ಮಡಿಕೇರಿ, ಜೂ. ೩: ಲಾಕ್‌ಡೌನ್‌ನಿಂದಾಗಿ ಸಮರ್ಪಕ ಕೆಲಸ ಇಲ್ಲದೇ ಸಮಸ್ಯೆಯಲ್ಲಿರುವ ಮನೆ ಕೆಲಸದವರಿಗೆ ಮೈಸೂರಿನ ಯೋಗೋದಾ ಸತ್ಸಂಗ ಧ್ಯಾನ ಕೇಂದ್ರದಿAದ ನೆರವು ನೀಡಲಾಯಿತು.

ಮಡಿಕೇರಿಯಲ್ಲಿ ಲಾಕ್‌ಡೌನ್ ನಿಂದಾಗಿ ಮನೆ ಕೆಲಸಕ್ಕೆ ತೆರಳಲಾಗದೇ ಮನೆಗಳಲ್ಲಿ ದೊರಕುತ್ತಿದ್ದ ವೇತನದಿಂದ ವಂಚಿತರಾದ ೩೦ ಕೆಲಸಗಾರರನ್ನು ಗುರುತಿಸಿದ ಮೈಸೂರಿನ ಯೋಗೋದಾ ಸತ್ಸಂಗ ಧ್ಯಾನ ಕೇಂದ್ರದ ಎನ್.ಯು. ಅಯ್ಯಪ್ಪ, ನರಸಿಂಹ, ಭಾಸ್ಕರ್, ಮಂಜುನಾಥ್ ಸೇರಿದಂತೆ ಅನೇಕ ಅನುಯಾಯಿಗಳು ನೆರವು ನೀಡಲು ಮುಂದಾದರು.

ಕೇAದ್ರದ ಪರವಾಗಿ ತಲಾ ರೂ. ೧ ಸಾವಿರಗಳನ್ನು ಮಡಿಕೇರಿಯ ೩೦ ಮನೆ ಕೆಲಸದವರಿಗೆ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಾಶ್ಯಪ್, ಸದಸ್ಯೆ ಡಾ. ನಯನಾ ಕಾಶ್ಯಪ್ ವಿತರಿಸಿದರು.