ಸಮುದ್ರ
ಕಾವೇರಿ: ಕನ್ನಿಕೆ, ನಾವು ವಲಂಬುರಿಯಿAದ ಹೊರಟವರು ಯೋಗ್ಯ ವಾದ ಅನೇಕ ಸ್ಥಳಗಳಲ್ಲೂ, ಕ್ಷೇತ್ರದಲ್ಲೂ ತೀರ್ಥ ಮಹತ್ವವನ್ನು ಉಂಟು ಮಾಡಿಕೊಂಡು ಬಂದೆಯಲ್ಲ ಇದುವೇ ನೋಡು ಸಮುದ್ರ ಬೇಗನೆ ನಮಿಸೋಣ. (ಇಬ್ಬರೂ ಸಮುದ್ರ ರಾಜನಿಗೆ ನಮಿಸುವರು)
ಸಮುದ್ರರಾಜ:
||ರಾಗಃ ಕೇದಾರ||
(ಕಾಂತವೀ ವಸಂತಮಾಸವು-ಎAಬAತೆ)
ಬAದಿಯ ಕಾವೇರಿ ಮಾದೇವಿ | ಡೊಂದಾಯಿ ಕನಕೆಯು ||ಪ|| ನಂದ್ಜಗಕ್ ಮಾಡಿ ಪೊರಟ್ | ಬಂದೆನ್ನ ನೀಡಿಂದ್ ಸೇರಿಯ ||ಅ|ಪ|| ದೇಶತ್ ಮಾಪ್ರಾಣಿಯಡ ದೋಷನಾಶಕ್|| ಈಶೆಯೇ ನೀ ಭಾಷೆಕೊತ್ತಿತ್ ಸಾಸಪಟ್ಟಿಯ ಡಾಶೆತ್Ãತಿಯ ||೧|| ಕೇಳಿನ್Ãಡರಿಂಜಿ ನಾನ್ | ಕೇಳ್ ಕಾತೆನೊ|| ಕಾಲನೇರಕೊತ್ತ್ ಬಂದಿಯ ಶೀಲತ್ ನೀ ಮೂಲತ್ ದೇವಿ ||೨|| ಪತ್ತು ಎಟ್ಟ್ಕೋಟಿ ತೀರ್ಥ | ಸೊತ್ತ್ಯೇಡದ್|| ಸತ್ಯತ್ ನೀಬಾಳ್ ಇಲ್ಲಿ | ಉತ್ತಮಳೆ ಪುತ್ತಳಿಯೆ ನೀ ||೩||
ಸಮುದ್ರ ರಾಜ : ಕಾವೇರಿಯೆ, ಕನ್ನಿಕೆಯೆ ನಿಮಗೆ ಒಳಿತಾಗಲಿ ನೀವಿಬ್ಬರೂ ಲೋಕ ಕಲ್ಯಾಣಕ್ಕಾಗಿ ತೀರ್ಥ ರೂಪದಲ್ಲಿ ಹೊರಟು ಅನೇಕ ಸ್ಥಳಗಳಲ್ಲಿ ತೀರ್ಥ ಮಹತ್ವವನ್ನು ಉಂಟುಮಾಡಿ ನನ್ನ ಬಳಿ ಬಂದುದಕ್ಕೆ ನಾನು ತುಂಬಾ ಸಂತೋಷ ಪಡುವೆ. ನೀವು ಎಲ್ಲೆಲ್ಲಾ ತೀರ್ಥ ಮಹತ್ವವನ್ನು ಕಲ್ಪಿಸಿರುವಿರೊ ಅಂತಹ ಮಹಾತೀರ್ಥ ಪ್ರಾಣಿಗಳ ಇಹಪರಕ್ಕೆ ಒಳಿತಾಗಲಿ, ಕೋಟ್ಯಾನುಕೋಟಿ ತೀರ್ಥ ಈ ಸಮುದ್ರ ಸೇರಿ ನನ್ನ ದಯೆಯಿಂದ ಚನ್ನಾಗಿರುವಂತೆ ನೀವು ಕೂಡ ಇರಿ. ನೀವಿಬ್ಬರೂ ಸಮುದ್ರ ಸೇರಿದಂತೆ ಈ ಪುಣ್ಯ ಸ್ಥಳಕ್ಕೆ ‘‘ಕಾವೇರಿ ಸಮುದ್ರ ಸಂಗಮ’’ ಎಂಬ ಹೆಸರಿದ್ದು, ಇಲ್ಲಿ ಪರ್ವಕಾಲದಲ್ಲಿ, ಭಕ್ತಿಯಲ್ಲಿ ಮಿಂದವರಿಗೆ ವೈಕುಂಠ ಪದವಿ ಸಿಗಲಿ.
