ವಿಶೇಷ ವರದಿ: ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಜೂ. ೬ : ಪ್ರಸ್ತುತದ ವೈಜ್ಞಾನಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ವಿಸ್ಮಯ ಮೂಡಿಸುವಷ್ಟರ ಮಟ್ಟಿಗೆ ಆವಿಷ್ಕಾರಗೊಳ್ಳುತ್ತಿದ್ದು, ಅಂಗೈಯಲ್ಲೆ ಇಡೀ ವಿಶ್ವವನ್ನು ನೋಡಬಹುದಾಗಿದೆ. ೨೧ನೇ ಶತಮಾನದಲ್ಲಿ ದಿನದಿಂದ ದಿನಕ್ಕೆ ಅಚ್ಚರಿಯ ವಿಚಾರಗಳು ಹೊರಹೊಮ್ಮುತ್ತಿವೆ. ಆದರೆ ರಾಜ್ಯದಲ್ಲಿ ಗುಡ್ಡಗಾಡು ಪ್ರದೇಶವಾಗಿದ್ದು, ಭೌಗೋಳಿಕವಾಗಿ ವಿಭಿನ್ನವಾಗಿರುವ ಕೊಡಗು ಜಿಲ್ಲೆ ಮಾತ್ರ ಪರಸ್ಪರ ಸಂಪರ್ಕಕ್ಕಾಗಿ ಪರಿತಪಿಸುವಂತಾಗಿದೆ.

ಬಹುತೇಕ ಇಡೀ ಜಿಲ್ಲೆಯಾದ್ಯಂತ ಸರಕಾರಿ ಸ್ವಾಮ್ಯದ ದೂರವಾಣಿ ವ್ಯವಸ್ಥೆ-ಮೊಬೈಲ್ ಸೇವೆಗಳು ಸಿಗದಂತಾಗುತ್ತಿದ್ದು, ಕೊಡಗಿನ ಜನತೆ ಶಿಲಾಯುಗದ ಪರಿಸ್ಥಿತಿಯನ್ನು ಮೆಲುಕು ಹಾಕುವಂತಾಗಿದೆ. ಇಡೀ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯ ಕಾರ್ಯನಿರ್ವಹಣೆ ದಿನೇ ದಿನೇ ಹದಗೆಡುತ್ತಿದ್ದು, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಈ ತಂತ್ರಜ್ಞಾನದೊAದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಜನಸಾಮಾನ್ಯರ ಪರಿಸ್ಥಿತಿ ಒತ್ತಟ್ಟಿಗಿರಲಿ ಅತ್ಯಂತ ಪ್ರಮುಖವಾಗಿರುವ ಆಡಳಿತ ವ್ಯವಸ್ಥೆಯ ಭಾಗವಾಗಿರುವ ಸರಕಾರಿ ಕಚೇರಿಗಳು, ಪೊಲೀಸ್ ಠಾಣೆಗಳು, ಆಸ್ಪತ್ರೆಗಳು, ಜಿಲ್ಲಾ ಪಂಚಾಯಿತಿ ಕಚೇರಿಗಳು, ತಾಲೂಕು ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು ಈ ರೀತಿಯಾಗಿ ಎಲ್ಲೆಡೆ ದೂರವಾಣಿ ಸಂಪರ್ಕ ಹಾಗೂ ಮೊಬೈಲ್ ಸೇವೆಗೆ ಅಡಚಣೆಯಾಗುತ್ತಿದೆ. ಬಹುತೇಕ ಸ್ಥಿರ ದೂರವಾಣಿಗಳು ನಿಷ್ಕಿçಯಗೊಂಡಿದ್ದರೆ, ಮೊಬೈಲ್ ನೆಟ್‌ವರ್ಕ್ನ ಸಮಸ್ಯೆಯಿಂದಾಗಿ ಇದ್ದೂ ಇಲ್ಲದಂತಾಗಿದೆ. ಈ ಶೋಚನೀಯ ಪರಿಸ್ಥಿತಿಯ ಬಗ್ಗೆ ಯಾರೊಂದಿಗೆ ಮಾತನಾಡುವುದು, ಎಲ್ಲಿಗೆ ಪುಕಾರು ಸಲ್ಲಿಸುವುದು ಎಂಬ ಕುರಿತು ಜನತೆಗೆ ಅರ್ಥವಾಗುತ್ತಿಲ್ಲ.

