ಮಡಿಕೇರಿ, ಜೂ, ೪: ಮಡಿಕೇರಿಯ ಐತಿಹಾಸಿಕ ಗದ್ದುಗೆ ಜಾಗ ಅತಿಕ್ರಮಣವನ್ನು ಸಮಗ್ರವಾಗಿ ಪತ್ತೆಹಚ್ಚಲು ಶನಿವಾರ (ಇಂದು) ಸರ್ವೆಕಾರ್ಯ ನಡೆಯಲಿದೆ. ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಮಡಿಕೇರಿ ತಾಲೂಕು ತಹಶೀಲ್ದಾರರು ಸರ್ವೇಯರ್‌ಗಳಿಂದ ಅಧಿಕೃತ ಸರ್ವೆ ಕಾರ್ಯ ನಡೆಸಲಿದ್ದಾರೆ. ಬೆ. ೧೧ ಗಂಟೆಯಿAದ ಈ ಕಾರ್ಯ ಪ್ರಾರಂಭಗೊಳ್ಳಲಿರುವದಾಗಿ ತಿಳಿದುಬಂದಿದೆ. ನಿವೃತ್ತ ಐ.ಎ.ಎಸ್. ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಅವರು ವಕೀಲರಾದ ರವೀಂದ್ರನಾಥ್ ಕಾಮತ್ ಅವರ ಮೂಲಕ ಸಲ್ಲ್ಲಿಸಿದ್ದ ರಿಟ್ ಅರ್ಜಿ ಅನ್ವಯ ನ್ಯಾಯಾಲಯ ಈ ಕ್ರಮಕ್ಕೆ ಮುಂದಾಗಿದೆ. ಸರ್ವೆ ಸಂದರ್ಭ ರಾಜ್ಯ ಮತ್ತು ಕೇಂದ್ರ ಪ್ರಾಚ್ಯ ವಸ್ತು ಇಲಾಖಾ ಅಧಿಕಾರಿಗಳು ಹಾಜರಿರುವಂತೆ ಸೂಚಿಸಲಾಗಿದೆ.

ಗದ್ದುಗೆ ಆಸ್ತಿ ಕೇಂದ್ರ ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ್ದು ಈ ಆಸ್ತಿಯನ್ನು ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಸರ್ವೆ ಬಳಿಕ ಅತಿಕ್ರಮಣಕಾರರನ್ನು ತೆರವುಗೊಳಿಸಿ ಗದ್ದುಗೆ ಪ್ರದೇಶವನ್ನು ಕೇಂದ್ರ ಪ್ರಾಚ್ಯ ವಸ್ತು ಇಲಾಖಾ ಅಧೀನಕ್ಕೆ ಒಪ್ಪಿಸುವಂತೆಯೂ ಕೋರಲಾಗಿತ್ತು. ಈ ಸಂಬAಧ ಮುಂದಿನ ವಿಚಾರಣೆ ಜೂ. ೧೬ ಕ್ಕೆ ನಿಗದಿಯಾಗಿದ್ದು ಅದಕ್ಕೂ ಮುನ್ನ ಸರ್ವೆ ಕಾರ್ಯ ನಡೆಸಿ ವರದಿ ಒಪ್ಪಿಸುವಂತೆ ನ್ಯಾಯಾಲಯ ಸೂಚಿಸಿತ್ತು.