ಕರ್ನಾಟಕದಲ್ಲಿ ಲಾಕ್ಡೌನ್ನಲ್ಲಿ ಕೆಲವು ವಿನಾಯಿತಿ
ಬೆಂಗಳೂರು, ಜೂ. ೨: ಕರ್ನಾಟಕದಲ್ಲಿ ಕೋವಿಡ್ ೨ನೇ ಅಲೆ ಹರಡುವಿಕೆ ತಡೆಯಲು ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಸರ್ಕಾರ ಜೂನ್ ೩ ರ ಗುರುವಾರದಿಂದ ಜಾರಿಗೆ ಬರುವಂತೆ ಲಾಕ್ಡೌನ್ನಲ್ಲಿ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಿದೆ. ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರು, ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತೀರ್ಮಾನವನ್ನು ಕೈಗೊಳ್ಳಲಾಗಿದೆ. ರಫ್ತು ಆಧಾರಿತ ಉದ್ಯಮಗಳ ಪ್ರಾರಂಭಕ್ಕೆ ಗುರುವಾರದಿಂದಲೇ ಅನುಮತಿ ನೀಡಲಾಗಿದೆ. ಕೃಷಿ ಉತ್ಪನ್ನಗಳು, ಟ್ರಾö್ಯಕ್ಟರ್ ಉತ್ಪಾದನೆ, ಸಿದ್ಧ ಉಡುಪುಗಳು, ಎಲೆಕ್ಟಾçನಿಕ್ಸ್ ಉತ್ಪನ್ನಗಳು, ಆಟೋಮೊಬೈಲ್ ಉತ್ಪಾದಿಸುವ ಕೈಗಾರಿಕೆಗಳಿಗೆ ಅವಕಾಶವನ್ನು ನೀಡಲಾಗಿದೆ. ಶೇ. ೫೦ ರಷ್ಟು ಕೆಲಸಗಾರರನ್ನಿಟ್ಟುಕೊಂಡು ಕೆಲಸ ಮಾಡಬೇಕು. ಲಾಕ್ಡೌನ್ ಮುಂದುವರಿಕೆ ಬಗ್ಗೆ ಸದ್ಯದಲ್ಲಿಯೇ ನಿರ್ಧಾರ ಕೈಗೊಳ್ಳಲಿರುವುದಾಗಿ ತಿಳಿದು ಬಂದಿದೆ. ಒಂದು ವಾರಕಾಲ ಲಾಕ್ಡೌನ್ ಮುಂದುವರಿಸುವ ಕುರಿತು ಇಂದು ಸರಕಾರ ಯಾವುದೇ ಪ್ರಕಟಣೆ ಹೊರಡಿಸಿಲ್ಲ.
ಕಾವೇರಿ ನದಿಯಲ್ಲಿ ಮೃತಪಟ್ಟವರ ಅಸ್ಥಿ ವಿಸರ್ಜನೆ
ಮಂಡ್ಯ, ಜೂ. ೨: ಕೊರೊನಾ ವೈರಸ್ನಿಂದ ಮೃತಪಟ್ಟವರ ಅಸ್ಥಿಗಳನ್ನು ಸಾಮೂಹಿಕವಾಗಿ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಲಾಯಿತು. ಮಳವಳ್ಳಿ ತಾಲೂಕಿನ ಬೆಳವಾಡಿಯಲ್ಲಿರುವ ಅನ್ನಪೂರ್ಣೇಶ್ವರಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಬಳಿಯ ಕಾವೇರಿ ನದಿ ತೀರದಲ್ಲಿ ಕಂದಾಯ ಇಲಾಖೆಯ ವತಿಯಿಂದ ಸಚಿವ ಆರ್. ಅಶೋಕ್ ಈ ಕಾರ್ಯವನ್ನು ನೆರವೇರಿಸಿದರು. ಹಲವು ದಿನಗಳು ಕಳೆದರೂ ಚಿತಾಭಸ್ಮವನ್ನು ಕುಟುಂಬಸ್ಥರು ಕೊಂಡೊಯ್ಯದ ಕಾರಣ ಸರ್ಕಾರದ ಪರವಾಗಿ ಅಸ್ತಿ ವಿಸರ್ಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಐದು ನೂರಕ್ಕೂ ಅಧಿಕ ಮೃತ ವ್ಯಕ್ತಿಗಳ ಅಸ್ಥಿಯನ್ನು ಸಂಗ್ರಹಿಸಿ ತರಲಾದ ಮಡಿಕೆಗಳನ್ನು ವೇದ ವಿದ್ವಾನ್ ಭಾನುಪ್ರಕಾಶ್ ನೇತೃತ್ವದ ಪುರೋಹಿತರ ತಂಡ ವೇದ ಮಂತ್ರಗಳ ಘೋಷದೊಂದಿಗೆ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಕಂದಾಯ ಸಚಿವ ಆರ್. ಅಶೋಕ್ ವಿಧಿವಿಧಾನಗಳಲ್ಲಿ ಭಾಗಿಯಾಗಿ ಸಾಮೂಹಿಕವಾಗಿ ಅಸ್ತಿ ವಿಸರ್ಜಿಸಿದರು. ಅಸ್ಥಿ ವಿಸರ್ಜನೆಯ ನಂತರ ಮಾತನಾಡಿದ ಸಚಿವ ಅಶೋಕ್, ಇದು ನನ್ನ ಜೀವನದ ಭಾವನಾತ್ಮಕ ಘಳಿಗೆ. ವ್ಯಕ್ತಿ ದೇಹ ತ್ಯಜಿಸಿದ ಮೂರು ದಿನಗಳಲ್ಲಿ ಅವರ ಅಸ್ಥಿಯನ್ನು ನದಿಗೆ ಬಿಡೋದು ಸಂಪ್ರದಾಯ. ಹಿಂದಿನಿAದ ನಡೆದುಕೊಂಡು ಬಂದ ಸಂಪ್ರದಾಯ. ಆ ನಂಬಿಕೆಯAತೆ ಇಂದು ಅಸ್ಥಿ ಬಿಡುವ ಪುಣ್ಯದ ಕೆಲಸ ನನ್ನ ಪಾಲಿಗೆ ಬಂದಿದೆ ಎಂದು ಭಾವಿಸಿದ್ದೇನೆ. ಹಲವು ದಿನಗಳ ನಂತರವು ಸೋಂಕಿನಿAದ ಮೃತಪಟ್ಟವರ ಅಸ್ಥಿಯನ್ನು ಕುಟುಂಬದವರು ತೆಗೆದುಕೊಂಡು ಹೋಗಲಿಲ್ಲ. ಜಗತ್ತೆ ನಿನ್ನ ಕುಟುಂಬ ಎಂದು ತಿಳಿ ಎಂದು ದೊಡ್ಡವರು ಹೇಳಿದ್ದಾರೆ. ಆ ಮಾತನ್ನು ಕಾಯ-ವಾಚಾ-ಮನಸಾ ನಿರ್ವಹಿಸಲು ಇಂದು ಅಸ್ಥಿ ಬಿಟ್ಟಿದ್ದೇನೆ. ಅಸ್ಥಿ ವಿಸರ್ಜನೆಯ ಮೂಲಕ ಅವರು ಶಿವನ ಸಾನಿಧ್ಯ ಸೇರಲಿ ಎನ್ನುವ ನಂಬಿಕೆಯಿAದ ಸರ್ಕಾರದ ಭಾಗವಾಗಿ ನಾನೇ ಮುಂದೆ ನಿಂತು ಈ ದೇವರ ಕಾರ್ಯ ಮಾಡಿದ್ದೇನೆ. ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಹೇಳಿದರು.
ಕೋವಿಡ್-೧೯ ಲಸಿಕೆಗಳ ಖರೀದಿಯ ಮಾಹಿತಿ ನೀಡಲು ಸೂಚನೆ
ನವದೆಹಲಿ, ಜೂ. ೨: ಈವರೆಗೂ ಕೇಂದ್ರ ಸರ್ಕಾರ ಖರೀದಿಸಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗಳ ಖರೀದಿಯ ಅಂಕಿ-ಸAಖ್ಯೆಗಳ ