ಅನಿಲ್ ಎಚ್.ಟಿ. ಮಡಿಕೇರಿ, ಜೂ. ೫: ಮಾತೆ ಕಾವೇರಿಯ ತಪೋಭೂಮಿ ಕೊಡಗು ಜಿಲ್ಲೆ ಯಾವುದೇ ಸಂಕಷ್ಟಕ್ಕೆ ಸಿಲುಕಿದ ಸಂದರ್ಭ ಈ ಪುಣ್ಯಭೂಮಿಗೆ ನೆರವು ನೀಡುವ ಮಹಾನುಭಾವರು ಇದ್ದೇ ಇರುತ್ತಾರೆ. ಪ್ರಕೃತಿ ವಿಕೋಪ ಸಂಭವಿಸಿದಾಗಲೂ ಇದು ನಿರೂಪಿತವಾಗಿದೆ. ಇದೀಗ ಕೋವಿಡ್ ಸಂಕಷ್ಟದ ಸುಳಿಯಲ್ಲಿರುವ ಕೊಡಗಿಗೆ ನೆರವು ನೀಡಲು ಅಮೇರಿಕಾದ ಆರೋಗ್ಯ ಸಚಿವಾಲಯದ ಉನ್ನತ ಹುದ್ದೆಯಲ್ಲಿರುವವರು ಮುಂದಾಗಿದ್ದಾರೆ.ಇದು ಅಂತಿAಥ ನೆರವಲ್ಲ. ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಈ ದಿನಗಳ ಅಗತ್ಯವಾಗಿರುವ ವೈದ್ಯಕೀಯ ಉಪಕರಣಗಳನ್ನು ಅಮೇರಿಕಾದ ಸ್ಕೋಪ್ ಫೌಂಡೇಷನ್ ಮೂಲಕ ಭಾನುವಾರ (ಇಂದು) ನೀಡಲಾಗುತ್ತಿದೆ. ಈ ಉಪಕರಣಗಳ ಮೌಲ್ಯ ೭೦ ಲಕ್ಷ ರೂ.ಕೊಡಗಿಗೆ ಸಂಬAಧವೇ ಇಲ್ಲದಿದ್ದರೂ ಕೊಡಗಿನ ಗೆಳೆಯನ ಮೇಲಿನ ಪ್ರೀತಿಯಿಂದ ಈ ಕೊಡುಗೆಯನ್ನು ಅಮೇರಿಕಾದಿಂದ ನೀಡುತ್ತಿರುವವರು ಡಾ. ವಿವೇಕ್ ಹಲ್ಲಗೆರೆ ಮೂರ್ತಿ. ಹೌದು.. ಅಮೇರಿಕಾದ ಆರೋಗ್ಯ ಸಚಿವಾಲಯದಲ್ಲಿ ಸರ್ಜನ್ ಹುದ್ದೆಯಲ್ಲಿರುವ ಮಂಡ್ಯ ಜಿಲ್ಲೆಯ ಹಲ್ಲಗೆರೆ ಮೂಲದ ಡಾ. ವಿವೇಕ್ ಮೂರ್ತಿ ತಮ್ಮ ನೇತೃತ್ವದಲ್ಲಿ ಸ್ಕೋಪ್ ಫೌಂಡೇಷನ್ ಎಂಬ ಸಾಮಾಜಿಕ ಸೇವಾ ಸಂಸ್ಥೆಯನ್ನು ಹೊಂದಿದ್ದಾರೆ. ಗೆಳೆಯರ ಬಳಗದ ಮೂಲಕ ಸ್ಕೋಪ್ ಫೌಂಡೇಶನ್ ವಿವಿಧೆಡೆ ನೆರವು ನೀಡುತ್ತಿದೆ.

ಇದೀಗ ಕೊಡಗಿನ ವೈದ್ಯಕೀಯ ಅತ್ಯಗತ್ಯೆಯನ್ನು ಗಮನಿಸಿದ ವಿವೇಕ್ ತಂದೆ ಲಕ್ಷಿö್ಮನರಸಿಂಹಮೂರ್ತಿ ಸ್ಕೋಪ್ ಫೌಂಡೇಷನ್ ಮೂಲಕ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ನೀಡುತ್ತಿದ್ದಾರೆ.

