ಮಡಿಕೇರಿ, ಜೂ. ೪: ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ನೀಡುವ ಉದ್ದೇಶದಿಂದ ಖರೀದಿ ಕೇಂದ್ರಗಳ ಮೂಲಕ ರೈತರು ಬೆಳೆದ ಉತ್ತಮ ಗುಣಮಟ್ಟದ ಭತ್ತ ಈಗಾಗಲೇ ಖರೀದಿಯಾಗಿದ್ದು, ನೋಂದಣಿಗೊAಡಿದ್ದ ಕೊಡಗು ಜಿಲ್ಲೆಯ ೫೯೭ ರೈತರ ಪೈಕಿ ೫೮೪ ರೈತರ ಖಾತೆಗೆ ಸರಕಾರದಿಂದ ಹಣ ಸಂದಾಯಗೊAಡಿದೆ. ೧೩ ರೈತರಿಗೆ ತಾಂತ್ರಿಕ ತೊಂದರೆ ಹಿನ್ನೆಲೆ ಹಣ ಬಿಡುಗಡೆಗೆ ಬಾಕಿ ಇದ್ದು, ಒಂದು ವಾರದೊಳಗೆ ಹಣ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಜಿಲ್ಲೆಯ ೮ ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರ, ೩ ಕಡೆಗಳಲ್ಲಿ ನೋಂದಣಿ ಕೇಂದ್ರ ಸ್ಥಾಪಿಸಲಾಗಿತ್ತು. ಒಬ್ಬ ರೈತನಿಂದ ಗರಿಷ್ಠ ೭೫ ಕ್ವಿಂಟಾಲ್ ಭತ್ತ ಖರೀದಿಸಲು ಅವಕಾಶವಿತ್ತು. ಪ್ರಸಕ್ತ ವರ್ಷದಲ್ಲಿ ಖರೀದಿ ಕೇಂದ್ರದಲ್ಲಿ ಒಟ್ಟು ೨೪,೯೨೬.೩೧ ಕ್ವಿಂಟಾಲ್ ಭತ್ತ ಸಂಗ್ರಹಗೊAಡಿದ್ದು, ಜಿಲ್ಲೆಯ ೮ ರೈಸ್ ಮಿಲ್ ಮಾಲೀಕರು ಈಗಾಗಲೇ ಭತ್ತ ಖರೀದಿಸಿದ್ದಾರೆ. ರೈತರು ತಂತ್ರಾAಶದ ಮೂಲಕ ಹೆಸರು ನೋಂದಣಿ ಮಾಡಿಸಿಕೊಂಡು ಭತ್ತ ಖರೀದಿ ಕೇಂದ್ರಕ್ಕೆ ಬೆಳೆ ನೀಡಿದ್ದರು. ನಂತರ ಸರಕಾರದ ನಿಯಮಾನುಸಾರ ಬೆಳೆಯ ಗುಣಮಟ್ಟ ಪರಿಶೀಲಿಸಿ ಭತ್ತವನ್ನು ಖರೀದಿಸಲಾಗಿತ್ತು. ಜಿಲ್ಲೆಯ ಮಡಿಕೇರಿ ಎ.ಪಿ.ಎಂ.ಸಿ, ಕುಶಾಲನಗರದ ಕೆ.ಎಸ್.ಕೆ.ಎಂ.ಎಫ್, ಗೋಣಿಕೊಪ್ಪ ಆರ್.ಎಂ.ಸಿ ಯಾರ್ಡ್ನಲ್ಲಿ ನೋಂದಣಿ ಕೇಂದ್ರ ಸ್ಥಾಪಿಸಲಾಗಿತ್ತು. ಗುಡ್ಡೆಹೊಸೂರುವಿನಲ್ಲಿ ೨ ಸೇರಿದಂತೆ ಪೊನ್ನಂಪೇಟೆ, ಗೋಣಿಕೊಪ್ಪ, ಕೊಡ್ಲಿಪೇಟೆ, ಶನಿವಾರಸಂತೆ, ಗೋಣಿಮರೂರು ಹಾಗೂ ಹೆಬ್ಬಾಲೆಯಲ್ಲಿ ತಲಾ ಒಂದು ಖರೀದಿ ಕೇಂದ್ರ ತೆರೆಯಲಾಗಿತ್ತು.

