ಸೋಮವಾರಪೇಟೆ, ಜೂ. ೫: ಫೇಸ್‌ಬುಕ್‌ನ ಖಾತೆಯನ್ನು ಹ್ಯಾಕ್ ಮಾಡಿ, ಸ್ನೇಹಿತರ ಸೋಗಿನಲ್ಲಿ ಹಣಕ್ಕೆ ಗಾಳ ಹಾಕುವ ಸಾವಿರಾರು ಘಟನೆಗಳು ಪ್ರತಿನಿತ್ಯ ನಡೆಯುತ್ತಿವೆ. ಇಂತಹ ಹ್ಯಾರ‍್ಸ್ಗಳ ಕಣ್ಣು ಇದೀಗ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಫೇಸ್‌ಬುಕ್ ಖಾತೆಯ ಮೇಲೆ ಬಿದ್ದಿದೆ.

ಶಾಸಕ ರಂಜನ್ ಅವರು ರಾಷ್ಟçಪತಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತೆಗೆಸಿಕೊಂಡಿರುವ ಭಾವಚಿತ್ರವನ್ನು ತಮ್ಮ ಎಂಎಲ್‌ಎ ಅಪ್ಪಚ್ಚು ರಂಜನ್ ಹೆಸರಿನ ಫೇಸ್‌ಬುಕ್ ಖಾತೆಯ ಪ್ರೊಫೈಲ್ ಆಗಿ ಅಳವಡಿಸಿದ್ದು, ಇದರಲ್ಲಿ ಕರ್ನಾಟಕ ವಿಧಾನ ಸಭೆಯ ಸದಸ್ಯ ಎಂದು ನಮೂದಿಸಿದ್ದಾರೆ.

ಈ ಖಾತೆಯನ್ನು ಹ್ಯಾಕ್ ಮಾಡಿರುವ ಖದೀಮರು, ಅವರ ಸ್ನೇಹಿತರ ಪಟ್ಟಿಯಲ್ಲಿರುವ ಕೆಲವರಿಗೆ ಸಂದೇಶ ಕಳುಹಿಸಿ ೩೦ ಸಾವಿರ ಹಣವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಸ್ವತಃ ಶಾಸಕರೇ ಸಂದೇಶ ಕಳುಹಿಸಿ ಹಣ ಕೇಳುತ್ತಿದ್ದಾರಲ್ಲಾ.. ಎಂದು ಸ್ನೇಹಿತರ ಪಟ್ಟಿಯಲ್ಲಿರುವ ಮಂದಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕರ ಅಧಿಕೃತ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್‌ಗಳು ಅದನ್ನು ಪಶ್ಚಿಮಬಂಗಾಳದ ಕರೀಂಪುರದ ಎಂಎಲ್‌ಎ ಎಂದು ಬದಲಾಯಿಸಿದ್ದಾರೆ.

(ಮೊದಲ ಪುಟದಿಂದ) ಶಾಸಕರ ಫೇಸ್‌ಬುಕ್ ಮೆಸೆಂಜರ್‌ನಿAದ ಹಣಕ್ಕಾಗಿ ಬೇಡಿಕೆ ಬರುತ್ತಿರುವುದನ್ನು ಗಮನಿಸಿದ ಮಂದಿ ಶಾಸಕ ರಂಜನ್ ಅವರ ಗಮನಕ್ಕೆ ತಂದಿದ್ದಾರೆ.

ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿದ್ಯಮಾನದ ಬಗ್ಗೆ ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ ಅವರು ಸೈಬರ್ ಕ್ರೆöÊಂ ಪೊಲೀಸರಿಗೆ ದೂರು ನೀಡಿದ್ದಾರೆ. - ವಿಜಯ್ ಹಾನಗಲ್