೧.೩೦ ಲಕ್ಷದಷ್ಟು ಎನ್ ೯೫ ಮಾಸ್ಕ್, ೭೦ ಆಮ್ಲಜನಕ ಕಾನ್ಸನ್‌ಟ್ರೇಟರ್, ೭೦ ವೈದ್ಯಕೀಯ ಟ್ರಾನ್ಸ್ ಫಾರ್ಮರ್, ೫ ಸಾವಿರ ಫೇಸ್ ಶೀಲ್ಡ್, ೩೦೦ ಸರ್ಜಿಕಲ್ ಮಾಸ್ಕ್, ೪೦೦ ನೈಟ್ರೇಲ್ ಕೊಟೇಡ್ ಗ್ಲೌಸ್, ೨೫ ಥರ್ಮಾಮೀಟರ್, ೧೦ ಸಾವಿರ ವೈಪ್ಸ್, ೨೫ ಪಲ್ಸ್ ಆಕ್ಸಿ ಮೀಟರ್, ೫೦ ಆಮ್ಲಜನಕ ಟ್ಯೂಬ್‌ಗಳು ಮಡಿಕೇರಿಗೆ ಸ್ಕೋಪ್ ಫೌಂಡೇಶನ್ ಮೂಲಕ ದೊರಕುತ್ತಿದೆ.

ಸ್ಕೋಪ್ ಫೌಂಡೇಷನ್, ವಕೀಲ ಎಚ್.ಎಸ್. ಚಂದ್ರಮೌಳಿ ಮೂಲಕ ತಮ್ಮ ನೆರವಿನ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಸಂಪರ್ಕಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ, ವೈದ್ಯಕೀಯ ಉಪಕರಣ ಅಮೇರಿಕಾದಿಂದ ವಿಮಾನದ ಮೂಲಕ ಬೆಂಗಳೂರು ತಲುಪಲು ಬೇಕಾದ ಅಗತ್ಯ ದಾಖಲೆಗಳನ್ನು ಒದಗಿಸಿದರು. ಅಂತೆಯೇ ಅಗತ್ಯತೆಗಳ ಬಗ್ಗೆ ವೈದ್ಯಕೀಯ ಕಾಲೇಜು ಡೀನ್ ಡಾ. ಕಾರ್ಯಪ್ಪ, ಕೋವಿಡ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ

೭೦ ವೈದ್ಯಕೀಯ ಟ್ರಾನ್ಸ್ ಫಾರ್ಮರ್, ೫ ಸಾವಿರ ಫೇಸ್ ಶೀಲ್ಡ್, ೩೦೦ ಸರ್ಜಿಕಲ್ ಮಾಸ್ಕ್, ೪೦೦ ನೈಟ್ರೇಲ್ ಕೊಟೇಡ್ ಗ್ಲೌಸ್, ೨೫ ಥರ್ಮಾಮೀಟರ್, ೧೦ ಸಾವಿರ ವೈಪ್ಸ್, ೨೫ ಪಲ್ಸ್ ಆಕ್ಸಿ ಮೀಟರ್, ೫೦ ಆಮ್ಲಜನಕ ಟ್ಯೂಬ್‌ಗಳು ಮಡಿಕೇರಿಗೆ ಸ್ಕೋಪ್ ಫೌಂಡೇಶನ್ ಮೂಲಕ ದೊರಕುತ್ತಿದೆ.

ಸ್ಕೋಪ್ ಫೌಂಡೇಷನ್, ವಕೀಲ ಎಚ್.ಎಸ್. ಚಂದ್ರಮೌಳಿ ಮೂಲಕ ತಮ್ಮ ನೆರವಿನ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಸಂಪರ್ಕಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ, ವೈದ್ಯಕೀಯ ಉಪಕರಣ ಅಮೇರಿಕಾದಿಂದ ವಿಮಾನದ ಮೂಲಕ ಬೆಂಗಳೂರು ತಲುಪಲು ಬೇಕಾದ ಅಗತ್ಯ ದಾಖಲೆಗಳನ್ನು ಒದಗಿಸಿದರು. ಅಂತೆಯೇ ಅಗತ್ಯತೆಗಳ ಬಗ್ಗೆ ವೈದ್ಯಕೀಯ ಕಾಲೇಜು ಡೀನ್ ಡಾ. ಕಾರ್ಯಪ್ಪ, ಕೋವಿಡ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ

ಜಗತ್ತೇ ಕೊರೊನಾ ಸೋಂಕು ಮುಕ್ತವಾಗುವತ್ತ ನಮ್ಮ ಗುರಿ ಇರಬೇಕು ಎಂದಿದ್ದರು.