ಕೂಡಿಗೆ, ಜೂ. ೩: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯು ನಿವೇಶನ ರಹಿತರಿಗೆ ವಸತಿ ಕಲ್ಪಿಸಲು ಇದುವರೆಗೂ ಸಾಧ್ಯವಾಗಿಲ್ಲ. ಕಳೆದ ಮೂರು ವರ್ಷಗಳಿಂದಲೂ ಗ್ರಾಮ ಸಭೆಯಲ್ಲಿ ಅಯಾ ಊರಿನ ನಿವೇಶನ ರಹಿತ ಪಟ್ಟಿಯನ್ನು ತಯಾರಿಸಿ ವರದಿ ನೀಡಿದರು ವಸತಿ ಭಾಗ್ಯ ಮಾತ್ರ ದೊರೆತ್ತಿಲ್ಲ.
ಕಳೆದ ಮೂರು ವರ್ಷಗಳಲ್ಲಿ ೬ ಬಾರಿ ಗ್ರಾಮ ಸಭೆಯನ್ನು ನಡೆಸಿ ನಿವೇಶನ ರಹಿತರ ಅರ್ಜಿಗಳನ್ನು ಸ್ವೀಕರಿಸಿ ಅವರುಗಳ ದಾಖಲೆಯನ್ನು ಪಡೆದುಕೊಂಡು ಮುಂದಿನ ಸಾಲಿನಲ್ಲಿ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗುವುದು ಎಂಬ ಭರವಸೆ, ಭರವಸೆಯಾಗೆ ಉಳಿದಿದೆ. ಹೆಬ್ಬಾಲೆ ವ್ಯಾಪ್ತಿಯಲ್ಲಿ ೪೫೭ ನಿವೇಶನ ರಹಿತರ ಪಟ್ಟಿ ಸಿದ್ಧಗೊಂಡಿದರೂ ಇದುವರೆಗೂ ಒಂದು ಮನೆಯ ನಿರ್ಮಾಣಕ್ಕೂ ಅನುದಾನ ಬಿಡುಗಡೆಯಾಗಿಲ್ಲ ಎಂದು ನಿವೇಶನ ರಹಿತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಅಂಬೇಡ್ಕರ್ ಯೋಜನೆ ಅಡಿಯಲ್ಲಿ ೩೭ ಮಂದಿ ಫಲಾನುಭವಿಗಳ ಆಯ್ಕೆ ಮಾಡಿ ಅವರುಗಳಿಗೆ ಮನೆ ನಿರ್ಮಿಸಿಕೊಳ್ಳಲು ಆದೇಶವನ್ನು ಗ್ರಾಮ ಪಂಚಾಯಿತಿ ಮೂಲಕ ನೀಡಲಾಗಿತ್ತು. ಆದರೆ, ಮೊದಲ ಹಂತದ ಹಣ ನೀಡಿ ಅನುಮೋದನೆ ನೀಡಿದರೂ, ಆದರೆ ಮೂರು ವರ್ಷಗಳಿಂದ ಪೂರ್ಣ ಪ್ರಮಾಣದ ಮನೆ ನಿರ್ಮಾಣವಾದರೂ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಇದುವರೆಗೂ ಉಳಿಕೆಯ ಹಣ ಬಂದಿರುವುದಿಲ್ಲ. ಮನೆ ನಿರ್ಮಾಣಕ್ಕೆ ಬೇಕಾಗುವ ವಸ್ತುಗಳನ್ನು ಅಂಗಡಿಗಳಲ್ಲಿ ಸಾಲದ ರೂಪದಲ್ಲಿ ಪಡೆದಿರುತ್ತೇವೆ. ಆದರೆ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಗ್ರಾಮ ಪಂಚಾಯಿತಿಗೆ ಹಣಕ್ಕಾಗಿ ಅನೇಕ ಬಾರಿ ಅಲೆದು ಸುಸ್ತಾಗಿದೆ ಎನ್ನುತ್ತಾರೆ ಫಲಾನುಭವಿಗಳು.
ಇದಕ್ಕೆ ಸಂಬAಧಿಸಿದAತೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿಕ್ರಿಯೆಯನ್ನು ಬಯಸಿದಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ನಿವೇಶನ ರಹಿತರು ಇದ್ದಾರೆ. ನಾವುಗಳು ಅವರುಗಳ ಪಟ್ಟಿಯನ್ನು ಆಯ್ಕೆ ಮಾಡಿ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಳುಹಿಸಲಾಗಿದೆ. ಆದರೆ ಇದುವರೆಗೂ ಒಂದು ಮನೆ ನಿರ್ಮಾಣಕ್ಕೂ ಅನುಮೋದನೆ ದೊರೆತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ತಿಳಿಸಿದ್ದಾರೆ.
ಅಂಬೇಡ್ಕರ್ ಯೋಜನೆಯಡಿಯಲ್ಲಿ ೩೭ ಮನೆಗಳು ನಿರ್ಮಾಣವಾಗಿ ಮೂರು ವರ್ಷಗಳೂ ಕಳೆದಿರುವ ಫಲಾನುಭವಿಗಳಿಗೆ ಇದುವರೆಗೂ ಎರಡನೇ ಮತ್ತು ಮೂರನೇ ಹಂತದ ಹಣ ಬಂದಿರುವುದಿಲ್ಲ. ಸರಕಾರ ಅತೀ ಶೀಘ್ರವಾಗಿ ಹಣವನ್ನು ಬಿಡುಗಡೆ ಮಾಡಬೇಕೆಂದು ಈಗಾಗಲೇ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಸಂಬAಧಿಸಿದ ಅಧಿಕಾರಿಗಳು ನಿವೇಶನ ರಹಿತರಿಗೆ ನಿವೇಶನ ನಿರ್ಮಿಸಲು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹಾಗೂ ಸರ್ವ ಸದಸ್ಯರು ಒತ್ತಾಯಿಸಿದ್ದಾರೆ.
ಅಭಿವೃದ್ಧಿ ಅಧಿಕಾರಿ ರಾಜೇಶ್ ಸರಕಾರದಿಂದ ಹಣ ಬಿಡುಗಡೆ ತಕ್ಷಣವೇ ಫಲಾನುಭವಿಗಳಿಗೆ ನೀಡುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.