ಗೋಣಿಕೊಪ್ಪಲು.ಜೂ.೨: ದ.ಕೊಡಗಿನ ಗಿರಿಜನರು ಹೆಚ್ಚಾಗಿ ವಾಸಿಸುವ ಬಾಳೆಲೆ ಹೋಬಳಿಯ ತಟ್ಟೆಕೆರೆ, ಪಾಲದಳ, ಕುಂಬಾರ ಕಟ್ಟೆ,ಪಾಲದಳ ಹಾಡಿಗಳಿಗೆ ಪ್ರೊಬೆಷನರಿ ಉಪವಿಭಾಗದಿಕಾರಿ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸಿದರು.
ಪ್ರತಿಯೋರ್ವ ನಾಗರಿಕನು ಸರ್ಕಾರದಿಂದ ಉಚಿತವಾಗಿ ಸಿಗುವ ಕೋವಿಡ್ ಲಸಿಕೆ ಯನ್ನು ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು. ಗಾಳಿ ಸುದ್ದಿಗಳಿಗೆ ಮರುಳಾಗಬಾರದು, ಇಲಾಖೆಯು ತಮ್ಮ ಮನೆ ಬಾಗಿಲಿಗೆ ಆಗಮಿಸಿ ಸರಕಾರದ ನಿಯಮಗಳನ್ನು ತಿಳಿಸುತ್ತಿದೆ. ಈಗಾಗಿ ಯಾರೋ ಹೇಳುವ ಮಾತಿಗೆ ಮರುಳಾಗದಿರಿ ಎಂದು ಗಿರಿಜನರಿಗೆ ತಿಳಿ ಹೇಳಿದರು.
ಭೇಟಿಯ ವೇಳೆ ದಾನಿಗಳು ನೀಡಿದ ಆಹಾರ ಕಿಟ್ ಗಳನ್ನು ಕೊರೊನಾ ಸೋಂಕಿತ ಕುಟುಂಬಗಳಿಗೆ ವಿತರಿಸಿದರು. ಈ ವೇಳೆ ಆಶಾ,ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ರೆವಿನ್ಯೂ ಅಧಿಕಾರಿಗಳು, ಸೇರಿದಂತೆ ಇನ್ನಿತರರು ಹಾಜರಿದ್ದರು.