ಅಂಬಾಸಿಡರ್ ಕಾರು... ತಮಿಳು ನಾಡಿನ ಗ್ರಾಮಕ್ಕೆ ಮಡಿಕೇರಿಯಿಂದ ಸಾಗುತ್ತಲೇ ಇದ್ದೆ. ರಾತ್ರಿಯೂ ಡ್ರೆöÊವ್ ಮಾಡಿಕೊಂಡು ಬಂದಿದ್ದೆ. ಬೆಳಕಾಗುವಾಗ ನೋಡುತ್ತೇನೆ.. ಕಾರ್ ಹಿಂದೆ... ಬದಿಯಲ್ಲೆಲ್ಲಾ ರಾಶಿ ರಾಶಿ ನೊಣಗಳು ಮುತ್ತಿಕೊಂಡಿವೆ. ಕಾರಿನ ಗ್ಲಾಸ್ಗಳಲ್ಲಿಯೂ ನೊಣದ ಹಿಂಡು... ದಪ್ಪದಪ್ಪನೆ ಗಾತ್ರದ ನೊಣಗಳು ಇನ್ನೇನು ಕಾರಿನ ಗ್ಲಾಸ್ ಒಡೆದು ಕಾರ್ನ ಒಳಗಡೆ ನುಗ್ಗಬಹುದೆಂದು ಗಾಬರಿಯಾಗಿತ್ತು.. ಯಾಕೆ ಹೀಗೆ ನೊಣಗಳು ಬಂದಿವೆ ಎಂದು ಯೋಚಿಸುತ್ತಿದ್ದಂತೆಯೇ ಗೊತ್ತಾಯಿತು.
ನನ್ನ ಕಾರ್ ಹಿಂಬದಿ ಸೀಟ್ನಲ್ಲಿ ಹೆಣವಿತ್ತು... ಆ ಹೆಣ ಕೊಳೆತು ಹೋಗಿತ್ತು. ಕೊಳೆತ ವಾಸನೆ ಗ್ರಹಿಸಿದ ನೊಣಗಳು ಹೆಣದ ಮೇಲೆ ಮುತ್ತಿಡಲು ನನ್ನ ಕಾರ್ ಮುತ್ತಿದ್ದವು. ವಾಸನೆಯಿಂದಾಗಿ ಕರ್ಚೀಫನ್ನು ಮೂಗಿಗೆ ಹಾಕಿಕೊಂಡು ಬಿಟ್ಟಿದ್ದೆ. ಕರ್ಚೀಫ್ ತೆಗೆದರೆ ಕೆಟ್ಟ ವಾಸನೆ ಮೂಗಿಗೆ ಹೊಡೆಯುವಂತಿತ್ತು..
ಹೀಗೆAದು.. ಮಡಿಕೇರಿಯ ಕೃಷ್ಣ ಭವನ ಹೊಟೇಲ್ನಲ್ಲಿ ಕಾಫಿ ಹೀರುತ್ತಾ ಹೇಳುತ್ತಿದ್ದರು ಹಸನ್.. ಜೀನತ್ ಹಸನ್.
‘ಶಕ್ತಿ’ಯ ರವಿವಾರದ ರಸಮಂಜರಿ ಪುರವಣಿಗೆ ಹಲವು ವರ್ಷಗಳ ಹಿಂದೆ ಮಡಿಕೇರಿಯ ಜೀನತ್ ಹಸನ್ ಬಗ್ಗೆ ಶವ ಸಾಗಿಸುವ ಹಸನ್ ಎಂಬ ವಿಶಿಷ್ಟ ಜೀವಿ ಎಂಬ ವಿಶೇಷ ವರದಿ ಬರೆದು ಹೊರಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡಿದೆ. ಹಸನ್ ತನ್ನ ಕಥೆ ಹೇಳುತ್ತಿದ್ದಂತೆಯೇ ಕಾಫಿ ಹೋಗಲಿ, ಕುಡಿದಿದ್ದ ನೀರು ಕೂಡ ಹೊಟ್ಟೆಯಿಂದ ಹೊರಬರುವಂತಾಯಿತು. ಇನ್ನು ಅದನ್ನು ಅನುಭವಿಸಿದ್ದ ಹಸನ್ ಪರಿಸ್ಥಿತಿ ಹೇಗಿರಬೇಡ..? ಹಸನ್ ಇದ್ದದ್ದೇ ಹೀಗೆ.. ಜೀವಿಸಿದ್ದೇ ಹೀಗೆ..
