ಮಡಿಕೇರಿ, ಜೂ. ೨: ಕೋವಿಡ್‌ನಿಂದ ಸಾವನ್ನಪ್ಪಿದವರ ಮೃತ ದೇಹಗಳನ್ನು ಅಂತ್ಯಸAಸ್ಕಾರಕ್ಕೆ ಸಿದ್ಧಗೊಳಿಸುವ ಕಾಯಕದಲ್ಲಿ ೧೪ ತಿಂಗಳಿನಿAದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೋವಿಡ್ ಆಸ್ಪತ್ರೆಯ ರಾಬರ್ಟ್ ರಾಡ್ರಿಗಸ್, ಸಯ್ಯದ್ ಹುಸೇನ್ ಅವರುಗಳಿಗೆ ಮೈಸೂರಿನ ಯೋಗೋದಾ ಸತ್ಸಂಗ ಧ್ಯಾನ ಕೇಂದ್ರದಿAದ ನೆರವು ನೀಡಲಾಯಿತು.

ರಾಬರ್ಟ್, ಹುಸೇನ್ ಅವರು ಕಳೆದ ೧೪ ತಿಂಗಳಿನಿAದ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ೩೨೮ ಮಂದಿಯ ಮೃತದೇಹಗಳನ್ನು ಸಂಸ್ಕಾರಕ್ಕೆ ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇವರ ಕೆಲಸದ ಬಗ್ಗೆ ಮಾಹಿತಿ ಪಡೆದ ಮೈಸೂರಿನ ಯೋಗೋದಾ ಸತ್ಸಂಗ ಧ್ಯಾನ ಕೇಂದ್ರದ ಎನ್.ಯು. ಅಯ್ಯಪ್ಪ, ನರಸಿಂಹ, ಭಾಸ್ಕರ್, ಮಂಜುನಾಥ್ ಸೇರಿದಂತೆ ಅನೇಕ ಅನುಯಾಯಿಗಳು ನೆರವು ನೀಡಲು ಮುಂದಾದರು.

ರಾಬರ್ಟ್, ಹುಸೇನ್ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ತಲಾ ರೂ. ೫ ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುವನ್ನು ಕೇಂದ್ರದ ಪರವಾಗಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಾಶ್ಯಪ್, ಸದಸ್ಯೆ ಡಾ. ನಯನಾ ಕಾಶ್ಯಪ್ ನೀಡಿದರು.