ಕಾವೇರಿ : (ಕನಕೆಯು ಕೂಡ ಕೈತೊತ್ತಂಡ್)
||ರಾಗಃ ಕಲ್ಯಾಣಿ||
(ದೇವಿ ಕಾತ್ಯಾಯಿಸಿ ಶುಭ-ಎಂಬAತೆ)
ತೊತ್ತವ ರಾಜ ಸಮುದ್ರನೆ ||ಪ|| ಸತ್ಯತ್ ಚಾಕ್ ವರುಣನೆ ||ಅ|ಪ|| ಯಂಗಿಬ್ಬಡಾಶೆಯೊ| ನೀಂಗ್ಚಿAದೆಣ್ಣಿತ್|| ಬಾಂಗಿತುದಿಚÀತ್ ನೀಕ್ಲೊ||೧|| ನೋಟ್ ಜಗಕೆಲ್ಲ |ಮಾಡಿ ಗುಣ ಯಂಗ|| ನ್Ãಡ ಮರೆಯಿಂದ್ ಬುದ್ಧತ್||೨|| ದೂರತೆ ಚಾಕಿಯ | ಸೇರ್ನಯಂಗಳ|| ತ್Ãರತ್ ರಾಜನೆ ಬೋಜನೆ ||೩|| ಜಲನಿಧಿಯೆ, ರತ್ನಾಕರನೇ, ಸಿಂಧುವೇ, ಸಾಗರ ರಾಜನೆ, ನಿನಗೆ ವಂದನೆ. ನಾವು ಬರುವುದನ್ನು ಕಾದು ಬಸವಳಿದ ನಿನಗೆ ಪರಮೇಶ್ವರನು ಒಳಿತನ್ನು ಮಾಡಲಿ, ಅನೇಕ ಕೋಟಿ ತೀರ್ಥಕ್ಕೆ ರಾಜಾಧಿರಾಜನಾದ ನಿನ್ನ ಬಳಿ ಬಂದ ನಮ್ಮನ್ನು ಸತ್ಯದಲ್ಲೂ, ಧರ್ಮದಲ್ಲೂ ಸಾಕಿ ಸಲಹೆಂದು ಬೇಡುವೆವು.
ಸಮುದ್ರ ರಾಜ : ಕಾವೇರಿಯೇ, ನಿಮ್ಮ ಸ್ತೋತ್ರಕ್ಕೂ ಭಕ್ತಿಗೂ, ಗುಣಕ್ಕೂ ಮೆಚ್ಚಿದೆ. ಆದಿಮಾಯೆ ಆದಂತಹ ನಿನ್ನ ಕೀರ್ತಿಯೂ ಶಾಶ್ವತವಾಗಿದ್ದು, ಸರ್ವ ತೀರ್ಥಕ್ಕೂ ನೀನು ಶ್ರೇಷ್ಠವಾಗಿರು. ಕನ್ನಿಕೆ ಮತ್ತು ನೀನು ಸುಖವಾಗಿ ಬಾಳಿ.
ಕಾಶಿ ಭಾಗೀರಥಿ ಕ್ಷೇತ್ರ
ಯಮುನೆ: ಆಹ ! ಗಂಗಾದೇವಿನ ನೋಡಬೇಕೆಂದು ನಾಲ್ಕೆöÊದು ಬಾರಿ ಬಂದರೂ ಕಾಣ ಸಿಗಲಿಲ್ಲ. ಒಂದು ತಿಂಗಳಿAದ ಅವಳೆಲ್ಲಿಗೆ ಹೋದಳು, ಏನಾದಳು, ಆಶ್ಚರ್ಯ. ನನ್ನನ್ನು ಕಾಣದೆ ಅವಳು ಇರುವವಳಲ್ಲ. ಅವಳನ್ನು ಕಾಣದಿದ್ದರೆ ನನಗೂ ಬೇಸರವೇ. ಏನು ಮಾಡಲಿ ಎಲ್ಲಿ ಹುಡುಕಲಿ.
ಗಂಗೆ : ತುಲಾ ಸಂಕ್ರಮಣಕ್ಕೆ ಮೂಲ ಕಾವೇರಿಗೆ ಹೋದವಳು ಒಂದು ತಿಂಗಳ ಕಾಲ ಅಲ್ಲಿದ್ದು ಅಂದು ಬರುತ್ತಾಳೆ.