.....
ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣ ಆಗ ಖಾಸಗಿ ಬಸ್ ನಿಲ್ದಾಣ ಮಾತ್ರವಲ್ಲ.. ಮಡಿಕೇರಿಯ ಹೃದಯ ಸ್ಥಾನ ಕೂಡ ಹೌದು. ಇಲ್ಲಿನ ಬಾಡಿಗೆ ಕಾರ್ ಸ್ಟಾಂಡ್ನಲ್ಲಿ ಕಪ್ಪು, ಹಳದಿ ಬಣ್ಣದ ಅಂಬಾಸಿಡರ್ ಕಾರ್ನೊಂದಿಗೆ ನಿಂತಿರುತ್ತಿದ್ದ ಮುಗ್ಧ ಜೀವಿಯೇ ಹಸನ್.. ಕಾರಿನ ಮೇಲ್ಭದಿಯಲ್ಲಿ ಜೀನತ್ ಎಂದು ದೊಡ್ಡದಾಗಿ ಬರೆಸಿಕೊಂಡಿದ್ದರು. ತನ್ನ ಪ್ರೀತಿಯ ತಂಗಿ ಜೀನತ್ ಹೆಸರನ್ನೇ ಹಸನ್ ಕಾರ್ಗೆ ಕೂಡ ಇರಿಸಿದ್ದರು. ಹೀಗಾಗಿ ಕಾರ್ ಹೆಸರಿನೊಂದಿಗೆ ಜೀನತ್ ಹಸನ್ ಎಂದೇ ಇವರೂ ಗುರುತಿಸಿಕೊಂಡರು.
ಮಡಿಕೇರಿ ಮಾತ್ರವಲ್ಲ, ಕೊಡಗಿನಲ್ಲಿಯೇ ಹೆಣ ಸಾಗಿಸುವ ವಾಹನವನ್ನು ಬಾಡಿಗೆಗೆ ನೀಡಿದ್ದು ಇದೇ ಹಸನ್.. ಹೆಣ ಸಾಗಿಸಲು ಯಾರೂ ಮುಂದೆ ಬಾರದಿದ್ದ ಕಾಲದಲ್ಲಿ, ಹೆಣ ಎಂದರೆ ಭಯಬೀತರಾಗುತ್ತಿದ್ದ ದಿನಗಳಲ್ಲಿ ತನ್ನ ಅಂಬಾಸಿಡರ್ ಕಾರ್ನ್ನೇ ಹೆಣ ಸಾಗಿಸಲು ಬಳಸಿ, ಸಾವನ್ನಪ್ಪಿದವರ ಕುಟುಂಬಕ್ಕೆ ವರದಾನವಾಗಿದ್ದವರು ಈ ಜೀನತ್ ಹಸನ್. ಜೀನತ್ ಕಾರ್ನ ಹಿಂಬದಿ ಸೀಟ್ ಈ ರೀತಿ ಸಾವನ್ನಪ್ಪಿದವರಿಗೆ ಕೊನೇ ಪಯಣದ ಹಾಸಿಗೆಯಂತಿರುತ್ತಿತ್ತು. ಸುಮಾರು ೪೦ ವರ್ಷಗಳ ಕಾಲ ಈ ರೀತಿ ಜೀನತ್ ಹಸನ್ ಸಾಗಿಸಿರಬಹುದಾದ ಮೃತದೇಹಗಳ ಸಂಖ್ಯೆ ೨೫೦೦ ಮೀರಿದೆ. ಯಾರೂ ನಂಬದ ರೀತಿಯಲ್ಲಿ ಜೀನತ್ ಹಸನ್ ಕೊನೆ ಉಸಿರೆಳೆದವರ ದೇಹಗಳನ್ನು ಕೊಂಡೊಯ್ದಿದ್ದಾರೆ. ಕೆಲವು ವರ್ಷಗಳಿಂದ ಅಂಬ್ಯುಲೆನ್ಸ್ ವಾಹನಗಳನ್ನು ಖರೀದಿಸಿ ಪುತ್ರನನ್ನೂ ಇದೇ ವೃತ್ತಿಯಲ್ಲಿ ಹಸನ್ ಸಕ್ರಿಯಗೊಳಿಸಿದ್ದರು.
