*ವೀರಾಜಪೇಟೆ, ಜೂ. ೬: ಕೊರೊನಾ ಎರಡನೇ ಅಲೆ ಬಂದ ಸಮಯದಲ್ಲಿ ವೀರಾಜಪೇಟೆಯ ಗೌರಿಕೆರೆ ವಾರ್ಡಿನಲ್ಲಿ ಪ್ರಥಮವಾಗಿ ಸೋಂಕು ಪತ್ತೆಯಾಗಿತ್ತು, ಆದಾದ ಬಳಿಕ ಈ ವಾರ್ಡಿನ ಸುಮಾರು ಐದು ಕುಟುಂಬಗಳಿಗೆ ಸೋಂಕು ತಗುಲಿತ್ತು. ಆ ಮೂಲಕ ಇಡೀ ವೀರಾಜಪೇಟೆ ಪಟ್ಟಣದಲ್ಲಿ ಗೌರಿಕೆರೆ ವಾರ್ಡ್ ರೆಡ್ ಝೋನ್ ಆಗಿತ್ತು.

ಆದರೆ ಪಟ್ಟಣ ಪಂಚಾಯತಿ ಕೊರೊನಾ ತಡೆಗಟ್ಟಲೆಂದೇ ರಚಿಸಿರುವ ಟಾಸ್ಕ್ ಫೋರ್ಸ್ ಹಾಗೂ ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯ ಆದ ಸಿ.ಕೆ ಪೃಥ್ವಿನಾಥ್ ಕಾರ್ಯಕ್ಷಮತೆ ಯಿಂದಾಗಿ ಗೌರಿಕೆರೆ ವಾರ್ಡಿನಲ್ಲಿ ಒಂದೇ ಒಂದು ಸೋಂಕಿತ ಪ್ರಕರಣ ಇಂದು ಇಲ್ಲದಂತಾಗಿದೆ. ಅಲ್ಲದೇ ಕಳೆದ ಮೇ ೭ ರಂದು ಕೊನೆಯ ಸೋಂಕಿನ ಪ್ರಕರಣ ಪತ್ತೆಯಾಗಿದ್ದು ಬಿಟ್ಟರೇ ಒಂದು ತಿಂಗಳಿನಿAದ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗದೇ ಗ್ರೀನ್ ಝೋನ್‌ಗೆ ಬಂದು ನಿಂತಿದೆ.

ಈ ಬಗ್ಗೆ ಗೌರಿಕೆರೆ ವಾರ್ಡಿನ ಪ.ಪಂ ಸದಸ್ಯ ಸಿ.ಕೆ ಪೃಥ್ವಿನಾಥ್ ಪ್ರತಿಕ್ರಿಯಿಸಿ, ನಮ್ಮ ವಾರ್ಡಿನಲ್ಲೇ ವೀರಾಜಪೇಟೆಯಲ್ಲಿ ಮೊದಲ ಸೋಂಕಿತ ಪ್ರಕರಣ ಪತ್ತೆಯಾಗಿತ್ತು, ಸುಮಾರು ಐದು ಕುಟುಂಬದ ಹತ್ತು ಮಂದಿಗೆ ಸೋಂಕು ಪತ್ತೆಯಾಗಿತ್ತು. ಎಲ್ಲರೂ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ಕುಟುಂಬದವರು ಮಾತ್ರ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಇದರಲ್ಲಿ ಟಾಸ್ಕ್ ಫೋರ್ಸ್ ತಂಡದವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ನಮ್ಮ ವಾರ್ಡಿನ ಜನರು ಕೂಡಾ ಹೊರಜಿಲ್ಲೆಯಿಂದ, ರಾಜ್ಯದಿಂದ ಯಾರೇ ಬಂದರೂ ಕೂಡಾ ಮಾಹಿತಿ ನೀಡುತ್ತಿದ್ದರು. ಕೂಡಲೇ ನಮ್ಮ ತಂಡ ಅವರನ್ನು ಸ್ವಾö್ಯಬ್ ಟೆಸ್ಟ್ಗೆ ಕಳುಹಿಸಿ ಹೋಮ್ ಐಸೋಲೇಶನ್‌ನಲ್ಲಿ ಇರುವಂತೆ ಮಾಡುತ್ತಿದ್ದೆವು. ಜನರು ಕೂಡಾ ಪರಿಸ್ಥಿತಿಯ ತೀವ್ರತೆ ಅರ್ಥ ಮಾಡಿ ಕೊಂಡು ಟಾಸ್ಕ್ ಫೋರ್ಸ್ ನವರ ಮಾತು ಪಾಲಿಸುತ್ತಿದ್ದರು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಯವರು ಅಗತ್ಯ ಸ್ಪಂದನೆಯನ್ನು ಕೊಟ್ಟು ಸಹಕರಿಸಿದರು ಹಾಗಾಗಿ ಕಳೆದ ಒಂದು ತಿಂಗಳಿನಿAದ ನಮ್ಮಲ್ಲಿ ಒಂದೇ ಒಂದು ಸೋಂಕಿತ ಪ್ರಕರಣ ಗಳು ಇಲ್ಲ ಎಂದು ತಿಳಿಸಿದರು.