ಈ ಹಿಂದೆ ಕೊಡಗು ಜಿಲ್ಲೆ ಬಹುತೇಕ ಸರಕಾರಿ ಸ್ವೌಮ್ಯದ ದೂರಸಂಪರ್ಕ ವ್ಯವಸ್ಥೆಯನ್ನು ಒಳಗೊಂಡಿತ್ತು. ನಗರ ಪ್ರದೇಶ ಎಂಬದಕ್ಕಿAತಲೂ ಇಡೀ ಕೊಡಗು ಬಹುತೇಕ ಗ್ರಾಮೀಣ ವಿಭಾಗದಂತೆಯೇ ಈಗಲೂ ಇದೆ. ಇಲ್ಲಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ಒಂದಷ್ಟು ಪ್ರಮುಖ ಪಟ್ಟಣಗಳನ್ನು ಹೊರತುಪಡಿಸಿದರೆ ಕಳೆದ ಕೆಲವಾರು ಸಮಯದಿಂದ ಎಲ್ಲವೂ ಸಮಸ್ಯೆಯಾಗಿಯೇ ಮುಂದುವರಿಯುತ್ತಿದೆ. ಸ್ವತಃ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಜಿ.ಪಂ. ಭವನ, ಜಿಲ್ಲಾ ಆಸ್ಪತ್ರೆ ಸೇರಿದಂತೆ

೩ಐದನೇ ಪುಟಕ್ಕೆ(ವಿಶೇಷ ವರದಿ: ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಜೂ. ೬ : ಪ್ರಸ್ತುತದ ವೈಜ್ಞಾನಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ವಿಸ್ಮಯ ಮೂಡಿಸುವಷ್ಟರ ಮಟ್ಟಿಗೆ ಆವಿಷ್ಕಾರಗೊಳ್ಳುತ್ತಿದ್ದು, ಅಂಗೈಯಲ್ಲೆ ಇಡೀ ವಿಶ್ವವನ್ನು ನೋಡಬಹುದಾಗಿದೆ. ೨೧ನೇ ಶತಮಾನದಲ್ಲಿ ದಿನದಿಂದ ದಿನಕ್ಕೆ ಅಚ್ಚರಿಯ ವಿಚಾರಗಳು ಹೊರಹೊಮ್ಮುತ್ತಿವೆ. ಆದರೆ ರಾಜ್ಯದಲ್ಲಿ ಗುಡ್ಡಗಾಡು ಪ್ರದೇಶವಾಗಿದ್ದು, ಭೌಗೋಳಿಕವಾಗಿ ವಿಭಿನ್ನವಾಗಿರುವ ಕೊಡಗು ಜಿಲ್ಲೆ ಮಾತ್ರ ಪರಸ್ಪರ ಸಂಪರ್ಕಕ್ಕಾಗಿ ಪರಿತಪಿಸುವಂತಾಗಿದೆ.

ಬಹುತೇಕ ಇಡೀ ಜಿಲ್ಲೆಯಾದ್ಯಂತ ಸರಕಾರಿ ಸ್ವಾಮ್ಯದ ದೂರವಾಣಿ ವ್ಯವಸ್ಥೆ-ಮೊಬೈಲ್ ಸೇವೆಗಳು ಸಿಗದಂತಾಗುತ್ತಿದ್ದು, ಕೊಡಗಿನ ಜನತೆ ಶಿಲಾಯುಗದ ಪರಿಸ್ಥಿತಿಯನ್ನು ಮೆಲುಕು ಹಾಕುವಂತಾಗಿದೆ. ಇಡೀ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯ ಕಾರ್ಯನಿರ್ವಹಣೆ ದಿನೇ ದಿನೇ ಹದಗೆಡುತ್ತಿದ್ದು, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಈ ತಂತ್ರಜ್ಞಾನದೊAದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಜನಸಾಮಾನ್ಯರ ಪರಿಸ್ಥಿತಿ ಒತ್ತಟ್ಟಿಗಿರಲಿ ಅತ್ಯಂತ ಪ್ರಮುಖವಾಗಿರುವ ಆಡಳಿತ ವ್ಯವಸ್ಥೆಯ ಭಾಗವಾಗಿರುವ ಸರಕಾರಿ ಕಚೇರಿಗಳು, ಪೊಲೀಸ್ ಠಾಣೆಗಳು, ಆಸ್ಪತ್ರೆಗಳು, ಜಿಲ್ಲಾ ಪಂಚಾಯಿತಿ ಕಚೇರಿಗಳು, ತಾಲೂಕು ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು ಈ ರೀತಿಯಾಗಿ ಎಲ್ಲೆಡೆ ದೂರವಾಣಿ ಸಂಪರ್ಕ ಹಾಗೂ ಮೊಬೈಲ್ ಸೇವೆಗೆ ಅಡಚಣೆಯಾಗುತ್ತಿದೆ. ಬಹುತೇಕ ಸ್ಥಿರ ದೂರವಾಣಿಗಳು ನಿಷ್ಕಿçಯಗೊಂಡಿದ್ದರೆ, ಮೊಬೈಲ್ ನೆಟ್‌ವರ್ಕ್ನ ಸಮಸ್ಯೆಯಿಂದಾಗಿ ಇದ್ದೂ ಇಲ್ಲದಂತಾಗಿದೆ. ಈ ಶೋಚನೀಯ ಪರಿಸ್ಥಿತಿಯ ಬಗ್ಗೆ ಯಾರೊಂದಿಗೆ ಮಾತನಾಡುವುದು, ಎಲ್ಲಿಗೆ ಪುಕಾರು ಸಲ್ಲಿಸುವುದು ಎಂಬ ಕುರಿತು ಜನತೆಗೆ ಅರ್ಥವಾಗುತ್ತಿಲ್ಲ.

ಈ ಹಿಂದೆ ಕೊಡಗು ಜಿಲ್ಲೆ ಬಹುತೇಕ ಸರಕಾರಿ ಸ್ವೌಮ್ಯದ ದೂರಸಂಪರ್ಕ ವ್ಯವಸ್ಥೆಯನ್ನು ಒಳಗೊಂಡಿತ್ತು. ನಗರ ಪ್ರದೇಶ ಎಂಬದಕ್ಕಿAತಲೂ ಇಡೀ ಕೊಡಗು ಬಹುತೇಕ ಗ್ರಾಮೀಣ ವಿಭಾಗದಂತೆಯೇ ಈಗಲೂ ಇದೆ. ಇಲ್ಲಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ಒಂದಷ್ಟು ಪ್ರಮುಖ ಪಟ್ಟಣಗಳನ್ನು ಹೊರತುಪಡಿಸಿದರೆ ಕಳೆದ ಕೆಲವಾರು ಸಮಯದಿಂದ ಎಲ್ಲವೂ ಸಮಸ್ಯೆಯಾಗಿಯೇ ಮುಂದುವರಿಯುತ್ತಿದೆ. ಸ್ವತಃ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಜಿ.ಪಂ. ಭವನ, ಜಿಲ್ಲಾ ಆಸ್ಪತ್ರೆ ಸೇರಿದಂತೆ

೩ಐದನೇ ಪುಟಕ್ಕೆ (ಮೊದಲ ಪುಟದಿಂದ) ಜಿಲ್ಲಾಮಟ್ಟದ ಸರಕಾರಿ ಕಚೇರಿಗಳು, ಜನಪ್ರತಿನಿಧಿಗಳ ಕಚೇರಿಗಳಿಗೂ ಬಿಎಸ್‌ಎನ್‌ಎಲ್‌ನ ಸೇವೆ ಇಲ್ಲದಂತಹ ಸನ್ನಿವೇಶ ಈಗ ಕಂಡುಬರುತ್ತಿದೆ.

ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು, ಅಂಚೆ ಕಚೇರಿ, ಕೃಷಿ ಪತ್ತಿನ ಸಂಘ ಹೀಗೆ ಬಹುತೇಕ ವ್ಯವಸ್ಥೆ ಅವಲಂಭಿತವಾಗಿರುವುದು ಬಿ.ಎಸ್.ಎನ್.ಎಲ್.ಅನ್ನು. ಖಾಸಗಿ ಸಂಸ್ಥೆಗಳು ಇದ್ದರೂ ಇವುಗಳ ಸಂಪರ್ಕ ಜಿಲ್ಲೆಯ ಎಲ್ಲಾ ಭಾಗಕ್ಕೆ ಇಲ್ಲ. ಹಲವಷ್ಟು ಆಸ್ತಿ, ವ್ಯವಸ್ಥೆಗಳನ್ನು ಹೊಂದಿದ್ದರೂ ಬಿ.ಎಸ್.ಎನ್.ಎಲ್. ಇದೀಗ ಅಧಃಪತನ ಕಾಣುತ್ತಿದೆ.

