬಡವರಿಗೆ ಊಟ ನೀಡುವ ಅನ್ನಛತ್ರದಂತೆ ನೆಲೆನಿಂತಿದೆ.

ಇದೇ ಇಂದಿರಾ ಕ್ಯಾಂಟೀನ್ ಯೋಜನೆಯ ಮೂಲಕ ಕೊರೊನಾ ಸಂಕಷ್ಟದ ಸಮಯದಲ್ಲಿ ಬಡವರಿಗೆ ಊಟ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಬಿಜೆಪಿಯ ನಾಯಕ, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಡವರ ಹೊಟ್ಟೆ ತುಂಬಿಸುತ್ತಿರುವ ಇಂದಿರಾ ಕ್ಯಾಂಟೀನ್, ಸೋಮವಾರಪೇಟೆಯ ಬಡವರ ಪಾಲಿಗೆ ಮಾತ್ರ ಗಗನ ಕುಸುಮವಾಗಿದೆ.

ಇಲ್ಲಿನ ಮಾರ್ಕೆಟ್ ಏರಿಯಾದ ಸಿ.ಕೆ. ಸುಬ್ಬಯ್ಯ ರಸ್ತೆಗೆ ಒತ್ತಿಕೊಂಡAತಿರುವ ಪ.ಪಂ. ವಾಣಿಜ್ಯ ಸಂಕೀರ್ಣದ ಮುಂಭಾಗ ಸುಮಾರು ೮.೫ ಸೆಂಟ್ಸ್ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಅದರಂತೆ ಕ್ಯಾಂಟೀನ್‌ನ ತಳ ಪಾಯದ ಕಾಮಗಾರಿ ಮುಕ್ತಾಯ ಗೊಂಡಿದೆ.

ತಳಪಾಯ ಕಾಮಗಾರಿ ಮುಕ್ತಾಯಗೊಂಡು ವರ್ಷಗಳೇ ಕಳೆದರೂ ಸಹ ಇಂದಿಗೂ ಕಟ್ಟಡದ ಕಾಮಗಾರಿ ಪ್ರಾರಂಭವಾಗಿಲ್ಲ. ಇಂದಿರಾ ಕ್ಯಾಂಟೀನ್‌ಗೆ ಪಟ್ಟಣ ಪಂಚಾಯಿತಿಯಿAದ ೮.೫ ಸೆಂಟ್ಸ್ ಜಾಗವನ್ನು ನೀಡಲಾಗಿದ್ದು, ಕಾಮಗಾರಿ ಮಾತ್ರ ನಿಂತ ನೀರಾಗಿದೆ.

ರಾಜ್ಯಾದ್ಯಂತ ಓರ್ವರೇ ಏಜೆನ್ಸಿ ಪಡೆದಿದ್ದು, ಒಂದು ಭಾಗದಿಂದ ಕ್ಯಾಂಟೀನ್ ಕಾಮಗಾರಿ ಮಾಡಿ ಕೊಂಡು ಬರಲಾಗುತ್ತಿದೆ. ಒಟ್ಟು ೯ ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್ ಕಟ್ಟಡ ಕಾಮಗಾರಿ ನಡೆಯಲಿದೆ ಎಂದು ಅಭಿಯಂತರರು ತಿಳಿಸುತ್ತಿದ್ದಾರೆಯೇ ಹೊರತು, ಆ ಏಜೆನ್ಸಿಯವರನ್ನು ಕರೆದು ಕಾಮಗಾರಿ ಪೂರ್ಣ ಗೊಳಿಸುವಂತೆ ನಿರ್ದೇಶನ ನೀಡಿಲ್ಲ. ಈಗಾಗಲೇ ಪ್ಲಾಟ್‌ಫಾರಂ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಮೋಲ್ಡ್ಗಳನ್ನು ತಂದು ಅಳವಡಿಸಬೇಕಿದೆ ಎಂದು ಅಭಿಯಂತರರು ತಿಳಿಸಿ ೩ ವರ್ಷ ಕಳೆದಿದೆ!

ಕ್ಯಾಂಟೀನ್ ಕಾಮಗಾರಿಗೆ ಸಂಬAಧಿಸಿದAತೆ ಬೆಂಗಳೂರಿನಲ್ಲಿ ಡೈರೆಕ್ಟರ್ ಕಚೇರಿಗೆ ಮಾಹಿತಿ ನೀಡಲಾಗಿದೆ. ಪ್ಲಾಟ್‌ಫಾರಂ ಸಿದ್ಧಗೊಂಡಿದ್ದು, ಮೋಲ್ಡ್ ಗೋಡೆಗಳನ್ನು ಅಳವಡಿಸಬೇಕಿದೆ. ಇದಕ್ಕೆ ಬೃಹತ್ ಯಂತ್ರೋಪಕರಣ, ಕ್ರೇನ್‌ಗಳ ಅವಶ್ಯಕತೆಯಿದ್ದು, ಮಂಗಳೂರಿನ ಕಾಮಗಾರಿ ಮುಗಿದ ನಂತರ ಸೋಮವಾರಪೇಟೆಗೆ ತರುವ ಬಗ್ಗೆ ಏಜೆನ್ಸಿಯವರು ಮಾಹಿತಿ ನೀಡಿದ್ದಾರೆ ಎಂದು ಪ.ಪಂ. ಮುಖ್ಯಾಧಿಕಾರಿಗಳು ಭರವಸೆ ನೀಡಿ, ಮೂರು ವರ್ಷ ಮುಗಿದು ಹೋಗಿದೆ.