ಅಂದೊಮ್ಮೆ ಆಂಧ್ರದ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದರು.. ಲೇಪಾಕ್ಷಿಗೆ ಮೃತದೇಹ ಕೊಂಡೊಯ್ದೆ.. ಎರಡು ರಾತ್ರಿ ಪಯಣಿಸಿ ಅವರ ಗ್ರಾಮ ತಲುಪಿದೆ. ನನ್ನ ಕಾರ್ ನೋಡುತ್ತಿದ್ದಂತೆಯೇ ನೂರಾರು ಜನ ಕಾರ್ ಸುತ್ತಾ ಬಂದು ನಿಂತರು. ಕೆಟ್ಟ ಭಾಷೆಯಲ್ಲಿ ಬೈಯತೊಡಗಿದರು.. ನಿಮ್ಮೂರಿನಲ್ಲಿ ನಮ್ಮ ಗ್ರಾಮದ ವ್ಯಕ್ತಿಯನ್ನು ಕೊಂದಿದ್ದೀರಿ.. ನಿನ್ನನ್ನು ಬಿಡುವುದಿಲ್ಲ ಎಂದು ಕಲ್ಲು ತೆಗೆದುಕೊಂಡು ಕಾರ್ಗೆ ಗುದ್ದತೊಡಗಿದರು. ಏನ್ ಮಾಡುವುದೆಂದು ಗೊತ್ತಾಗಲಿಲ್ಲ.. ಇಲ್ಲಿದ್ದರೆ ಕಾರ್ ಗ್ಲಾಸ್ ಒಡೆದು ನನ್ನನ್ನೂ ಕೊಂದೇ ಬಿಡುತ್ತಾರೆ ಎಂದೆನ್ನಿಸಿತು. ಕೂಡಲೇ ರಿವರ್ಸ್ ಗೇರ್ಗೆ ಹಾಕಿದವನೆ ಹಿಂದೆ ನೋಡಿಕೊಂಡೇ ೧ ಕಿಲೋ ಮೀಟರ್ ದೂರ ಬಂದು ಬಿಟ್ಟೆ. ಊರಿನ ಗಡಿಯಲ್ಲಿ ಹಿಂಬದಿ ಸೀಟ್ನಲ್ಲಿದ್ದ ಮೃತದೇಹ ಇರಿಸಿ ಕಾದೆ. ಅಷ್ಟು ಹೊತ್ತಿಗೆ ಕಾರ್ ಹಿಂಬಾಲಿಸಿಕೊAಡು ಗ್ರಾಮಸ್ಥರು ಓಡಿಕೊಂಡು ಬಂದರು. ಸದ್ಯ ಇನ್ನು ಈ ಹೆಣವನ್ನು ಅವರೇ ಪಡೆದುಕೊಳ್ಳುತ್ತಾರೆ ಎಂದು ನಂಬಿ ವಾಪಾಸ್ ಬಂದೆ. ಮಡಿಕೇರಿಯಿಂದ ಅಲ್ಲಿಗೆ ಹೋಗಲು ೫-೬ ಸಾವಿರ ಖರ್ಚಾಗಿತ್ತು. ಒಂದು ರೂಪಾಯಿಯೂ ಸಿಕ್ಕದೆ ಭಾರೀ ನಷ್ಟವಾಯಿತು. ಆದರೆ ಮೃತವ್ಯಕ್ತಿಯ ದೇಹವನ್ನು ಅವರೂರಿಗೆ ತಲುಪಿಸಿದ ತೃಪ್ತಿ ನನ್ನದಾಯಿತು ಎಂದು ಹಸನ್ ಅಂದಿನ ದಿನ ಹೇಳಿಕೊಂಡಿದ್ದರು.