ಈ ಹಿಂದೆ ಸರಕಾರದ ನೇರ ಅಧೀನದಲ್ಲಿ ಬರುತ್ತಿದ್ದ ದೂರಸಂಪರ್ಕ ಇಲಾಖೆ ನಂತರದಲ್ಲಿ ಸರಕಾರಿ ಸ್ವೌಮ್ಯದ ಸಂಸ್ಥೆಯಾಗಿ ಮಾರ್ಪಟ್ಟಿದೆ. ಇಲ್ಲಿಂದ ಸೂಕ್ತ ಆಡಳಿತದೊಂದಿಗೆ ನಿರ್ವಹಣೆಯೂ ಇಲ್ಲದಂತಾಗಿ ಬಿಎಸ್‌ಎನ್‌ಎಲ್ ಅಧಃಪತನ ಕಾಣುತ್ತಿದೆ. ಒಂದೊಮ್ಮೆ ಜಿಲ್ಲೆಯಲ್ಲಿ ಅಂದಾಜು ೮೦ ಸಾವಿರದಿಂದ ೧ ಲಕ್ಷದಷ್ಟು ಸ್ಥಿರ ದೂರವಾಣಿ ಇದ್ದು, ಇದೀಗ ಈ ಸಂಖ್ಯೆ ಸುಮಾರು ೧೦ ಸಾವಿರದ ಒಳಗಿದೆ. ಇರುವುದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

ಪ್ರತಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಪ್ರಮುಖ ಗ್ರಾಮ ಗ್ರಾಮಗಳಲ್ಲಿ ಇದ್ದ ದೂರವಾಣಿ ವಿನಿಮಯ ಕೇಂದ್ರಗಳು ಇದೀಗ ಕಾಡುಪಾಲಾಗಿವೆ. ಅಲ್ಲಲ್ಲಿ ಮೊಬೈಲ್ ಟವರ್‌ಗಳು ನಿರ್ಮಾಣವಾಗಿದ್ದರೂ ಎಲ್ಲೆಡೆ ನೆಟ್‌ವರ್ಕ್ ಸಮಸ್ಯೆ ಸಹಜ ಎಂಬAತಾಗಿದೆ.

ಕೇವಲ ೫೦ಕ್ಕಿಂತ ಕಡಿಮೆ ಸಿಬ್ಬಂದಿ

ಬಿಎಸ್‌ಎನ್‌ಎಲ್ ಸಂಸ್ಥೆ ನಷ್ಟ ಅನುಭವಿಸುತ್ತಿದೆ ಎಂಬ ಕಾರಣಕ್ಕಾಗಿ ಕಳೆದ ವರ್ಷ ಸಿಬ್ಬಂದಿಯನ್ನು ಕಡಿತಗೊಳಿಸಲು ಸರಕಾರ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತಂದಿತ್ತು. ಈ ಸಂದರ್ಭದಲ್ಲಿ ಕೊಡಗಿನಲ್ಲಿ ಸುಮಾರು ೨೫೦ ರಿಂದ ೩೦೦ರಷ್ಟಿದ್ದ ಸಿಬ್ಬಂದಿಗಳ ಪೈಕಿ ೧೫೦ ರಷ್ಟು ಮಂದಿ ನಿವೃತ್ತಿ ಪಡೆದರು. ಬಳಿಕ ವಯೋನಿವೃತ್ತಿ ಮತ್ತಿತರ ಕಾರಣಗಳಿಂದಾಗಿ ಇದೀಗ ಇಡೀ ಜಿಲ್ಲೆಯಲ್ಲಿ ಇರುವುದು ಬೆರಳೆಣಿಕೆಯ ೫೦ಕ್ಕೂ ಕಡಿಮೆ ಸಿಬ್ಬಂದಿಗಳು ಮಾತ್ರ.