ಆದರೆ ಇದುವರೆಗೂ ಇಂದಿರಾ ಕ್ಯಾಂಟೀನ್ ಕಾಮಗಾರಿ ಪ್ರಾರಂಭ ವಾದ ಬಗ್ಗೆ ಸಣ್ಣ ಕುರುಹು ಸಹ ಸಿಗುತ್ತಿಲ್ಲ. ಬಹಳಷ್ಟು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಯಶಸ್ವಿ ಯಾಗಿ ನಡೆಯುತ್ತಿದ್ದು, ಹಸಿದವರಿಗೆ ಕಡಿಮೆ ಖರ್ಚಿನಲ್ಲಿ ಹಸಿವು ತಣಿಸಲಾಗುತ್ತಿದೆ. ಸೋಮವಾರಪೇಟೆ ಯಲ್ಲೂ ಇಂದಿರಾ ಕ್ಯಾಂಟೀನ್‌ಗೆ ಜಾಗ ಗುರುತಿಸಿ, ತಳಪಾಯ ಕಾಮಗಾರಿ ನಿರ್ವಹಿಸಿರುವದನ್ನು ಬಿಟ್ಟರೆ ಬೇರಿನ್ಯಾವ ಪ್ರಗತಿಯೂ ಕಾಣುತ್ತಿಲ್ಲ.

ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾದ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ, ಸಾರ್ವಜನಿಕರ ಅನುಕೂಲಕ್ಕೆ ಒದಗಿಸಬೇಕು. ಈಗಾಗಲೇ ಕಾಮಗಾರಿ ವಿಳಂಬವಾಗಿದ್ದು, ಇನ್ನಾದರೂ ಶೀಘ್ರವಾಗಿ ಕಾಮಗಾರಿ ಪೂರ್ಣ ಗೊಳಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು ಎಂದು ಇಂದಿರಾಗಾAಧಿ ಅಭಿಮಾನಿ ಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಒತ್ತಾಯಿಸಿದ್ದಾರೆ.

ಸದ್ಯಕ್ಕೆ ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಕ್ಯಾಂಟೀನ್‌ಗೆ ಗುರುತಿಸಿರುವ ನಿವೇಶನಕ್ಕೆ ತೆರಳಲು ಮೆಟ್ಟಿಲುಗಳ ನಿರ್ಮಾಣ, ತಳಪಾಯ ಕಾಮಗಾರಿ ಮಾತ್ರ ನಡೆದಿದ್ದು, ಮೋಲ್ಡ್ ಗೋಡೆಗಳ ನಿರ್ಮಾಣ, ಟೇಬಲ್ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿ ಗಳು ಬಾಕಿ ಉಳಿದಿವೆ. ತಕ್ಷಣ ಕಾಮಗಾರಿಯನ್ನು ಪೂರ್ಣ ಗೊಳಿಸಲು ಪ.ಪಂ. ಮುಂದಾಗ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊರೊನಾ ಲಾಕ್‌ಡೌನ್ ಹಿನ್ನೆಲೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಮೂಲಕ ಬಡವರ ಹೊಟ್ಟೆ ತಣಿಸುವ ಯೋಜನೆ ಯನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇಂದಿರಾ ಕ್ಯಾಂಟೀನ್ ಮೂಲಕ ಹಸಿದವರ ಹೊಟ್ಟೆ ತಣಿಸಲಾಗುತ್ತಿದೆ. ಆದರೆ ಸೋಮವಾರಪೇಟೆಯಲ್ಲಿ ಮಾತ್ರ ಹಸಿದವರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬAತಾಗಿದೆ.

ಏಕೆಂದರೆ ಪಟ್ಟಣದಲ್ಲಿ ಹಲವಷ್ಟು ಮಂದಿ ನಿರ್ಗತಿಕರು ಮೂಲೆ ಮೂಲೆಗಳಲ್ಲಿ ನೆಲೆ ಕಂಡುಕೊAಡಿದ್ದು, ಪೊಲೀಸರು, ಸರ್ಕಾರಿ ಅಧಿಕಾರಿಗಳು, ಟಾಸ್ಕ್ ಫೋರ್ಸ್ ಸಮಿತಿಯ ಪದಾಧಿಕಾರಿ ಗಳಿಗೆ ಕಾಣುತ್ತಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರಿಗೆ ಮಾತ್ರ ಇಂತಹ ನಿರ್ಗತಿಕರೂ ಕಾಣುತ್ತಿದ್ದಾರೆ.

ಸರ್ಕಾರದ ವತಿಯಿಂದಲೇ ನಡೆಸಲಾಗುವ ಇಂದಿರಾ ಕ್ಯಾಂಟೀನ್ ಯೋಜನೆಗೆ ಪಟ್ಟಣ ದಲ್ಲಿ ಜೀವ ನೀಡಿ ಎಂದು ಶಾಸಕರು/ ಪ.ಪಂ. ಅಧಿಕಾರಿ ಗಳನ್ನು ಕೇಳುವ ಸಂಘಟನೆ ಗಳು ಇಲ್ಲವಾಗಿವೆ. ದೇಶದ ಪ್ರಥಮ ಮಹಿಳಾ ಪ್ರಧಾನಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಪ್ರಶ್ನಿಸುವ ಧ್ವನಿಯನ್ನೂ ಕಳೆದುಕೊಂಡಿದ್ದಾರೆ. ಸಮಾಜದಲ್ಲಿರುವ ಸ್ವಯಂ ಘೋಷಿತ ಹೋರಾಟದ ಸಂಘಟನೆಗಳು ಮೌನವಾಗಿವೆ. ಬಡವರ ಹಸಿವಿನ ಆಕ್ರಂದನ ಇವರುಗಳಿಗೆ ಕೇಳದಂತಾಗಿದೆ.

-ವಿಜಯ್ ಹಾನಗಲ್