ಕ್ವಿಂಟಾಲ್‌ಗೆ ರೂ ೧,೮೬೮

ಪ್ರತಿ ಕ್ವಿಂಟಾಲ್‌ಗೆ ರೂ. ೧,೮೬೮ ರಂತೆ ರೈತರ ಖಾತೆಗೆ ಹಣ ಸಂದಾಯವಾಗಿದೆ. ನೋಂದಣಿಯ ಕ್ರಮದಂತೆ ಹಣ ಬಿಡುಗಡೆಯಾಗಿದ್ದು, ಮೇ ಅಂತ್ಯದಲ್ಲಿ ಹಣ ರೈತರ ಖಾತೆ ಸೇರಿದೆ. ಉಳಿದವರ ಹಣ ಬಿಡುಗಡೆ ಪ್ರಕ್ರಿಯೆ ಮುಗಿದಿದ್ದು, ತಾಂತ್ರಿಕ ಸಮಸ್ಯೆ ಪರಿಹಾರವಾಗಿದೆ. ಒಂದು ವಾರದಲ್ಲಿ ಹಣ ಸಂದಾಯವಾಗುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ‘ಶಕ್ತಿ’ಗೆ ತಿಳಿಸಿದ್ದಾರೆ.

ಕಳೆದ ವರ್ಷ ೫೮೩ ರೈತರು ಖರೀದಿ ಕೇಂದ್ರಕ್ಕೆ ಬೆಳೆ ನೀಡಿದ್ದರು, ಈ ಬಾರಿ ಅಲ್ಪಪ್ರಮಾಣದಲ್ಲಿ ಖರೀದಿ ಹೆಚ್ಚಾಗಿವೆ. ಅದಲ್ಲದೆ ಈ ಬಾರಿ ಉತ್ತಮ ಬೆಲೆ ಕೂಡ ದೊರಕಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಹಣ ಸಂದಾಯಕ್ಕೆ ತಾಂತ್ರಿಕ ಸಮಸ್ಯೆ

ಈಗಾಗಲೇ ಭತ್ತ ಖರೀದಿ ಕೇಂದ್ರಕ್ಕೆ ಬೆಳೆ ನೀಡಿದ ೫೯೭ ರೈತರ ಪೈಕಿ ೫೮೪ ರೈತರಿಗೆ ಹಣ ಸಂದಾಯವಾಗಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ೧೩ ರೈತರಿಗೆ ಹಣ ಬಿಡುಗಡೆಗೆ ಬಾಕಿ ಇದೆ. ಇದಕ್ಕೆ ರೈತರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡುವಾಗ ಮಾಡಿದ ತಪ್ಪು ಹಾಗೂ ಬ್ಯಾಂಕ್‌ಗೆ ಆಧಾರ್ ಕಾರ್ಡ್ ಜೋಡಣೆ ಮಾಡದಿರುವುದು ಕಾರಣವಾಗಿದೆ.

ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಅದಲ್ಲದೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಜೋಡಿಸಬೇಕು. ಈ ತಪ್ಪಿನಿಂದ ೧೩ ರೈತರಿಗೆ ಬೆಂಬಲ ಬೆಲೆ ಬಿಡುಗಡೆಯಾಗಿಲ್ಲ. ಈಗಾಗಲೇ ಈ ಸಮಸ್ಯೆ ಬಗ್ಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡಿ, ಹಣ ಸಂದಾಯಕ್ಕೆ ಬಾಕಿ ಇರುವ ರೈತರ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದೆ.

-ಹೆಚ್.ಜೆ. ರಾಕೇಶ್