ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ

ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧ನೇ ವಾರ್ಡ್ನ ನಲ್ವತ್ತೇಕ್ರೆ ಹಾಗೂ ಬರಡಿ ಗ್ರಾಮದ ನಿವಾಸಿಗಳಿಗೆ ಆ ಭಾಗದ ಗ್ರಾಮ ಪಂಚಾಯಿತಿ ಸದಸ್ಯ ಶಿವದಾಸ್ ತಮ್ಮ ಸ್ವಂತ ಹಣದಿಂದ ಮನೆ ಮನೆಗಳಿಗೆ ಅಗತ್ಯವಸ್ತುಗಳ ಕಿಟ್‌ಗಳನ್ನು ಕೊರೊನಾ ವಾರಿಯರ್ಸ್ ತಂಡದ ಮೂಲಕ ವಿತರಣೆ ಮಾಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತ ಹಾಲಿನ ಪ್ಯಾಕೆಟ್ ವಿತರಿಸಿದರು.ವೈದ್ಯಕೀಯ ಸಿಬ್ಬಂದಿಗಳಿಗೆ ಆಹಾರ ವಿತರಣೆ

ವೀರಾಜಪೇಟೆ: ವೈದ್ಯಕೀಯ ಸಿಬ್ಬಂದಿಗಳಿಗೆ ವೀರಾಜಪೇಟೆ ನಗರದ ಹಿಂದೂ ಮಲಯಾಳಿ ಅಸೋಸಿಯೇಷನ್ ವತಿಯಿಂದ ಆಹಾರ ಪೊಟ್ಟಣವನ್ನು ವಿತರಿಸಲಾಯಿತು.

ಸಂಸ್ಥೆಯ ವತಿಯಿಂದ ವೀರಾಜಪೇಟೆ ನಗರದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಆಸ್ಪತ್ರೆಯ ಆವರಣದಲಿ ಮುಖ್ಯ ಶಸ್ತçಚಿಕಿತ್ಸಕ ಡಾ. ವಿಶ್ವನಾಥ್ ಸಿಂಪಿ ಅವರ ಸಮ್ಮುಖದಲ್ಲಿ ಆಹಾರ ಪೊಟ್ಟಣಗಳನ್ನು ಸಿಬ್ಬಂದಿಗಳಿಗೆ ವಿತರಿಸಲಾಯಿತು.

ಈ ಸಂದರ್ಭ ಹಿಂದೂ ಮಲಯಾಳಿ ಅಸೋಸಿಯೇಷನ್ ಸಂಸ್ಥೆಯ ಸಲಹೆಗಾರ ವಿನುಪ್‌ಕುಮಾರ್ ಎ., ಉಪಾಧ್ಯಕ್ಷ ಸಿ.ಎಂ. ದಿನೇಶ್, ಮಹಿಳಾ ಘಟಕದ ಅಧ್ಯಕ್ಷೆ ಶೀಭಾ ಪೃಥ್ವಿನಾಥ್, ಕಾರ್ಯದರ್ಶಿ ಸಾಜು, ಜಯೇಶ್, ಸುನಿಲ್, ಎನ್.ವಿ. ಪ್ರವೀಣ್, ಸಿನೋಜ್, ಮಹಿಳಾ ಸದಸ್ಯರು ಸೇರಿದಂತೆ ಸಂಸ್ಥೆಯ ಸದಸ್ಯರು ಹಾಜರಿದ್ದರು.

ಅನ್ನದಾನಕ್ಕೆ ಕೊಡವ ಕಲಾವಿದಂಗಡ ಸಂಘ ನೆರವು

ಮಡಿಕೇರಿ: ಮಡಿಕೇರಿ ಕೋವಿಡ್ ಆಸ್ಪತ್ರೆ ಬಳಿ ರೋಗಿಗಳು, ಅವರ ಸಂಬAಧಿಕರು, ಸಿಬ್ಬಂದಿಗಳು, ಆಂಬ್ಯುಲೆನ್ಸ್ ಚಾಲಕರು ಹಾಗೂ ಕೊರೊನಾ ವಾರಿಯರ್ಸ್ಗೆ ಕಳೆದ ೨೬ ದಿನಗಳಿಂದ ಊಟ, ಉಪಹಾರವನ್ನು ಉಚಿತವಾಗಿ ನೀಡುತ್ತಿರುವ ಕೊಡಗು ರಕ್ಷಣಾ ವೇದಿಕೆಯ ಜನಸೇವೆಗೆ ಕೊಡವ ಕಲಾವಿದಂಗಡ ಸಂಘ ನೆರವು ನೀಡಿದೆ.

ಸಂಘದ ಪ್ರಮುಖರಾದ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಈರಮಂಡ ವಿಜಯ್ ಉತ್ತಯ್ಯ ಹಾಗೂ ಬೊಳ್ಳಜಿರ ಬಿ.ಅಯ್ಯಪ್ಪ ಅವರುಗಳು ಗುರುವಾರ ಮತ್ತು ಶುಕ್ರವಾರ ೨ ದಿನಗಳ ಊಟ, ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಈ ಸಂದರ್ಭ ವೇದಿಕೆಯ ಪ್ರಮುಖರು ಹಾಜರಿದ್ದರು.ಮಾಸ್ಕ್ - ಸ್ಯಾನಿಟೈಸರ್ ವಿತರಣೆ

ವೀರಾಜಪೇಟೆ: ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ (ಗ್ರಾಮೀಣ ಕೂಟ) ಸಂಸ್ಥೆ ವತಿಯಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ, ಟಾಸ್ಕ್ಫೋರ್ಸ್ ಸಮಿತಿಗಳಿಗೆ ಹಾಗೂ ಮಾಧ್ಯಮ ಸಿಬ್ಬಂದಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಲಾಯಿತು.

ಶಾಖಾ ವ್ಯವಸ್ಥಾಪಕ ರಾಕೇಶ್ ಮತ್ತು ಪ್ರತಾಪ್ ಮಾತನಾಡಿ, ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಪೌರ ಕಾರ್ಮಿಕರಿಗೆ ಮಾಸ್ಕ್ - ಸ್ಯಾನಿಟೈಸರ್ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಶಾಖಾ ಸಿಬ್ಬಂದಿಗಳಾದ ಕುಬೇರ್, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.ಯುವ ಮೋರ್ಚಾದಿಂದ ಕಿಟ್ ವಿತರಣೆ

ಸೋಮವಾರಪೇಟೆ: ಮಂಡಲ ಯುವ ಮೋರ್ಚಾ ವತಿಯಿಂದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾದಿಂದಾಗಿ ಸೀಲ್‌ಡೌನ್ ಆಗಿರುವ ೧೦ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಯುವ ಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹೇರೂರು ಅವರು ಒದಗಿಸಿರುವ ಕಿಟ್‌ಗಳನ್ನು ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ರಾಜ್ಯ ಯುವ ಮೋರ್ಚಾ ಸದಸ್ಯ ಮಹೇಶ್ ತಿಮಯ್ಯ, ಚಂದ್ರಶೇಖರ್ ಹೇರೂರು, ತಾಲೂಕು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪದ್ಮನಾಭ್, ಸದಸ್ಯರಾದ ಪೂಣಚ್ಚ ಕೊಡಗರಹಳ್ಳಿ, ಸಂಪ್ರೀತ್, ಭರತ್ ರೈ ಉಪಸ್ಥಿತರಿದ್ದರು.