ರೋಗರುಜಿನಗಳು ಬಂದ ಮೇಲೆ ನಿವಾರಣೆ ಮಾಡುವುದಕ್ಕಿಂತ, ಬಾರದ ಹಾಗೆ ನೋಡಿಕೊಳ್ಳು ವುದೇ ಜಾಣತನ, ಸತತ ಯೋಗಾಸನ, ಪ್ರಾಣಾಯಾಮ, ಧ್ಯಾನ, ಸೂರ್ಯ ನಮಸ್ಕಾರ ಮಾಡಿದರೆ ನಾವು ಖಂಡಿತವಾಗಿ ಆರೋಗ್ಯ ವಂತ ಜೀವನವನ್ನು ನಡೆಸಬಹುದು. ಮನುಷ್ಯರ ಜೀವನದ ರಕ್ಷಣೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ನಾವು ಸಂತೋಷದಿAದ ಜೀವಿಸಲು ಮತ್ತು ಆರೋಗ್ಯವಾಗಿರಲು ದೇಹದ ರಕ್ಷಣೆ ಅತ್ಯಂತ ಪ್ರಮುಖವಾಗಿದೆ. ನಮ್ಮ ದೇಶದಲ್ಲಿ ಹುಟ್ಟಿ ಬೇರೆ ದೇಶದಲ್ಲಿ ಪ್ರಖ್ಯಾತಿಯನ್ನು ಪಡೆದು, ಪುನಃ ನಮ್ಮ ದೇಶದಲ್ಲಿಯೇ ಅದರ ಛಾಪನ್ನು ಬೀರುವಂತಹ ಯೋಗ, ಇಂದು ಎಲ್ಲರ ಮನೆಮಾತಾಗಿದೆ. ಯೋಗವನ್ನು ಇಡೀ ಪ್ರಪಂಚಕ್ಕೆ ಪರಿಚಯ ಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ. ಇದು ಪತಂಜಲಿ ಮಹರ್ಷಿಯವರ ಕೊಡುಗೆಯಾಗಿದೆ. ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಕನಸಿನ ಕೂಸೆ ಈ ಯೋಗ. ಅವರ ಸಲಹೆಯಂತೆ ನಾವು ಅಂತರಾಷ್ಟಿçÃಯ ಯೋಗ ದಿನವನ್ನು ಕೂಡ ಆಚರಣೆ ಮಾಡುತ್ತಿದ್ದೇವೆ. ನಾವು ಎಲ್ಲ ಶಾಲಾ, ಕಾಲೇಜು, ಕಚೇರಿ, ಮನೆಯಲ್ಲಿಯೂ ಕೂಡ ಯೋಗ ಮಾಡುವ ಪದ್ಧತಿಯನ್ನು ಇರಿಸಿಕೊಂಡಿದ್ದೇವೆ. ಯೋಗವೆಂದರೆ ಶಿಸ್ತುಬದ್ಧವಾದ, ಕ್ರಮಬದ್ಧವಾದ ವ್ಯಾಯಾಮದ ಒಂದು ವಿಧಾನ. ಇದರ ಮೂಲ ಉದ್ದೇಶ ಮನಸ್ಸಿನ ಮೇಲೆ ಹತೋಟಿ ಸಾಧಿಸಿ, ನಮ್ಮ ಇಂದ್ರಿಯಗಳ ಮೇಲೆ ನಿಯಂತ್ರಣ ಹೊಂದುವುದು. ಯೋಗಾಸನದಲ್ಲಿ ಮಾಡುವಂತ ಎಲ್ಲ ವ್ಯಾಯಾಮಗಳು ಕೂಡ ನಮ್ಮ ದೈಹಿಕಶ್ರಮದೊಂದಿಗೆ ಮತ್ತು ನಮ್ಮ ಉಸಿರಾಟದ ಒಟ್ಟಿಗೆ ನಡೆಯುವಂಥ ಕ್ರಿಯೆಯಾಗಿದೆ. ಯೋಗಾಸನ ವೆಂದರೆ ವ್ಯಾಯಾಮ, ಈ ಆಸನಗಳನ್ನು ಅಭ್ಯಾಸ ಮಾಡುವುದರ ಜೊತೆಗೆ ಮನಸ್ಸಿನ ನಿಯಂತ್ರಣವು ಕೂಡ ಮಾಡಬೇಕು. ಯೋಗಾಭ್ಯಾಸವನ್ನು ಮಾಡುವ ಮುನ್ನ ನಾವು ಕೆಲವೊಂದು ನಿಯಮವನ್ನು ಪಾಲಿಸಬೇಕಾಗುತ್ತದೆ. ಬೆಳಗ್ಗೆ ಅಥವಾ ಸಂಜೆ ಯೋಗಾಸನವನ್ನು ಮಾಡೋದಕ್ಕೆ ಸೂಕ್ತವಾದ ಕಾಲವಾಗಿರುತ್ತದೆ.

?ಕರ್ಣಯ್ಯನ ಈಶ್ವರ, ಪೊನ್ನಂಪೇಟೆ.