ಚೆಯ್ಯAಡಾಣೆ, ಜೂ. ೬: ವೀರಾಜಪೇಟೆ ಸಮೀಪದ ಕದನೂರು ಗ್ರಾಮ ಪಂಚಾಯಿತಿಗೆ ಒಳಪಡುವ ಚಾಮಿಯಾಲ್ ದೇವಣಗೇರಿ ಮುಖ್ಯ ಸಂಪರ್ಕ ರಸ್ತೆಯಲ್ಲಿರುವ ಸೇತುವೆಯ ಮೇಲ್ಬಾಗದಲ್ಲಿ ಗುಂಡಿಬಿದ್ದಿದ್ದು ವಾಹನ ಚಲಾಯಿಸಲು ಅಸಾಧ್ಯವಾಗಿದೆ. ಅನಾಹುತ ಸಂಭವಿಸುವ ಮುನ್ನ ಸಂಬAಧಿಸಿದ ಅಧಿಕಾರಿಗಳು ಎಚ್ಚೆತ್ತು ಸೇತುವೆಯನ್ನು ದುರಸ್ತಿಪಡಿಸಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ವೀರಾಜಪೇಟೆ ತಾಲೂಕು ಸಮಿತಿಯ ಪದಾಧಿಕಾರಿಗಳಾದ ನಜೀರ್ ಚಾಮಿಯಾಲ್ ಹಾಗೂ ಸೈಫುದ್ದೀನ್ ಚಾಮಿಯಾಲ್ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
-ಸಿ.ಎ.ಅಶ್ರಫ್ ಚೆಯ್ಯಂಡಾಣೆ