ಟೆಲಿಕಾಂ ಡಿಸ್ಟಿçಕ್ಟ್ ಮ್ಯಾನೇಜರ್ (ಟಿಡಿಎಂ) ಇಂಜಿನಿರ‍್ಸ್, ಜೂನಿಯರ್ ಇಂಜಿನಿರ‍್ಸ್ ಇತರ ಸಿಬ್ಬಂದಿ ಹಾಗೂ ಲೈನ್‌ಮೆನ್‌ಗಳೂ ಸೇರಿದಂತೆ ಈಗಿರುವುದು ಒಟ್ಟು ಇಷ್ಟು ಮಂದಿ ಮಾತ್ರ. ಕೆಲವೇ ಕೆಲವು ಲೈನ್‌ಮೆನ್‌ಗಳಿಗೆ ಒಬ್ಬೊಬ್ಬರಿಗೆ ೫ ರಿಂದ ೧೦ ವಿನಿಮಯ ಕೇಂದ್ರಗಳ ಉಸ್ತುವಾರಿ ನೀಡಲಾಗಿದ್ದು, ಇವರು ಇಲ್ಲಿ ಕಾರ್ಯನಿರ್ವಹಿಸುವುದು ಹೇಗೆ ಎಂಬದು ಪ್ರಶ್ನೆಯಾಗಿದೆ.

ವಿದ್ಯುತ್ ಇಲ್ಲದಿದ್ದಲ್ಲಿ ಎಲ್ಲವೂ ಸ್ತಬ್ಧ

ಜಿಲ್ಲೆಯಲ್ಲಿ ವಿದ್ಯುತ್ ನಿಲುಗಡೆಗೊಂಡಲ್ಲಿ ಬಹುತೇಕ ವಿನಿಮಯ ಕೇಂದ್ರಗಳು, ಮೊಬೈಲ್ ಟವರ್‌ಗಳು ತನ್ನಿಂತಾನೆ ಸ್ಥಗಿತಗೊಳ್ಳುತ್ತಿವೆ. ಪ್ರಮುಖ ನಗರ, ಪಟ್ಟಣಗಳಲ್ಲಿ ಕೆಲವು ತಾಸು ಸೇವೆ ಸಿಗಬಹುದಾದರೂ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ನಿಂತ ತಕ್ಷಣದಿಂದಲೇ ಸಂಪರ್ಕ ಕಡಿತವಾಗುತ್ತಿದೆ. ವಿನಿಮಯ ಕೇಂದ್ರ, ಮೊಬೈಲ್ ಟವರ್‌ಗಳಿಗೆ ಜನರೇಟರ್ ಇದ್ದರೂ ಡೀಸೆಲ್ ಇಲ್ಲ-ಡೀಸೆಲ್‌ಗೆ ಹಣ ನೀಡಲಾಗುತ್ತಿಲ್ಲ. ಇದರಿಂದ ಎಲ್ಲವೂ ನಿಷ್ಕಿçಯವಾಗುವುದು ಅನಿವಾರ್ಯವಾಗಿದೆ.

ಎಲ್ಲವೂ ಗೋಜಲು

ಈ ಅವ್ಯವಸ್ಥೆ-ಸಮಸ್ಯೆಗಳ ಬಗ್ಗೆ ಯಾರಿಗೆ ಹೇಳುವುದು ಎಂಬದು ಗೋಜಲಾಗಿದೆ. ಯಾಕೆಂದರೆ ಎಲ್ಲಿಯೂ ಯಾರೂ ಸಂಪರ್ಕಕ್ಕೆ ಸಿಗುವುದಿಲ್ಲ. ಈಗಾಗಲೇ ಹಲವು ಸಮಯದ ಹಿಂದೆ ಲೆಕ್ಕವಿಭಾಗ, ಬಿಲ್ಲಿಂಗ್, ಆಡಳಿತ ನಿರ್ವಹಣೆ ಇತ್ಯಾದಿ ವಿಭಾಗಗಳು ಮೈಸೂರಿಗೆ ವರ್ಗಾವಣೆಗೊಂಡಿವೆ. ಇಲ್ಲಿರುವ ಕಚೇರಿ ಹಾಗೂ ಅಧಿಕಾರಿಗಳು ಕೇವಲ ನಾಮಕಾವಸ್ಥೆಗೆ ಎಂಬAತಾಗಿದೆ.