ಯಮುನೆ: ಓಹೋ ಅಲ್ಲಿ ಬರುತ್ತಿರುವುದು ಕಾಣಿಸುತ್ತಿದೆ. ಒಳ್ಳೆಯ ದಾಯಿತು. ಎಲ್ಲಿಗೆ ಹೋಗಿದ್ದೆ ಎಂದು ಕೇಳ್ತೇನೆ.
ಅಕ್ಕ ನಮಸ್ಕಾರ : ಮಹಾದೇವಿಯೇ ನಾನು ಕೇಳುತ್ತಿರುವೆ ಎಂದು ಬೇಸರ ಪಡಬೇಡ. ಈಗ ಒಂದು ತಿಂಗಳಾಯಿತಲ್ಲ ನಿನ್ನ ಕಾಣದೆ, ಎಲ್ಲಿಗೆ ಹೋಗಿದ್ದೆ ? ಇದೇನು ಸೀರೆ ಒದ್ದೆಯಾಗಿದೆ, ತುರುಬು ಕಳಚಿಕೊಂಡಿದೆ, ಕಣ್ಣುಗಳು ಕೆಂಪಾಗಿವೆ, ಮಿಂದು ಬಂದೆಯಾ ಹೇಗೆ ? ದಯವಿಟ್ಟು ಹೇಳು.
ಗಂಗೆ: ಯಮುನೆ, ನಿನ್ನನ್ನು ಬಿಟ್ಟು ಹೋದೆನೆಂದು ಕೋಪಿಸಿಕೊಳ್ಳಬೇಡ. ಆದರೆ, ನೀನು ಹೇಳಿದ ಮಾತಿನಲ್ಲಿ ಅನೇಕ ಅರ್ಥಗಳಿವೆ. ನನಗೆ ಗೊತ್ತಿಲ್ಲ ವೆಂದು ಭಾವಿಸಬೇಡ.
ಯಮುನೆ, ನಿನ್ನ ಅನುಮಾನವನ್ನು ಬಿಟ್ಟುಬಿಡು, ಸತ್ಯ ಏನೆಂಬುದನ್ನು ಕೇಳು, ಮಹಾಪಾಪಿಯರ ಪಾಪ ನನಗೆ ಅಂಟಿದ್ದನ್ನು ಕಳೆಯಲು ಪ್ರತಿವರ್ಷ ತುಲಾಸಂಕ್ರಮಣಕ್ಕೆ ಕಾವೇರಿಗೆ ಹೋಗಿ ಒಂದು ತಿಂಗಳ ಕಾಲ ಅಲ್ಲಿದ್ದು, ಆ ಮಹಾದೇವಿಯ ದಯದಿಂದ ಪಾಪ ಕಳೆದುಕೊಂಡು ಬರುತ್ತೇನೆ. ಅದೇ ರೀತಿ ಈ ವರ್ಷವೂ ಹೋಗಿ ಇದೀಗ ಬಂದೆ ನೋಡು. ಆದುದರಿಂದ ಸೀರೆ ಒದ್ದೆಯಾಗಲು ಕಾರಣವಾಯಿತು.
ಯಮುನೆ : ಏನಂದೆ ಅಕ್ಕಾ, ಗಂಗಾ ತೀರ್ಥಕ್ಕೆ ಮಿಗಿಲಾದ ತೀರ್ಥ ಈ ಜಗದಲ್ಲಿದೆಯೇ ? ಶಿವಾ ನಾನು ಏನು ಹೇಳಲಿ.
ಅಕ್ಕಾ ಗಂಗಾ ತೀರ್ಥಕ್ಕೆ ಮಿಗಿಲಾದ ಮಹಾತೀರ್ಥ ಜಗತ್ತಿನಲ್ಲೇ ಇಲ್ಲವೆಂದು ಅರಿತುಕೊ. ದೇವತೆಗಳೂ, ಮನುಷ್ಯರೂ, ಸಕಲ ಜೀವರಾಶಿಗಳು ಕೂಡ ಗಂಗಾತೀರ್ಥ ಮಿಂದು ನಿನ್ನ ದಯೆಯಿಂದ ಮುಕ್ತಿಯನ್ನು ಪಡೆಯುವರು. ಅಂತಹಾ ಮಹಾದೇವಿಯಾದ ನೀನು, ನಿನ್ನ ಪಾಪ ಕಳೆಯಲು ಕಾವೇರಿಗೆ ಹೋಗುವೆ ಎಂದು ಹೇಳುತ್ತಿರುವುದು ಬಹಳ ಆಶ್ಚರ್ಯ ಉಂಟು ಮಾಡುತ್ತಿದೆ. ಆಗ ನಿನಗಿಂತಲೂ ದೊಡ್ಡವಳೊಬ್ಬಳು ಇದ್ದಾಳೆ ಎಂದಾಯಿತು. ಹಾಗಿದ್ದರೆ ಆ ಕಾವೇರಿ ಯಾರು ? ಅವಳು ನಿನಗಿಂತ ದೊಡ್ಡವಳೆನಿಸಲು ಕಾರಣವೇನು ? ದಯವಿಟ್ಟು ಅದೆಲ್ಲವನ್ನೂ ಹೇಳಿಕೊಟ್ಟು ನನ್ನ ಸಂದೇಹ ನಿವಾರಿಸಬೇಕಾಗಿ ಕೇಳಿಕೊಳ್ಳುತ್ತೇನೆ.
ಗಂಗೆ: ಯಮುನೆ, ಅವಳ ಆದಿಮೂಲ ಬಹಳ ದೊಡ್ಡದು ಆದರೂ ಸೂಕ್ಷö್ಮವಾಗಿ ನಿನಗೆ ಹೇಳುತ್ತೇನೆ. ಹಿಂದೆ ಅಮೃತಮಥನ ಕಾಲದಲ್ಲಿ ದೇವಾಸುರ ಯುದ್ಧ ನಡೆದಾಗ ದೇವತೆಗಳಿಗೆ ಒಳಿತಾಗಿಸಲು ಆದಿನಾರಾಯಣ ಮೋಹಿನಿ ಯಾಗಿಯೂ, ಆದಿಮಾಯೆಯಾದ ಲಕ್ಷಿö್ಮ ಲೋಪಾಮುದ್ರೆಯಾಗಿಯೂ ಅವತಾರ ಪಡೆದರು. ಆ ಲೋಪಾಮುದ್ರೆಯನ್ನು ನಾರಾಯಣ ಬ್ರಹ್ಮದೇವನಿಗೆ ಮಗಳಾಗಿ ಕೊಟ್ಟನು. ಕೆಲ ಕಾಲದ ಬಳಿಕ ಬ್ರಹ್ಮದೇವನು ಮಗಳಾದ ಲೋಪಾಮುದ್ರೆಯನ್ನು ಭೂಲೋಕದಲ್ಲಿ ಮಹಾ ತಪಸ್ವಿಯಾದ ಕವೇರನಿಗೆ ದತ್ತು ಪುತ್ರಿಯನ್ನಾಗಿ ಕೊಟ್ಟನು. ಕವೇರನ ಮಗಳಾದುದರಿಂದ ಕಾವೇರಿ ಎಂದು ಹೆಸರಿಸಲಾಯಿತು.
ಯಮುನೆ : ನಿಜ, ಅಂತಹ ಕಾವೇರಿ ತೀರ್ಥರೂಪಿಣಿಯಾಗಿ ಹರಿಯಲು ಕಾರಣವೇನು ?
ಗಂಗೆ: ಹೇಳುವೆ ಕೇಳು, ಆ ಕಾವೇರಿ ನಾರಾಯಣನ ಬಳಿ ಲೋಪಾಮುದ್ರ್ರೆ ಎಂಬ ಹೆಸರಿನೊಂದಿಗಿರುವಾಗ ಗಾಢವಾದ ತಪಸ್ಸು ಮಾಡಿ, ಲೋಕಕಲ್ಯಾಣ ಕ್ಕಾಗಿ ತೀರ್ಥ ರೂಪ ಪಡೆದು ಹೊರಡಲು ನಾರಾಯಣನಿಂದ ವರ ಪಡೆದುದೇ ಅಲ್ಲದೆ ಇತ್ತ ಬ್ರಹ್ಮನಿಂದ ಮತ್ತು ಭೂಲೋಕದಲ್ಲಿ ಕವೇರ ಮುನಿಯಿಂದಲೂ ವರ ಪಡೆದು ಅಲ್ಲಿಂದ ಅಗಸ್ತö್ಯ ಮುನಿಯ ದಯೆಯಿಂದ ಬ್ರಹ್ಮಗಿರಿ ಗುಡ್ಡದಲ್ಲಿ ತೀರ್ಥಾವತಾರ ಪಡೆದು, ಜೀವರಾಶಿಗಳಿಗೆ ಮಹದುಪಕಾರ ಮಾಡುತ್ತಾ ಸಮುದ್ರ ಸೇರಿದಳು. ಅವಳು ತೀರ್ಥೋದ್ಭವ ಪಡೆದಂತಹ ಪುಣ್ಯ ಸ್ಥಳವೇ ಮೂಲ ಕಾವೇರಿ ಎಂಬ ಹೆಸರು ಪಡೆದು ಸಕಲ ಜೀವರಾಶಿಗಳೂ ಆ ತೀರ್ಥಸ್ನಾನ ಮಾಡಿ ಮನಸೋಭೀಷ್ಠ ಹೊಂದುವುದೇ ಅಲ್ಲದೆ ಪಾಪಗಳನ್ನು ಕಳೆದುಕೊಂಡು ಮುಕ್ತಿ ಹೊಂದುತ್ತವೆ.
ಯಮುನೆ : ಒಳ್ಳೆಯದು ನಿನ್ನ ಗಂಗಾಸ್ನಾನ ಮಾಡಿದರೂ ಮುಕ್ತಿ ಹೊಂದಬಹುದು. ಹೀಗಿರುವಾಗ ಅವಳು ನಿನಗಿಂತ ದೊಡ್ಡವಳಾಗಲು ಅವಳ ತೀರ್ಥಕ್ಕೆ ಹೆಚ್ಚಿನ ಮಹತ್ವ ಉಂಟಾಗಲು ಕಾರಣವೇನು ?
ಗಂಗೆ : ಯಮುನೆ, ಈ ರಹಸ್ಯವಾದ ಚರ್ಚೆ ಹಿಂದೊಮ್ಮೆ ನಾರದರಿಂದ ಪರ್ಯವಸಾನಗೊಂಡುದನ್ನು ನಿನಗೆ ಹೇಳುವೆ. ದೇವಗಂಗೆಯಾದAತಹ ನಾನು ಭಗೀರಥನ ತಪಸ್ಸಿಗೆ ಮೆಚ್ಚಿ ಅವನ ವಂಶೋದ್ಧಾರಕ್ಕಾಗಿ ಭೂಲೋಕಕ್ಕೆ ಬಂದೆ. ನನ್ನ ತೀರ್ಥಜಲ ಭಾರೀ ರಭಸದಲ್ಲಿ ಪಾತಾಳದವರೆಗೆ ಈ ಭೂಮಿಯನ್ನು ಭೇದಿಸಿದಂತಹ ದೋಷ ನನ್ನಲ್ಲಿ ನಿಂತಿದೆ. ಕಾವೇರಿ ಒಬ್ಬಳಿಗಾಗಿ ತೀರ್ಥಾವತಾರ ಎತ್ತಲಿಲ್ಲ (ತಾಳಲಿಲ್ಲ). ಸರ್ವಜಿವರಾಶಿಗಳಿಗೆ ಉಪಕಾರ ಮಾಡಬೇಕೆಂದು ಪರೋಪಕಾರ ಮನೋಭಾವನೆಯೊಂದಿಗೆ ನಾರಾಯಣನಿಂದ, ಬ್ರಹ್ಮನಿಂದ ಕೂಡ ತೀರ್ಥಕ್ಕೆ ಬಹಳ ಮಹತ್ವ ಬರುವಂತಹ ವರ ಪಡೆದು ಅವತಾರ ಎತ್ತಿದ್ದಾಳೆ. ನಾನು ವಿಷ್ಣುವಿನ ಪಾದದಲ್ಲಿ ಹುಟ್ಟಿದುದರಿಂದ ನನ್ನ ತಂದೆಯೇ ವಿಷ್ಣು, ತಾಯಿಯೇ ಲಕ್ಷಿö್ಮ, ಚೆನ್ನಾಗಿ ಯೋಚಿಸು. ಅಂತಹ ಲಕ್ಷಿö್ಮಯೇ ಲೋಪಾಮುದ್ರೆಯಾಗಿಯೂ ಕಾವೇರಿಯಾಗಿಯೂ ಅವತಾರ ತಾಳಿರುವಾಗ ಅವಳು ನನಗೇನಾಗಬೇಕು ತಾಯಿ ತಾನೆ, ಹೇಗೆ (ಸತ್ಯ) ಅಂತಹಾ ತಾಯಿಯ ತೀರ್ಥ ಮಿಂದು ಪಾಪ ಕಳೆಯಲು ಬ್ರಹ್ಮ ದೇವನ ಅಪ್ಪಣೆ ಕೂಡ ನನಗಿರುವುದರಿಂದ ವರ್ಷದಲ್ಲಿ ಒಂದು ತಿಂಗಳ ಕಾಲ ತಾಯಿ ಕಾವೇರಿಯ ಬಳಿಗೆ ಹೋಗಿ ಅಲ್ಲಿದ್ದು, ತೀರ್ಥ ಸ್ನಾನ ಮಾಡಿ ಶ್ರೀರಂಗಕ್ಕೆ ಬಂದು ತಂದೆಯ ದರ್ಶನ ಪಡೆದು, ಅವರಿಬ್ಬರ ಅಪ್ಪಣೆ ಪಡೆದು ನನ್ನ ಮೂಲಸ್ಥಾನ ಸೇರುವೆ, ಮಹಾದೇವಿಯಾದ ಕಾವೇರಿಯ ಉದ್ಭವ ಸಂಗತಿಯನ್ನು ನಿನಗೆ ಸೂಕ್ಷö್ಮವಾಗಿ ಹೇಳಿದ್ದಾಯಿತು. ಹೇಳಿದ ನನಗೂ, ಅದನ್ನು ಕೇಳಿದ (ಆಲಿಸಿದ) ನಿನಗೂ ಮುಂದೆ ಕೇಳುವವರಿಗೂ ಒಳಿತು ಉಂಟಾಗಲಿದೆ ಎಂಬದರಲ್ಲಿ ಸಂದೇಹವಿಲ್ಲ.
ಯಮುನೆ : ಅಕ್ಕಾ, ಆದಿ ಮಾಯೆ ಕಾವೇರಿಯ ಪೂರ್ವೋತ್ತರ ಮಹಿಮೆ ಯನ್ನು ಹೇಳಿಕೊಟ್ಟಂತಹ ನಿನಗೆ ಪರಮೇಶ್ವರನೂ ಒಳಿತನ್ನು ಮಾಡಲಿ ಭಕ್ತಿಯಿಂದ ಕೇಳಿದಂತಹ ನನ್ನನ್ನು ಕಾವೇರಿ ಮಹಾತಾಯಿ ಉದ್ಧಾರ ಮಾಡಲಿ, ಮಹಾದೇವಿಗೆ ಸಾವಿರ ಬಾರಿ ಇಲ್ಲಿಂದಲೇ ವಂದಿಸಿದ್ದೆ. ಆದರೆ ಅವಳು ತೀರ್ಥೋದ್ಭವವಾದ ಬ್ರಹ್ಮಗಿರಿ ಎಲ್ಲಿ ಯಾವ ಪ್ರದೇಶದಲ್ಲಿ ? ಎಷ್ಟು ದೂರದಲ್ಲಿ, ಯಾವ ದಿಕ್ಕಿನಲ್ಲಿ ಇದೆ ಎಂಬದನ್ನು ದಯವಿಟ್ಟು ತಿಳಿಸಿಕೊಡೆಂದು ಕೇಳಿಕೊಳ್ಳುತ್ತೇನೆ.
ಗಂಗೆ: ಅದನ್ನು ಕೇಳುವಿಯಾ, ಪಶ್ಚಿಮ ಸಮುದ್ರದ ಬಳಿ ಸಹ್ಯಾದ್ರಿ ಎಂಬ ದೊಡ್ಡ ಬೆಟ್ಟವಿದೆ. ಆ ಬೆಟ್ಟದ ಮಧ್ಯದಲ್ಲಿ ನಾರಾಯಣಧಾತ್ರಿ ವೃಕ್ಷ (ನೆಲ್ಲಿಯ ಮರ) ಅವತಾರ ಎತ್ತಿತು. ಆ ಧಾತ್ರಿ ವೃಕ್ಷವನ್ನು ಬ್ರಹ್ಮದೇವನು ಕಂಡು ಪೂಜಿಸಿದುದರಿಂದಲೂ, ಅಗಸ್ತö್ಯ ಋಷಿ ಬ್ರಹ್ಮನನ್ನು ಬೇಡಿಕೊಂಡಿದು ದರಿಂದಲೂ ಆ ಬೆಟ್ಟಕ್ಕೆ ಬ್ರಹ್ಮಗಿರಿ ಎಂದೂ, ಆ ಪ್ರದೇಶಕ್ಕೆ ಬ್ರಹ್ಮಕ್ಷೇತ್ರವೆಂದೂ ಹೆಸರು ಬಂತು. ಆ ಪ್ರದೇಶದಲ್ಲಿ ನಾರಾಯಣ ದೇವನೂ ಮತ್ಸö್ಯ ಅವತಾರ ತಾಳಿ ಪರಮೇಶ್ವರನನ್ನು ತಪಸ್ಸುಗೈದುದರ ಫಲವಾಗಿ ಈಕಡೆ ಮತ್ಸö್ಯದೇಶ ಎಂಬ ಹೆಸರಾಯಿತು. ಆ ಮತ್ಸö್ಯ ದೇಶದಲ್ಲಿ ಮಹಾವಿಷ್ಣು ಕ್ರೋಢಾವತಾರ ತಾಳಿದುದರಿಂದ ಈ ಕಡೆ ಕ್ರೋಢದೇಶವೆಂಬ ಹೆಸರು ಇದೆ. ಈಚೆಗೆ ಅದು ಕೊಡವ ದೇಶವಾಯಿತು. ಆ ಕ್ರೋಢದೇಶದಲ್ಲಿರುವ ಬ್ರಹ್ಮಗಿರಿಯ ಮಧ್ಯ ಭಾಗವೇ ಕಾವೇರಿ ತೀರ್ಥೋದ್ಭವ ಮೂಲ ಸ್ಥಾನ, ಮಹಾಪುಣ್ಯ ಸ್ಥಳ. ಆ ವಿಶೇಷವಾದ ಸ್ಥಳವನ್ನೂ, ತೀರ್ಥವನ್ನೂ ಜನ್ಮ ತಾಳಿದವರು ಒಮ್ಮೆಯಾದರೂ ನೋಡಿ ನಮಿಸಿ ಭಕ್ತಿಯಿಂದ ಮಿಂದವರಿಗೆ ಪುನರ್ಜನ್ಮವಿಲ್ಲ ಎಂದು ನಂಬು.
ಯಮುನೆ-ಗAಗಾದೇವಿ ಮಹಾತೀರ್ಥವಾದಂತ ಕಾವೇರಿಯ ಮಹತ್ವ ಕೇಳಿದಷ್ಟೂ ಸಂತೋಷ ಹೆಚ್ಚುತ್ತಾ ಬರುತ್ತಿದೆ.
ಆ ಪುಣ್ಯ ಸ್ಥಳದಲ್ಲಿ ಯಾವ-ಯಾವ ತೀರ್ಥಗಳಿವೆ, ಯಾವ ಯಾವ ದೇವತೆಗಳಿದ್ದಾರೆ ತೀರ್ಥಸ್ನಾನದ ವಿಧಾನ ? ಇವುಗಳನ್ನೆಲ್ಲ ಸವಿವರವಾಗಿ ಹೇಳಿಕೊಡು ಎಂದು ಕೇಳಿಕೊಳ್ಳುತ್ತೇನೆ.
ಗಂಗೆ: ಯಮುನೆ, ಒಳ್ಳೆಯ ಮಾತನ್ನು ಹೇಳಿದೆ. ಕಾವೇರಿ ತೀರ್ಥಸ್ನಾನದ ವಿಧಾನವನ್ನು ನಿನಗೆ ಹೇಳಿ ಕೊಡುವುದರಿಂದ ನಿನಗೂ ಮುಂದೆ ಸರ್ವರಿಗೂ ಉಪಕಾರವಾದೀತು. ಆದುದರಿಂದ ಭಕ್ತಿಯಿಂದ ಕೇಳು.
ಯಮುನೆ: ಮಹಾದೇವಿಯೇ, ನನ್ನ ಮೇಲೆ ಪ್ರೀತಿ ಇಟ್ಟು ನೀನು ಹೇಳುವುದರಿಂದ ಭಕ್ತಿಯಿಂದ ಆಲಿಸುವುದು ನನ್ನ ಧರ್ಮ.
ಗಂಗೆ: ಯಮುನೆ, ನಿನ್ನ ಮೇಲಿನ ಪ್ರೀತಿಗಾಗಿಯೂ, ಲೋಕೋಪಕಾರ ಕ್ಕಾಗಿಯೂ ನಾನು ಹೇಳುವೆ ಕೇಳು.
