ಶನಿವಾರಸAತೆ, ಜೂ. ೩: ಕೊರೊನಾ ತಡೆಗಟ್ಟಲು ಅಧಿಕಾರಿಗಳು, ಸಿಬ್ಬಂದಿಗಳೊAದಿಗೆ ಜನಸಾಮಾನ್ಯರು ಕೈಜೋಡಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ಶನಿವಾರಸಂತೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖಾಧಿಕಾರಿಗಳ ಹಾಗೂ ಕೊರೊನಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಕೊರೊನಾದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಗ್ಗಿ ಹೋಗಿದೆ. ಜನರ ಜೀವ ರಕ್ಷಣೆ ಮಾಡಬೇಕು. ಜೀವ ಇದ್ದರೆ ಜೀವನ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ.

ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ನಿಯಾಮ ವಳಿಗಳನ್ನು ಉಲ್ಲಂಘಿಸದೆ ಎಚ್ಚರ ಶನಿವಾರಸಂತೆ, ಜೂ. ೩: ಕೊರೊನಾ ತಡೆಗಟ್ಟಲು ಅಧಿಕಾರಿಗಳು, ಸಿಬ್ಬಂದಿಗಳೊAದಿಗೆ ಜನಸಾಮಾನ್ಯರು ಕೈಜೋಡಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ಶನಿವಾರಸಂತೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖಾಧಿಕಾರಿಗಳ ಹಾಗೂ ಕೊರೊನಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಕೊರೊನಾದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಗ್ಗಿ ಹೋಗಿದೆ. ಜನರ ಜೀವ ರಕ್ಷಣೆ ಮಾಡಬೇಕು. ಜೀವ ಇದ್ದರೆ ಜೀವನ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ.

ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ನಿಯಾಮ ವಳಿಗಳನ್ನು ಉಲ್ಲಂಘಿಸದೆ ಎಚ್ಚರ ಪ್ರದೇಶದಲ್ಲಿ ಕೊರೊನಾ ನಿರ್ಮೂಲನೆ ಯಾಗಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂದರು. ಸಭೆಯಲ್ಲಿ ಟಾಸ್ಕ್ಫೋರ್ಸ್ ಅಧ್ಯಕ್ಷೆ ಸರೋಜ ಶೇಖರ್, ಉಪಾಧ್ಯಕ್ಷ ಎಸ್.ಆರ್. ಮಧು, ವೈದ್ಯಾಧಿಕಾರಿ ಡಾ. ರಾಜೇಶ್ವರಿ, ಠಾಣಾಧಿಕಾರಿ ಹೆಚ್.ಇ. ದೇವರಾಜ್, ಟಾಸ್ಕ್ ಫೋರ್ಸ್ ಕಾರ್ಯಪಡೆಯ ಸರ್ದಾರ್ ಅಹಮದ್, ಆದಿತ್ಯಗೌಡ, ಎಸ್.ಎನ್. ರಘು, ಫರ್ಜಾನ ಶಾಹಿದ್, ಸರಸ್ವತಿ, ಕಾವೇರಿ, ಕಂದಾಯ ಇಲಾಖೆ, ಆಶಾ ಕಾರ್ಯ ಕರ್ತೆಯರು, ಅಂಗನವಾಡಿ ಕಾರ್ಯ ಕರ್ತೆಯರು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಸ್ವಾಗತಿಸಿ, ವಂದಿಸಿದರು.