
ಸೋಮವಾರಪೇಟೆ, ಜೂ. ೬: ಕಳೆದ ಜನವರಿ ೧೬ ರಂದು ನಾಪತ್ತೆಯಾಗಿದ್ದ ಯುವಕನೋರ್ವ ಕಾಡಿನ ನಡುವೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ತಾಲೂಕಿನ ಕುಮಾರಳ್ಳಿ ಬಾಚಳ್ಳಿ ನಿವಾಸಿ ಮೊಗಪ್ಪ ಹಾಗೂ ಕಮಲ ದಂಪತಿಯ ಪುತ್ರ ಕೃಷಿಕನಾಗಿದ್ದ ದಿನೇಶ್ (ಸುನಿಲ್-೨೭) ಎಂಬಾತನೇ ಆತ್ಮಹತ್ಯೆಗೆ ಶರಣಾದವನು.ಕಳೆದ ಜನವರಿ ೧೬ ರಂದು ಬೆಟ್ಟದಳ್ಳಿಯಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದ ದಿನೇಶ್, ಅಂದು ಸಂಜೆ ಮನೆಗೆ ವಾಪಸ್ ಆಗಿದ್ದ. ನಂತರ ಮೊಬೈಲ್ ಮನೆಯಲ್ಲಿಟ್ಟು ತೆರಳಿದವನು ವಾಪಸ್ ಆಗಿರಲಿಲ್ಲ. ಈ ಬಗ್ಗೆ ಪೋಷಕರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗನ ಆಗಮನಕ್ಕಾಗಿ ಕಾಯುತ್ತಿದ್ದ ಪೋಷಕರಿಗೆ ನಿನ್ನೆ ದಿನ ಮಗನ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿದ್ದು, ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕುಟುಂಬ ಕಣ್ಣೀರಾಕುತ್ತಿದೆ.
ಜ. ೧೬ ರಿಂದಲೂ ದಿನೇಶ್ಗಾಗಿ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ನಿನ್ನೆ ದಿನ ತಮ್ಮ ಮನೆಯಿಂದ ೨ ಕಿ.ಮೀ. ದೂರದಲ್ಲಿರುವ ಕಾಡಿನ ನಡುವೆ ಮೃತದೇಹ ಕಂಡುಬAದಿದೆ. ಪಕ್ಕದ ತೋಟದ ಮಾಲೀಕರಾದ ಸೀತಮ್ಮ ವೀರೇಶ್ ಅವರು, ಜೇನು ಹುಡುಕುತ್ತಾ ಕಾಡಿನೊಳಗೆ ತೆರಳಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.
ವೇಲಿನಿAದ ನೇಣಿಗೆ ಶರಣಾಗಿರುವ ದಿನೇಶ್ನ ಮೃತದೇಹ ಸಂಪೂರ್ಣ ಕೊಳೆತಿದ್ದು, ಪೊಲೀಸರಿಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ ನಂತರ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ರವಾನಿಸಲಾಯಿತು.
(ಮೊದಲ ಪುಟದಿಂದ)
ಮನೆಗಾಗಿ ಮರುಗುತ್ತಿದ್ದ ದಿನೇಶ್: ಕಳೆದ ೨೦೧೮ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ದಿನೇಶ್ ಅವರ ಮನೆಯ ಹಿಂಭಾಗ ಭಾರೀ ಭೂಕುಸಿತವಾಗಿದ್ದು, ಕಷ್ಟಪಟ್ಟು ಕಟ್ಟಿದ್ದ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದವು. ಕೃಷಿ ಮಾಡಿ ಕೂಡಿಟ್ಟಿದ್ದ ಒಂದಿಷ್ಟು ಹಣಕ್ಕೆ ಸಾಲ ಮಾಡಿ ತಂದ ಹಣವನ್ನೂ ಸೇರಿಸಿ ಮನೆ ನಿರ್ಮಿಸಲಾಗಿತ್ತು.
ಇಂತಹ ಕನಸಿನ ಮನೆ ಭೂಕುಸಿತದಿಂದಾಗಿ ಬಿರುಕು ಬಿಟ್ಟು, ಅಪಾಯಕಾರಿ ಸ್ಥಿತಿಗೆ ತಲುಪಿತ್ತು. ಆಡಳಿತ ವರ್ಗವೂ ಪ್ರತಿ ಮಳೆಗಾಲ ಸಂದರ್ಭ ಎಚ್ಚರಿಕೆಯ ನೋಟೀಸ್ ನೀಡುತ್ತಿತ್ತು. ನೆಲೆ ನೀಡಿದ್ದ ಮನೆಯೂ ಸಹ ಅಪಾಯಕಾರಿಯಾದ ಹಿನ್ನೆಲೆ ದಿನೇಶ್ ಬಹಳವಾಗಿ ನೊಂದುಕೊAಡಿದ್ದ. ತನ್ನ ಸ್ನೇಹಿತರು, ಪೋಷಕರೊಂದಿಗೂ ಈ ಬಗ್ಗೆ ನೋವು ತೋಡಿಕೊಂಡಿದ್ದ. ಆತ್ಮಹತ್ಯೆಗೆ ಇದೂ ಒಂದು ಕಾರಣವಾಗಿರಬಹುದು ಎಂದು ಆತನ ಸ್ನೇಹಿತರು ಅಭಿಪ್ರಾಯಿಸುತ್ತಿದ್ದಾರೆ.
ಅವಿವಾಹಿತನಾಗಿದ್ದ ದಿನೇಶ್, ಪೋಷಕರು ಸೇರಿದಂತೆ ಓರ್ವ ಸಹೋದರಿಯನ್ನು ಅಗಲಿದ್ದಾನೆ. ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.