ಮಡಿಕೇರಿ, ಜೂ. ೬: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಿಗೆ ಅಗತ್ಯ ಕೋವಿಡ್ ರಕ್ಷಣಾ ಪರಿಕರ ಹಾಗೂ ಕೆಲವು ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ಅಮೇರಿಕಾದಲ್ಲಿರುವ ಕೊಡಗಿನ ದಂಪತಿ ಕೊಡುಗೆಯಾಗಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ನಾಪೋಕ್ಲುವಿನ ವೈದ್ಯರಾದ ವಲ್ಲಂಡ ಚಂಗಪ್ಪ ಅವರು, ಬೋಸ್ಪನ್ನಲ್ಲಿರುವ ಡಾ. ಚೌರೀರ ಭರತ್ ಹಾಗೂ ಪ್ರಮಿತ ದಂಪತಿ ಈ ಕೊಡುಗೆ ನೀಡಿದ್ದಾರೆ. ಇದನ್ನು ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರ, ಲೋಪಾಮುದ್ರ ಕೋವಿಡ್ ಸೆಂಟರ್ ಸೇರಿದಂತೆ ಕೆಲವು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ.
ಈ ದಂಪತಿಯ ಪುತ್ರ ಚೌರೀರ ರುಹಾನ್ ಅವರ ಕಾಳಜಿ ಹಾಗೂ ಆಸಕ್ತಿಯಂತೆ ಈ ಕೊಡುಗೆ ಬಂದಿರುವುದಾಗಿ ಡಾ. ಚಂಗಪ್ಪ ತಿಳಿಸಿದ್ದಾರೆ.