ಪೆರಾಜೆ, ಜೂ. ೨: ಪೆರಾಜೆ ಮತ್ತು ಚೆಂಬು ಗ್ರಾಮಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪೆರಾಜೆ ಮತ್ತು ಚೆಂಬು ಗ್ರಾಮದಿಂದ ಅನಗತ್ಯವಾಗಿ ಪಟ್ಟಣಕ್ಕೆ ವಾಹನಗಳಲ್ಲಿ ಓಡಾಟ ನಡೆಸುವವರ ತಪಾಸಣೆಯನ್ನು ಸಂಪಾಜೆ ಉಪ ಠಾಣಾಧಿಕಾರಿ ಶ್ರೀಧರ್ ಮತ್ತು ಸಿಬ್ಬಂದಿ ನಡೆಸಿದರು.

ಕೊಡಗಿನಲ್ಲಿ ಜಾರಿಯಲ್ಲಿ ಇರುವ ನಿಯಮದಂತೆ ವಾರದ ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ ೬ ರಿಂದ ೧೦ ತನಕ ಮಾತ್ರ ಅಗತ್ಯವಸ್ತುಗಳ ಕೊಳ್ಳಲು ಅವಕಾಶವಿದ್ದು, ಉಳಿದ ಸಮಯದಲ್ಲಿ ತುರ್ತು ಅಗತ್ಯ ಸೇವೆಗಳನ್ನು ಬಿಟ್ಟು ಉಳಿದವರಿಗೆ ಅವಕಾಶ ಇಲ್ಲ. ಎಲ್ಲರೂ ಕಾನೂನು ಪಾಲಿಸಿ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪೆರಾಜೆಯಿಂದ ಗ್ರಾಮದ ಒಳಗೆ ಬರುವ ಪ್ರಮುಖ ರಸ್ತೆಯನ್ನು ಬ್ಯಾರಿಕೇಡ್ ಅಳವಡಿಸಿ ಮತ್ತು ಚೆಂಬು ಗ್ರಾಮದಲ್ಲಿ ಬಾಲೆಂಬಿಯಲ್ಲಿ ಗೇಟ್ ಬಂದ್ ಮಾಡಿದ್ದು ಪ್ರತಿದಿನ ತಪಾಸಣೆ ನಡೆಸಲಾಗುವುದು, ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಿಮಿನಲ್ ಕೋವಿಡ್ ಆರೈಕೆ ಕೇಂದ್ರ ಪರಿಶೀಲನೆ

ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.