ಕೂಡಿಗೆ, ಜೂ. ೪: ಸೋಮವಾರಪೇಟೆ ತಾಲೂಕಿನ ಕೃಷಿ ಇಲಾಖೆಯ ವತಿಯಿಂದ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ ಪರಿಷ್ಕೃತಗೊಂಡ ವಿವಿಧ ಕಂಪನಿಯ ಮುಸುಕಿನ ಜೋಳದ ಬಿತ್ತನೆ ಬೀಜಗಳು ತಾಲೂಕಿನ ಎಲ್ಲಾ ಸಹಕಾರ ಸಂಘಗಳಲ್ಲಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ದೊರಕಲಿವೆ ಎಂದು ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಕೆ. ಯಾದವ ಬಾಬು ತಿಳಿಸಿದ್ದಾರೆ.
ಮುಸುಕಿನ ಜೋಳದ ತಳಿಗಳಾದ ಗಂಗಾ, ಕಾವೇರಿ, ಜಿ.ಕೆ. ೩೧೬೪, ಸಿಪಿ-೮೧೮, ಪೃನಿಯಾರ್ ೩೦ ಬಿ ೦೭, ಕಾವೇರಿ ೨೫, ಜೆಕೆಎಂಎಚ್ ೪೮೪೮ ತಳಿಗಳನ್ನು ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇರಿಸಿ ಸರಕಾರದ ನಿಯಮಾನುಸಾರವಾಗಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜೋಳವು ಸಾಮಾನ್ಯ ವರ್ಗಕ್ಕೆ ಒಂದು ಕೆ.ಜಿ.ಗೆ ೨೦ ರೂ, ಮತ್ತು ಎಸ್ಸಿಎಸ್ಟಿ ವರ್ಗಕ್ಕೆ ೩೦ ರೂ. ಸಹಾಯಧನದಲ್ಲಿ ವಿತರಣೆ ಕಾರ್ಯ ಮುಂದುವರೆದಿದೆ.
ಹಾಗೆಯೇ ಮುಂದಿನ ಶುಕ್ರವಾರದಿಂದ ಅಧಿಕ ಇಳುವರಿಯ ಭತ್ತಗಳಾದ ತುಂಗಾ, ಬಿಆರ್ ೨೬೫೫ (ಬಾಂಗ್ಲಾರೈಸ್) ತನು, ಐ.ಆರ್. ೬೪, ಮತ್ತು ಅತಿರಾ, ಭತ್ತ ಬೀಜಗಳಾಗಿರುತ್ತವೆ. ಭತ್ತವನ್ನು ಸಾಮಾನ್ಯ ವರ್ಗಕ್ಕೆ ಒಂದು ಕೆ.ಜಿ.ಗೆ ೮ ರೂ. ಮತ್ತು ಎಸ್ಸಿ ಮತ್ತು ಎಸ್ಟಿಗೆ ೧೨ ರೂ. ಸಹಾಯ ಧನದಲ್ಲಿ ವಿತರಣೆ ಮಾಡಲಾಗುವುದು.
ಅಲ್ಪಾವಧಿ ಹೈಬ್ರೀಡ್ ಭತ್ತ ತಳಿಗಳಾದ. ವಿ.ಎನ್.ಆರ್. ೨೨೩೩ ಮತ್ತು ಪಿ.ಎ.ಸಿ - ೮೩೭ ಭತ್ತ ಬೀಜಗಳನ್ನು ವಿತರಣೆ ಮಾಡುವುದು. ಈ ಹೈಬ್ರೀಡ್ ಭತ್ತ ಬೀಜಗಳಲ್ಲಿ ಸಾಮಾನ್ಯ ವರ್ಗಕ್ಕೆ ಒಂದು ಕೆ.ಜಿ.ಗೆ ರೂ. ೫೫. ಮತ್ತು ಎಸ್ಸಿ-ಎಸ್ಟಿ ವರ್ಗಕ್ಕೆ ೮೨ ರೂ.ನಂತೆ ಸಹಾಯಧನದಲ್ಲಿ ವಿತರಿಸಲಾಗುವುದು.
ತಾಲೂಕಿನ ರೈತರು ತಮ್ಮ ಜಮೀನಿನ ಪಹಣೆ, ಆಧಾರ್ ಕಾರ್ಡ್ನ ಜೆರಾಕ್ಸ್ ನೊಂದಿಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಥವಾ ಸಹಾಯಕ ಕೃಷಿ ಅಧಿಕಾರಿಗಳ ಪರವಾನಿಗೆ ಪಡೆದು ಸಹಕಾರ ಸಂಘಗಳ ಮೂಲಕ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಆರ್.ಕೆ. ಯಾದವ್ ಬಾಬು ತಿಳಿಸಿದ್ದಾರೆ.