ಪೊನ್ನಂಪೇಟೆ, ಜೂ. ೩: ಪೊನ್ನಂ ಪೇಟೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಅವಧಿ ಮೇ ೨೯ಕ್ಕೆ ಮುಕ್ತಾಯಗೊಂಡಿದೆ. ಗ್ರಾಮ ಪಂಚಾಯಿತಿಗೆ ಈಗಾಗಲೇ ಚುನಾವಣೆ ನಡೆದಿದ್ದು, ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿಲ್ಲ. ಗ್ರಾಮ ಪಂಚಾಯಿತಿಯ ನೂತನ ಆಡಳಿತ ಮಂಡಳಿ ರಚನೆಯಾಗು ವವರೆಗೂ ಗ್ರಾಮ ಪಂಚಾಯಿತಿಯ ದಿನನಿತ್ಯದ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ಆಡಳಿತ ಅಧಿಕಾರಿ ಯನ್ನು ನೇಮಕ ಮಾಡಲಾಗಿದ್ದು, ಪೊನ್ನಂಪೇಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಎಂ.ಕೆ. ದೀನಾ ಅವರು ಆಡಳಿತ ಅಧಿಕಾರಿ ಯಾಗಿ ನೇಮಕವಾಗಿದ್ದಾರೆ.

ಟಾಸ್ಕ್ಫೋರ್ಸ್ ಸಭೆ: ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯರಾಣಿ ಅವರ ಆದೇಶದನ್ವಯ ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಂ.ಕೆ. ದೀನಾ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ಟಾಸ್ಕ್ಫೋರ್ಸ್ ಸಭೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಆಡಳಿತಾಧಿಕಾರಿ ದೀನಾ, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ರಚನೆಯಾಗುವವರೆಗೂ ನೂತನ ವಾಗಿ ಚುನಾಯಿತರಾಗಿರುವ ಪ್ರತಿ ಯೊಬ್ಬರೂ ಕೊರೊನಾ ಸೋಂಕು ತಡೆಗಟ್ಟಲು ಕೈಜೋಡಿಸು ವಂತೆ ಕೇಳಿಕೊಂಡರು. ಹೋಂ ಐಸೋಲೇ ಶನ್‌ನಲ್ಲಿ ಇರುವ ಕೊರೊನಾ ಸೋಂಕಿತರು, ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದು ಕಂಡು ಬರುತಿದ್ದು, ಇದರಿಂದಾಗಿ ಕೊರೊನಾ ಸೋಂಕು ಬೇರೆಯವರಿಗೂ ಹರಡುವ ಸಾಧ್ಯತೆ ಇದೆ.

ಜಿಲ್ಲಾಡಳಿತದ ಆದೇಶದಂತೆ ಕೊರೊನಾ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್‌ಸೆಂಟರ್‌ಗೆ ದಾಖಲಿಸುವಂತೆ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ವರ್ತಕರು ಮಾಂಸ, ಹಣ್ಣು, ತರಕಾರಿಯನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತಿದ್ದು, ಜಿಲ್ಲಾಡಳಿತ ನಿಗದಿಪಡಿಸಿದ ಬೆಲೆಗಿಂತ ಅಧಿಕ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಈ ಸಂದÀರ್ಭ ಗ್ರಾ.ಪಂ. ಸದಸ್ಯರಾದ ಮೂಕಳೇರ ಸುಮಿತ ಗಣೇಶ್, ಮೂಕಳೇರ ಮಧು ಕುಮಾರ್, ಬೊಟ್ಟಂಗಡ ದಶಮಿ, ರಸಿಕ, ಆರತಿ ಸುರೇಶ್, ವಿಜಯಕುಮಾರ್, ಜುನೈದ್, ಅಬ್ದುಲ್ ಅಜೀಜ್, ಯಮುನ, ಗ್ರಾ.ಪಂ. ಸಿಬ್ಬಂದಿ ಜಮುನಾ, ಅಣ್ಣಪ್ಪ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು. -ಚನ್ನನಾಯಕ