ಗೋಣಿಕೊಪ್ಪಲು, ಜೂ. ೨: ಕೊರೊನಾ ವಾರಿಯರ್ಸ್ ಆಗಿ ಹಗಲು-ರಾತ್ರಿ ಎನ್ನದೇ ದುಡಿಯುತ್ತಿರುವ ಆಶಾ ಕಾರ್ಯಕರ್ತೆ, ಆರೋಗ್ಯ ಸಿಬ್ಬಂದಿಗಳಿಗೆ ಗೋಣಿಕೊಪ್ಪಲುವಿನ ದುರ್ಗಾ ಬೋಜಿ ಗ್ರೂಪ್ಸ್ ವತಿಯಿಂದ ಧನ ಸಹಾಯ ನೀಡಲಾಯಿತು. ದುರ್ಗಾ ಬೋಜಿ ಗ್ರೂಪ್‌ನ ಮಾಲೀಕ ಗುಮ್ಮಟೀರ ಕಿಲನ್ ಗಣಪತಿ ಹಾಗೂ ಅವರ ಸಹೋದರ ಗುಮ್ಮಟೀರ ದರ್ಶನ್ ಸಹಾಯ ಧನ ವಿತರಿಸಿದರು. ಅರುವತೊಕ್ಲು ಗ್ರಾ.ಪಂ. ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಮನೆಯಪಂಡ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಜಮ್ಮಡ ಸೌಮ್ಯ, ಸದಸ್ಯರಾದ ಅಜ್ಜಿಕುಟ್ಟಿರ ಸಜನ್ ಚಂಗಪ್ಪ, ಮನೆಯ ಪಂಡ ಪ್ರಾಣ್ ಬೋಪಣ್ಣ, ಗಿರಿಜಾ, ದಮಯಂತಿ, ಶರೀಪಾ ಬಿ.ವಿ. ಭಾಗ್ಯವತಿ, ಹೆಚ್.ಆರ್. ರಮ್ಯ, ನವೀನ್, ಪಿಡಿಓ ಶಂಕರ್ ನಾರಾಯಣ, ಸಿಬ್ಬಂದಿಗಳಾದ ಮಂದಣ್ಣ, ರಮೇಶ್, ಹರ್ಷಿತ, ಸತ್ಯಭಾಮ ಮುಂತಾದವರು ಉಪಸ್ಥಿತರಿದ್ದರು.