ಚೆಟ್ಟಳ್ಳಿ, ಜೂ. ೬: ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬೆಳ್ಳಾರಳ್ಳಿ, ಹಂಡ್ಲಿ, ಶಿರಂಗಾಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕೊರೊನಾ ಸಂಕಷ್ಟದ ನಡುವೆ ಇದೀಗ ಆಫ್ರಿಕನ್ ಶಂಖಹುಳುವಿನ ಕಾಟ ಮರುಕಳಿಸಿದ್ದು, ಈ ವರ್ಷವೂ ರೈತರನ್ನು ಕಾಡತೊಡಗಿದೆ.

ಮಳೆಗಾಲ ಪ್ರಾರಂಭವಾದೊಡನೆ ಕಾಫಿಗಿಡ, ಕರಿಮೆಣಸು ಬಳ್ಳಿ, ಬಾಳೆ, ಅಡಿಕೆ, ಶುಂಠಿ ಗಿಡದಲ್ಲೆಲ್ಲ ಪುಟ್ಟಪುಟ್ಟ ಶಂಖದAತೆ ನೇತಾಡುತ್ತಾ ನಾಲ್ಕೆöÊದು ವರ್ಷಗಳಿಂದ ರೈತರಿಗೆ ತಲೆನೋವಾಗಿ ಪರಿಣಮಿಸುವ ಈ ಆಫ್ರಿಕನ್ ಶಂಖ ಹುಳುಗಳು ಮತ್ತೆ ಈ ವರ್ಷವೂ ಕಾಣಿಸಿಕೊಂಡಿದೆ. ಮಳೆಗಾಲ ಪ್ರಾರಂಭದ ಹಂತದಲ್ಲೇ ಈ ಹುಳುಗಳ ಬಾಧೆ ಹೆಚ್ಚಾಗತೊಡಗಿದೆ.

ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಾಫಿ ತೋಟಗಳಲ್ಲಿ ಆಫ್ರಿಕಾದ ದೈತ್ಯ ಶಂಖಹುಳು ಕಾಣಿಸಿಕೊಳ್ಳುತ್ತಿದ್ದು, ಇದನ್ನು ಅಖಾಟಿನಾ ಫೂಲಿಕ ಎಂದು ಕರೆಯುತ್ತಾರೆ. ಮೂಲತಃ ಪೂರ್ವ ಆಫ್ರಿಕಾದ ಈಹುಳು ಭಾರತದಲ್ಲಿ ೧೮೪೭ರಲ್ಲಿ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಹೇರಳವಾಗಿ ಕಾಣ ಸಿಗುವ ಈಹುಳು ರಾತ್ರಿ ವೇಳೆಯಲ್ಲಿ ಹೆಚ್ಚು ಚುರುಕಾಗಿದ್ದು, ಹಗಲಿನ ವೇಳೆಯಲ್ಲಿ ಮರಗಳ ಮೇಲೆ ಬಿದ್ದಿರುವ ಮರದ ತುಂಡುಗಳಲ್ಲಿ, ಕಸದ ರಾಶಿಯಲ್ಲಿ ಅಡಗಿಕೊಂಡಿರುತದೆ. ಮಳೆಗಾಲದ ಪ್ರಾರಂಭದಲ್ಲಿ ಇದರ ಕಾರ್ಯಚಟುವಟಿಕೆ ಆರಂಭ ಗೊಳ್ಳುತ್ತದೆ. ಇದು ಪಪ್ಪಾಯ, ರಬ್ಬರ್, ಕೊಕೊ, ಬಾಳೆ, ಅಡಿಕೆ ಸೇರಿದಂತೆ ೫೦೦ಕ್ಕೂ ಹೆಚ್ಚು ವಿವಿಧ ಜಾತಿಯ ಸಸ್ಯಗಳಿಗೆ ಹಾನಿ ಮಾಡುತ್ತದೆ. ಇದರ ಜೀವಿತಾವಧಿ ೩-೫ ವರ್ಷಗಳಾಗಿದ್ದು, ಕೆಲವು ೯ ವರ್ಷಗಳವರೆಗೂ ಜೀವಿಸಿರುವುದೂ ಇವೆ.

ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಿAದ ನಿಯಂತ್ರಣಕ್ಕೆ ಕ್ರಮ

೨೦೧೪ರಿಂದ ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕಿನ ಕೆಲವೆಡೆ ಮಳೆಗಾಲ ಪ್ರಾರಂಭ ವಾದೊಡನೆ ಕಂಡುಬರುವ ಆಫ್ರಿಕಾದ ದೈತ್ಯ ಶಂಖ ಹುಳುವನ್ನು ನಿಯಂತ್ರಿಸಲು ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಕೀಟ ತಜ್ಞರು, ಸಂಶೋಧನಾ ತಂಡದವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರ ಹಾಗೂ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಸಂಶೋಧನೆ ನಡೆಸಿ ಕ್ರಿಮಿನಾಶಕ ಔಷಧಿಯ ಬಳಕೆ ಒಂದು ಕ್ರಮವಾದರೆ, ಕ್ಯಾಚ್ ಅಂಡ್ ಕಿಲ್ ಮುಖಾಂತರ ಶಂಖ ಹುಳುವನ್ನು ನಿಯಂತ್ರಿಸುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಕೀಟ ತಜ್ಞರು.

ಕ್ಯಾಚ್ ಅಂಡ್ ಕಿಲ್

ಶಂಖ ಹುಳುವಿನ ಅಡಗುತಾಣ ಗಳನ್ನು ನಾಶಪಡಿಸುವುದೇ ಇದರ ಮುಖ್ಯಕ್ರಮ. ಪ್ರಾರಂಭಿಕ ಹಂತದಲ್ಲೇ ಈ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವುದು, ಹುಳುಗಳನ್ನು ಆಕರ್ಶಿಸಲು ಪಪ್ಪಾಯ ಕಾಂಡದ ತುಂಡನ್ನು ಇಡುವುದು, ತೇವವಾದ ಗೋಣಿಚೀಲಗಳನ್ನು ಹಾಗೂ ಪಪ್ಪಾಯ ಎಲೆಗಳನ್ನು ಆಕರ್ಷಣಾ ಬಲೆಯಾಗಿ ಉಪಯೋಗಿಸಿ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವುದು, ಹುಳಪೀಡಿತ ಪ್ರದೇಶದಲ್ಲಿ ಚಿಪ್ಪಿನ ಸುಣ್ಣದ ಪುಡಿಯನ್ನು ಹರಡುವುದು, ದರಗುಗಳ ಮೇಲೆ ಮೊಟ್ಟೆ ಇಡುವ ಪ್ರದೇಶಗಳಲ್ಲಿ ಸಹ ಚಿಪ್ಪಿನ ಸುಣ್ಣದ ಪುಡಿಯನ್ನು ಹರಡುವುದು, ೫೦ಲೀ. ನೀರಿನಲ್ಲಿ ೨ ಕೆ.ಜಿ. ಮೈಲುತುತ್ತು ಮತ್ತು ೨ ಕೆ.ಜಿ ತಂಬಾಕಿನ ಸಾರವನ್ನು ಮಿಶ್ರಣ ಮಾಡಿ ಹುಳುಗಳ ಮೇಲೆ ಚಿಮುಕಿಸುವುದು, ೫% ಮೆಟಾಲ್ಡಿಹೈಡ್ ಗುಳಿಗೆಗಳನ್ನು ಎಕರೆಗೆ ಹತ್ತು ಕೆಜಿಯಂತೆ ಗಿಡಗಳ ಸುತ್ತಲು ಹರಡುವುದು.

೧೬೦-೨೪೦ ಗ್ರಾಂ ಲಾರ್ವಿನ್ ಪುಡಿಯನ್ನು ೬೦ಕೆ.ಜಿ ಅಕ್ಕಿ ತೌಡಿನೊಂದಿಗೆ ಮಿಶ್ರಮಾಡಿ ನಂತರ ೬ ಕೆ.ಜಿ ಬೆಲ್ಲವನ್ನು ೫ ಲೀಟರ್ ಬಿಸಿನೀರಿನಲ್ಲಿ ನಿಧಾನವಾಗಿ ಕರಗಿಸಿ ಮತ್ತುಬೆಲ್ಲದ ದ್ರಾವಣಕ್ಕೆ ೩೦೦ಮಿಲಿ ಹರಳೆಣ್ಣೆ ಮಿಶ್ರಣಮಾಡಿ ಈ ಬೆಲ್ಲದ ದ್ರಾವಣವನ್ನು ನಿಧಾನವಾಗಿ ತೌಡುಲಾರ್ವಿನ್ ಮಿಶ್ರಣದೊಂದಿಗೆ ಚೆನ್ನಾಗಿ ಕಲಸಿ ಅಗತ್ಯವಿದ್ದಲ್ಲಿ ನೀರನ್ನು ಸೇರಿಸಿ ಕಲಸಿ ಮಿಶ್ರಣ ತುಂಬಾ ತೇವ ಅಥವಾ ಗಟ್ಟಿಯಾಗದಂತೆ ನೋಡಿಕೊಳ್ಳಬೇಕು. ಒಂದು ಏಕರೆ ಪ್ರದೇಶದಲ್ಲಿ ೧೫೦೦ಗ್ರಾಂ ಮಿಶ್ರಣದ ಉಂಡೆಯನ್ನು ೪೦೦ಜಾಗದಲ್ಲಿ ಪ್ರತೀ ನಾಲ್ಕು ಗಿಡಗಳ ಮಧ್ಯೆ ಇರಿಸುವುದು. ಶಂಖಹುಳುಗಳ ಓಡಾಟ ಕಂಡುಬAದ ಜಾಗ (ಗಿಡಗಳ ಬುಡ) ದಲ್ಲಿ ೫% ಮೆಟಾಲ್ಡಿಹೈಡ್ ಹರಳುಗಳನ್ನು ಹರಡುವುದು.

ಈ ಕ್ಯಾಚ್ ಅಯಿಂಡ್ ಕಿಲ್ ಮುಖಾಂತರ ಸಂಗ್ರಹಿಸಿದ ಹುಳು ಗಳನ್ನು ೭ ಅಡಿ ಆಳ, ೪ ಅಡಿ ಅಗಲ ಮತ್ತು ೪ ಅಡಿ ಉದ್ದದ ಗುಂಡಿಗಳಲ್ಲಿ ತುಂಬಿಸಿ ಪ್ರತಿ ಒಂದು ಅಡಿ ಎತ್ತರದ ಪದರಗಳ ಮೇಲೆ ಚಿಪ್ಪಿನ ಸುಣ್ಣ ಮತ್ತು ಉಪ್ಪನ್ನು ಹರಡುವುದು, ಆರು ಅಡಿಗಳ ನಂತರ ಮತ್ತೆ ಚಿಪ್ಪಿನ ಸುಣ್ಣ ಮತ್ತು ಪೌಡರ್ ಹರಡಿ ಗಂಡಿಯನ್ನು ಮಣ್ಣಿನಿಂದ ಮುಚ್ಚುವುದು. ಹುಳುಗಳನ್ನು ಹಿಡಿಯುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೆ ಕವಚವನ್ನು ಹಾಕಿಕೊಳ್ಳುವುದು, ಈ ಹುಳುಗಳೊಂದಿಗೆ ನೇರ ಸಂಪರ್ಕ ವನ್ನು ತಪ್ಪಿಸುವುದು. ಕ್ಯಾಚ್‌ಅಯಿಂಡ್ ಕಿಲ್ ಮುಖಾಂತರ ಹುಳುಗಳನ್ನು ಗುಂಡಿಯಲ್ಲಿ ತುಂಬಿ ಸಂಪೂರ್ಣ ವಾಗಿ ಮಣ್ಣಿನಿಂದ ಮುಚ್ಚುವುದನ್ನು ಮಾಡಬೇಕಿದೆ. ಶಂಖ ಹುಳುವಿನ ನಿಯಂತ್ರಣಕ್ಕಾಗಿ ಸಂಶೋಧನಾ ಕೇಂದ್ರದಿAದ ನಿಯಂತ್ರಣದ ಕಿಟ್ ಗಳನ್ನು ನೀಡಿದ್ದು, ಕೊರೊನಾದಿಂದ ಕಳೆದ ಬಾರಿಯಿಂದ ಕಿಟ್ ಅನ್ನು ನೀಡಿಲ್ಲವೆಂದು ರೈತರು ಹೇಳುತ್ತಾರೆ.

-ಪುತ್ತರಿರ ಕರುಣ್ ಕಾಳಯ್ಯ