ಮತ್ತೊAದು ಘಟನೆಯಲ್ಲಿ ಉತ್ತರ ಕರ್ನಾಟಕದ ವ್ಯಕ್ತಿಯೋರ್ವನ ಮೃತದೇಹವನ್ನು ಮಡಿಕೇರಿಯಿಂದ ಆ ಊರಿಗೆ ಕಾರಿನಲ್ಲಿ ಹಸನ್ ಸಾಗಿಸಿದ್ದರು. ಆದರೆ ಊರು ತಲುಪಿದ ಮೇಲೆ ಅವರ ಮನೆಯವರು, ಊರಿನವರು ಮೃತದೇಹ ಪಡೆಯಲು ಸಿದ್ಧರಿರಲಿಲ್ಲ. ಯಾವುದೋ ರೋಗ ಬಂದು ಈತ ಸಾವನ್ನಪ್ಪಿದ್ದಾನೆ. ಗ್ರಾಮದೊಳಗೆ ಹೆಣ ತರುವುದೇ ಬೇಡ ಎಂದು ಗ್ರಾಮಸ್ಥರು ನನಗೆ ಎಚ್ಚರಿಸಿದರು. ಬೇರೆ ದಾರಿಯಿಲ್ಲದೇ ಮೃತದೇಹ ಇದ್ದ ಕಾರ್ ಹಿಂದಕ್ಕೆ ಚಲಾಯಿಸಿ ವಾಪಾಸ್ ಬರತೊಡಗಿದೆ. ಅದೊಂದು ಗ್ರಾಮದಲ್ಲಿ ಕಂಡ ನದಿ ತೀರದಲ್ಲಿ ಸ್ಥಳೀಯನೋರ್ವನ ನೆರವಿನಿಂದ ಮೃತದೇಹಕ್ಕೆ ಸಂಸ್ಕಾರ ಮಾಡಿದೆ. ಯಾರಿಗೆ ಯಾರಿಗೂ ಇಲ್ಲ ಎಂಬ ವಾಸ್ತವ ಸತ್ಯ ಆಗ ಗೊತ್ತಾಯಿತು ಎಂದಿದ್ದರು ಹಸನ್..
ಹಸನ್ ಅವರ ಈ ಸೇವಾ ಕಾರ್ಯಕ್ಕೆ ಕೈತುಂಬಾ ಹಣವಂತೂ ಸಿಕ್ಕುತ್ತಲೇ ಇರಲಿಲ್ಲ. ಬಾಡಿಗೆ ಕಾರ್ನಲ್ಲಿ ಹೆಣ ಸಾಗಿಸಿದರೆ ಮೃತನ ಸಂಬAಧಿಕರು ಚೌಕಾಸಿ ಮಾಡಿ ದುಡ್ಡು ಕೊಡುತ್ತಿದ್ದರು. ಹೀಗಾಗಿ ಹಸನ್ ಹೆಣ ಸಾಗಿಸಿ ಕೈ ಸುಟ್ಟುಕೊಂಡ ಪ್ರಸಂಗವೇ ಜಾಸ್ತಿ.. ಇದೆಲ್ಲದರ ಜತೆಗೆ ಬಾಡಿಗೆ ಕಾರ್ ಇಟ್ಟುಕೊಂಡಿದ್ದರೂ ಹೆಣ ಸಾಗಿಸುವ ಕಾರ್ ಎಂಬ ಹೆಸರು ಬಂದದ್ದರಿAದಾಗಿ ಹೆಣ ಬಿಟ್ಟರೆ ಬೇರೆ ಯಾರೂ ಇವರ ಕಾರ್ ಹತ್ತುತ್ತಿರಲಿಲ್ಲ.. ವೈದ್ಯರು ಆಸ್ಪತ್ರೆಯಿಂದ ಏರಿಸುತ್ತಿದ್ದ ಹೆಣಗಳಿಗಷ್ಟೇ ಹಸನ್ ಕಾರ್ ಪ್ರಿಯ ಎಂಬAತಾಗುತ್ತಿತ್ತು. ಹೆಣ ಸಾಗಿಸಿ ಸಾಗಿಸಿ ಹಸನ್ ಹೈರಾಣಾಗಿದ್ದರು. ಸಾಕಪ್ಪಾ ಸಾಕು ಈ ವೃತ್ತಿ ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಮತ್ತೊಂದು ಹೆಣ ಸಾಗಿಸಲು ಬುಲಾವ್ ಬಂದಾಗ ಹಸನ್ ಅಲ್ಲಿ ಸೇವೆಗೆ ಸಿದ್ಧರಿರುತ್ತಿದ್ದರು.
