ಮಡಿಕೇರಿ, ಜೂ. ೬: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ ಮೂಲಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕೊಡಗಿನ ಗಾಯಕರಿಗೆ ಭಾವಗೀತೆಗಳನ್ನು ಹಾಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವವರಿಗೆ ವಯಸ್ಸಿನ ಮಿತಿ ಇರುವುದಿಲ್ಲ.

ಕಾರ್ಯಕ್ರಮದಲ್ಲಿ ಭಾಗವಹಿಸುವರು ತಮ್ಮ ಹೆಸರು, ವಿಳಾಸವನ್ನು ಮತ್ತು ವಾಟ್ಸಪ್ ದೂರವಾಣಿ ಸಂಖ್ಯೆಯನ್ನು ವಾಟ್ಸಪ್ ಮೂಲಕ ಕಳುಹಿಸತಕ್ಕದ್ದು.

ಆಸಕ್ತರು ತಾ. ೧೦ರ ಒಳಗಾಗಿ ಈ ಮೊಬೈಲ್ ಸಂಖ್ಯೆ ೯೪೪೮೩೪೬೨೭೬, ೯೬೬೩೨೫೪೮೨೯ಗೆ ವಾಟ್ಸಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಒಂದು ಗಂಟೆಯ ಕಾರ್ಯಕ್ರಮವಾದ ಕಾರಣ ಸೀಮಿತ ಗಾಯಕರಿಗೆ ಅವಕಾಶವಿದ್ದು, ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.