ಸೋಮವಾರಪೇಟೆ, ಜೂ. ೪: ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ನ ವತಿಯಿಂದ ಆಯೋಜಿಸಿದ್ದ ವಾಟ್ಸಾಪ್ನಲ್ಲಿ ಕವನ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಣಗಿಲೆ ಗಿಡದ ಹಿನ್ನೆಲೆಯ ಕುರಿತು ಆಯೋಜಿಸಲಾಗಿದ್ದ ಕವನ ಸ್ಪರ್ಧೆಯಲ್ಲಿ ಎಂ.ಎ. ರುಬೀನಾ ಪ್ರಥಮ, ಜಲಾ ಕಾಳಪ್ಪ ದ್ವಿತೀಯ ಹಾಗೂ ಸುಶೀಲ ಹಾನಗಲ್ಲು ತೃತೀಯ ಸ್ಥಾನ ಪಡೆದರು. ವಿಜೇತರಿಗೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್ ಬಹುಮಾನ ವಿತರಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್ ಇದ್ದರು.