ಅದೊಂದು ದಿನ ಮಡಿಕೇರಿಯ ವಕೀಲರೋರ್ವರು ಹತ್ಯೆಯಾದರು. ಅವರ ಶವ ಸಾಗಿಸಲು ಜೀನತ್ ಕಾರ್ನೊಂದಿಗೆ ಶವಾಗಾರದ ಬಳಿ ಹಸನ್ ಬಂದರು. ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ಮಾಜಿ ಸಚಿವ ಯಂ.ಸಿ. ನಾಣಯ್ಯ ಕೂಡ ಅಲ್ಲಿಗೆ ಬಂದಿದ್ದರು. ಆಗ ಹಸನ್ ಜೀವನದ ಕಥೆ ಅವರಿಗೆ ಹೇಳಿ ಇವರಿಗೆ ಏನಾದರೂ ಸಹಾಯ ಮಾಡಿ ಸಾರ್ ಎಂದಿದ್ದೆ. ಸ್ಪಂದಿಸಿದ ನಾಣಯ್ಯ ಹಸನ್ ಅಂಬ್ಯುಲೆನ್ಸ್ ಖರೀದಿಸಲು ನೆರವಾದರು ಎಂದು ಹಿರಿಯ ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಸ್ಮರಿಸಿಕೊಂಡರು.
ಎರಡು ವರ್ಷಗಳಿಂದ ಅನಾರೋಗ್ಯಕ್ಕೊಳಗಾದ ಹಸನ್ ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದು ಆಪ್ತ ಗೆಳೆಯ ಎಸ್.ಐ. ಮುನೀರ್ ಅಹಮ್ಮದ್ ಹೇಳಿದರು.
ಹಸನ್ ಕಾರ್ಯಕ್ಕೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸೇರಿದಂತೆ ಅನೇಕ ಸಂಘ-ಸAಸ್ಥೆಗಳು ಸನ್ಮಾನದ ಗೌರವ ನೀಡಿವೆ. ಹಸನ್ ಸೇವೆ ಸ್ವಾರ್ಥವನ್ನೂ ಮೀರಿದ ಜನಸೇವೆಯಾಗಿ ಜಿಲ್ಲೆಯ ಇತಿಹಾಸದ ಪುಟಗಳಲ್ಲಿರುತ್ತದೆ. ಕೊರೊನಾದಿಂದಾಗಿ ಸುಳ್ಯದ ಆಸ್ಪತ್ರೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದ ಜೀನತ್ ಹಸನ್ ಮೃತ ಶರೀರವನ್ನು ಅಂಬ್ಯುಲೆನ್ಸ್ನಲ್ಲಿ ಮಡಿಕೇರಿಗೆ ತಂದು ಅಂತ್ಯಸAಸ್ಕಾರ ನೆರವೇರಿಸಲಾಯಿತು..
ಕಾಯಕ ಜೀವಿ ಮಣ್ಣಲ್ಲಿ ಮಣ್ಣಾದರು. ಸುದೀರ್ಘ ಸೇವೆ ಇತಿಹಾಸದ ಪುಟಗಳಲ್ಲಿ ಅಜರಾಮರವಾಯಿತು.
- ಅನಿಲ್ ಎಚ್.ಟಿ.