ಮಡಿಕೇರಿ, ಜೂ. ೨: ೬ ರಿಂದ ೧೫ ವಯಸ್ಸಿನ ಕೊಡವ ಜನಾಂಗದ ಮಕ್ಕಳಿಗಾಗಿ ಕೊಡಗ್ರ ಚುಪ್ಪಿ ಕೋಗಿಲೆ ಎನ್ನುವ ಪರಿಕಲ್ಪನೆಯಲ್ಲಿ ಕೊಡವ ಕೂಟಾಳಿಯ ಸಂಘಟನೆ ಯಿಂದ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧಿಗಳು ತಾವು ಯಾವುದೇ ಮ್ಯೂಸಿಕ್, ಕರೋಕೆ, ಆ್ಯಪ್ ಬಳಸದೇ ೩ ನಿಮಿಷದ ಒಳಗೆ ಹಾಡಿದ ಕೊಡವ ಭಾಷೆಯ ಹಾಡನ್ನು ತಾ. ೬ರ ಒಳಗೆ ೯೯೭೨೫೩೮೦೩೦ ಈ ವಾಟ್ಸಪ್ ಸಂಖ್ಯೆಗೆ ಕಳಿಸಬಹುದು.
ಎರಡು ಸುತ್ತಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಿರುದು (ಪ್ರಥಮ ಸ್ಥಾನಕ್ಕೆ) ನಗದು ಬಹುಮಾನ ಮತ್ತು ಭಾಗವಹಿಸಿದ ಸ್ಪರ್ಧಿಗಳಿಗೆ ಇ ಅಭಿನಂದನಾ ಪತ್ರ ನೀಡಲಾಗುವುದು ಎಂದು ಕೂಟದ ಸಂಚಾಲಕಿ ಚಿಮ್ಮಚಿರ ಪವಿತ ರಜನ್ ತಿಳಿಸಿದ್ದಾರೆ.
ಹೆಚ್ಚಿನ ವಿವರಕ್ಕೆ ಚೆಟ್ಟೋಳಿರ ಶರತ್ ಸೋಮಣ್ಣ - ೯೯೭೨೫೩೮೦೩೦, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ - ೯೫೩೫೫೯೪೩೩೩, ಮಂದೆಯAಡ ವನಿತ್ ಸಂಜು - ೯೮೮೦೫೦೪೨೦೮, ಅಮ್ಮಾಟಂಡ ಚೇತನ್ ಅಪ್ಪಯ್ಯ - ೯೭೩೧೦೨೭೪೫೧ ಇಲ್ಲಿ ಸಂಪರ್ಕ ಮಾಡಬಹುದು.