ಸೋಮವಾರಪೇಟೆ, ಜೂ. ೪: ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಡಿ.ವಿ. ಉದಯಶಂಕರ್ (೬೪) ಅವರು ಇಂದು ಮುಂಜಾನೆ ಮಡಿಕೇರಿಯಲ್ಲಿ ವಿಧಿವಶರಾದರು.
ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿಯಾಗಿದ್ದ ಅವರು, ವಾರ್ಡ್ ೧ ರಿಂದ ಸ್ಪರ್ಧಿಸಿ ಜಯಗಳಿಸುವ ಮೂಲಕ ಪ.ಪಂ. ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಕೆಲ ತಿಂಗಳಿನಿAದ ಹೃದಯ ಸಂಬAಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ನಿನ್ನೆ ತಡರಾತ್ರಿ ತೀವ್ರವಾಗಿ ಎದೆನೋವು ಕಾಣಿಸಿಕೊಂಡಿದ್ದು, ಸೋಮವಾರಪೇಟೆ ಆಸ್ಪತ್ರೆಗೆ ದಾಖಲಿಸಿ, ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಮೃತರು ಪತ್ನಿ ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಪ.ಪಂ. ಉಪಾಧ್ಯಕ್ಷ ಸಂಜೀವ, ಸದಸ್ಯರುಗಳು, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎ. ಆದಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಮಾಜಿ ಸಚಿವ ಎ. ಮಂಜು ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಉದಯಶಂಕರ್ ಅವರು ಪಕ್ಷಾತೀತವಾಗಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅದರ ಫಲವಾಗಿಯೇ ಭಾರತೀಯ ಜನತಾ ಪಾರ್ಟಿಯ ವಾರ್ಡ್ ಎಂದೇ ಪರಿಗಣಿಲ್ಪಟ್ಟಿದ್ದ ವಾರ್ಡ್ ೧ರಲ್ಲಿ ಕಾಂಗ್ರೆಸ್ನಿAದ ಸ್ಪರ್ಧಿಸಿ ಜಯಗಳಿಸಿದ್ದರು.
ಪ.ಪಂ.ನಲ್ಲಿ ಶೋಕ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ನಳಿನಿ ಗಣೇಶ್ ಅವರು ಮೇ ೧೯ ರಂದು ಕೋವಿಡ್ಗೆ ಬಲಿಯಾಗಿದ್ದು, ಇದಾದ ಕೆಲವೇ ದಿನಗಳಲ್ಲಿ ಉದಯ ಶಂಕರ್ ಅವರೂ ಸಹ ವಿಧಿವಶರಾಗಿರುವ ಹಿನ್ನೆಲೆ ಪ.ಪಂ. ಸಿಬ್ಬಂದಿಗಳಲ್ಲೂ ಶೋಕ ಮಡುಗಟ್ಟಿದೆ.
ಈರ್ವರು ಜನಪ್ರತಿನಿಧಿಗಳೂ ಸಹ ಸಾಮಾಜಿಕವಾಗಿ ಉತ್ತಮ ಹೆಸರು ಗಳಿಸಿದ್ದು, ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಕಚೇರಿ ಸಿಬ್ಬಂದಿಗಳೊAದಿಗೂ ಸೌಜನ್ಯದಿಂದಲೇ ವರ್ತಿಸುತ್ತಿದ್ದರು. ಇವರುಗಳ ಅಕಾಲಿಕ ನಿಧನ ಅತೀವ ನೋವು ತರಿಸಿದೆ ಎಂದು ಸಿಬ್ಬಂದಿಗಳು ಭಾವುಕರಾದರು.