ಯಮುನೆ, ಗೊತ್ತಾಯಿತೆ ಪ್ರತಿವರ್ಷ ತುಲಾಸಂಕ್ರಮಣ ದಿನ ಸೂರ್ಯ ತುಲಾ ರಾಶಿ ಪ್ರವೇಶಿಸುವ ಮುಹೂರ್ತವೇ ತೀರ್ಥೋದ್ಭವವಾಗುವಂತಹ ಪುಣ್ಯಕಾಲ. ಆ ವೇಳೆಗೆ ಸರಿಯಾಗಿ ಅನೇಕ ಕೋಟಿ ತೀರ್ಥದೇವಿಯರು ದೇವಾನುದೇವತೆಗಳೊಂದಿಗೆ ನಾನು ಕೂಡ ಒಂದು ತಿಂಗಳ ತನಕ ಅಲ್ಲಿರುತ್ತೇವೆ. ಭೂಲೋಕದಲ್ಲಿ ಭಕ್ತರಂತೂ ಮೂರು ದಿನಗಳಿಗೆ ಮುಂಚಿತ ವಾಗಿಯೇ ಮಹಾದೇವಿದರ್ಶನಕ್ಕೂ ತೀರ್ಥ ಸ್ನಾನಕ್ಕೂ ಕಾಯುತ್ತಿರುತ್ತಾರೆ. ಮುಹೂರ್ತಕಾಲ ಸ್ನಾನವೂ, ಅಲ್ಲಿಂದ ಒಂದು ತಿಂಗಳ ಕಾಲ ಮಾಡುವಂತಹ ಸ್ನಾನ ಕೂಡ ಬಹಳ ವಿಶೇಷವಾದುದೆಂದು ನಂಬು. ಯಾರು ಕಾವೇರಿ ಸ್ನಾನದ ಆಸೆಯನ್ನು ಹೊಂದಿರುವರೊ ಅಂತವರು ಆ ಸಮಯಕ್ಕೆ ಸರಿಯಾಗಿ ಮನೆಯಿಂದ ಹೊರಟು ಅಷ್ಟಾಕ್ಷರಿ ಜಪ ಮಾಡಿಕೊಂಡು ಮೊದಲು ಭಗಂಡ ಕ್ಷೇತ್ರಕ್ಕೆ ಹೋಗಬೇಕು. ಅಲ್ಲಿ ತ್ರಿಮೂರ್ತಿಗಳಿಗೆ ವಂದಿಸಿ, ಅಲ್ಲಿಂದ ತ್ರಿವೇಣಿ ಸಂಗಮಕ್ಕೆ ಹೋಗಿ ಮೈಮೇಲಿನ ಉಡುಗೆ ಕಳಚದೇ, ತೊಟ್ಟ ಬಟ್ಟೆಯಲ್ಲೇ ಮಿಂದು ಅಲ್ಲಿ ಕಾವೇರಿಯನ್ನು ನಮಿಸಿ, ಅಲ್ಲಿಂದ ತ್ರಿಮೂರ್ತಿ ಕ್ಷೇತ್ರದಲ್ಲಿ ಅಂದು ರಾತ್ರಿ ಕ್ಷೇತ್ರ ಉಪವಾಸ ಕೈಗೊಂಡು ಪೌರಾಣಿಕರಿಂದ ಕಾವೇರಿ ಮಹಾತ್ಮೆöÊಯನ್ನು ಆಲಿಸಬೇಕು. ಮುಂಜಾನೆ ದೇಹಶುದ್ಧಿಯೊಂದಿಗೆ ಕ್ಷೇತ್ರದಲ್ಲಿ ಗೊತ್ತಿರುವ ಒಳ್ಳೆಯ ಪುರೋಹಿತರ ಮೂಲಕ ಸಂಕಲ್ಪ ಹೇಳಿಸಿಕೊಂಡು ಸಂಗಮದಲ್ಲಿ ಸ್ನಾನಕ್ಕೆ ಇಳಿದು, ಕ್ಷೇತ್ರ ದೇವತೆಗಳನ್ನು ಸ್ತುತಿಸಬೇಕು. ಗಣಪತಿಯೇ, ಕ್ಷೇತ್ರ ಪಾಲನೆ, ರುದ್ರನೇ, ಷಣ್ಮುಖನೇ, ವಿಷ್ಣುವೇ, ಪಾರ್ವತಿಯೇ, ಪರಮೇಶ್ವರನೆ, ದುರ್ಗಿಯೇ, ಕಾಳಿಯೆ, ತಕ್ಷಕನೇ ನಿಮಗೆಲ್ಲ ವಂದನೆ, ಕಾವೇರಿ ತೀರ್ಥಫಲಕೊಡಿ. ಕಾವೇರಿಯೆ, ಕನಿಕೆಯೆ, ಸುಜ್ಯೋತಿಯೆ, ನನ್ನ ಸರ್ವ ಪಾಪ ಪರಿಹಾರ ಮಾಡಿ. ಇಹದಲ್ಲಿ ಸುಖ ಹಾಗೂ ಪರದಲ್ಲಿ ಮೋಕ್ಷ ಕೊಡಿ ಎಂದು ನಮಸ್ಕಾರ ಮಾಡಿ (ಬೇಡಿ) ಸ್ನಾನ ಮಾಡಬೇಕು.
(ಮುಂದುವರಿಯುವುದು)
(ಕನ್ನಡ ಅನುವಾದ) ಎಂ. ಇ. ಮಹಮದ್