ಇರುವ ಸಿಬ್ಬಂದಿಗಳಿಗೂ ಸೂಕ್ತವಾಗಿ ವೇತನ ಸಿಗುತ್ತಿಲ್ಲ ಎಂಬ ಆರೋಪವೂ ಇದೆ. ಅಲ್ಲದೆ ಸ್ವಯಂ ನಿವೃತ್ತಿ ಯೋಜನೆ ಬಳಿಕ ನಿರ್ವಹಣೆಗೆ ಹೊರಗುತ್ತಿಗೆ ಆಧಾರದ ಸಿಬ್ಬಂದಿ ಬಳಸಲು ಕೆಲವು ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿದ್ದರೂ, ಇವರಿಗೂ ಸರಿಯಾಗಿ ಹಣಬಿಡುಗಡೆಯಾಗುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದಾಗಿ ಹೊರಗುತ್ತಿಗೆ ಆಧಾರದ ಸಿಬ್ಬಂದಿಗಳೂ ಕಾರ್ಯನಿರ್ವಹಿಸುತ್ತಿಲ್ಲ.

ಕಾಡುಪಾಲಾಗುತ್ತಿರುವ ಆಸ್ತಿ

ಒಂದೊಮ್ಮೆ ಕೊಡಗಿನ ಜನಸಂಖ್ಯೆಗೆ ಹೋಲಿಸಿದರೆ ಇಲ್ಲಿದ್ದಂತಹ ದೂರವಾಣಿ ಸಂಪರ್ಕ ಇತರೆಡೆಗಳಿಗಿಂತ ಹೆಚ್ಚಾಗಿತ್ತು. ಇಲಾಖೆಯೂ ಲಾಭದಲ್ಲಿತ್ತು. ಬಹುತೇಕ ಕಡೆ ಕಟ್ಟಡಗಳು, ವಸತಿಗೃಹಗಳು, ಇನ್ನಿತರ ಸಾಮಗ್ರಿಗಳು ಇದ್ದು ಇದೀಗ ಎಲ್ಲವೂ ಕಾಡುಪಾಲಾಗುತ್ತಿವೆ. ಹಲವಾರು ಕಡೆಗಳಲ್ಲಿ ದಾನಿಗಳೂ ಜಾಗ ಸೇರಿದಂತೆ ಹಲವು ಅಗತ್ಯತೆಗಳನ್ನು ಒದಗಿಸಿದ್ದು, ಇವುಗಳು ಕೂಡ ನಗಣ್ಯವಾಗುತ್ತಿವೆ. ಇದೀಗ ಕೆಲವೆಡೆ ಕಟ್ಟಡಗಳನ್ನು ಬಾಡಿಗೆಗೆ, ಖಾಸಗಿಯವರಿಗೆ ನೀಡಲಾಗುತ್ತಿರುವ ಉದಾಹಣೆಗಳೂ ಕೇಳಿಬಂದಿವೆ.

ನಿರ್ಲಕ್ಷö್ಯವೇ ಕಾರಣ

ಈ ಪರಿಸ್ಥಿತಿಗೆ ಜಿಲ್ಲೆಯನ್ನು ನಿರ್ಲಕ್ಷö್ಯ ಮಾಡಿದ್ದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸೂಕ್ತ ಆಡಳಿತ ಚುಕ್ಕಾಣಿ ಇಲ್ಲದಿರುವುದು, ಸಿಬ್ಬಂದಿಗಳ ಕೊರತೆ, ವೇತನ ಸಿಗದಿರುವುದು ಒಂದು ಕಾರಣವಾಗಿದೆ. ಇದರೊಂದಿಗೆ ಖಾಸಗಿ ಸಂಸ್ಥೆಗಳೊAದಿಗೆ ಪೈಪೋಟಿ ನಡೆಸಲು ಮೇಲ್ಮಟ್ಟದಿಂದ ಸೂಕ್ತ ಸ್ಪಂದನ ದೊರೆತಿಲ್ಲ. ಸೂಕ್ತ ಹಾಗೂ ಅಗತ್ಯ ತರಂಗಾAತರವನ್ನು ಕೊಡಗಿಗೆ ನೀಡಲಾಗುತ್ತಿರಲಿಲ್ಲ. ಇದರಿಂದ ಸಾಂದ್ರತೆ ಕಡಿಮೆಯಾಗಿ ನೆಟ್‌ವರ್ಕ್ ಸಮಸ್ಯೆ ಸಹಜವಾಗಿ ಎದುರಾಗುತ್ತಿದೆ ಎಂದು ಹೇಳಲಾಗುತ್ತಿದೆ.