ಶನಿವಾರಸಂತೆ, ಜೂ. ೬: ದುಂಡಳ್ಳಿ ಗ್ರಾಮ ಪಂಚಾಯಿತಿಯ ಕೋವಿಡ್-೧೯ ಟಾಸ್ಕ್ಫೋರ್ಸ್ ಸಭೆಯನ್ನು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್ ಅವರ ಅಧ್ಯಕ್ಷತೆಯಲ್ಲಿ ಚಿಕ್ಕಕೊಳತ್ತೂರು ವಾರ್ಡ್ನ ಸರಕಾರಿ ಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆಸಲಾಯಿತು.

ಪ್ರಮುಖವಾಗಿ ಶನಿವಾರಸಂತೆ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಅವರು ಹಾಜರಾಗಿ ಕೊರೊನಾ ವಾರಿಯರ್ಸ್ ಯಾವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ವಿವರವಾಗಿ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಮುಖ್ಯ ಕಾರ್ಯಕರ್ತೆ ಸರಸ್ವತಿ ಗ್ರಾಮಗಳ ಆಗುಹೋಗುಗಳ ಬಗ್ಗೆ ವಿವರಿಸಿದರು.

ಪಂಚಾಯಿತಿ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ, ಕಾರ್ಯಕರ್ತೆಯರಿಗೆ ಮತ್ತು ಪಂಚಾಯಿತಿ ಸ್ವಚ್ಛ ಕಾರ್ಮಿಕರಿಗೆ, ಶಾಲಾ ಶಿಕ್ಷಕರಿಗೆ ಆರೋಗ್ಯ ಕಿಟ್‌ಗಳನ್ನು ನೀಡಲಾಯಿತು.

ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್, ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರಾದ ಡಿ.ಪಿ. ಬೋಜಪ್ಪ, ಗಿರೀಶ್, ಭಾಗ್ಯ, ಪದ್ಮನಾಭ ನಾಯಕ್, ಜಾನಕಿ ಸುಬ್ರಮಣ್ಯ, ಸತ್ಯವತಿ ದೇವರಾಜ್, ನಂದಿನಿ ನಾಗರತ್ನ, ಭವಾನಿ ಗುರುಪ್ರಸಾದ್, ಗೋಪಿಕಾ ಹರೀಶ್, ಮನು ಮಹಾಂತೇಶ್, ಎಂ.ಡಿ. ದೇವರಾಜ್ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಪಿ. ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.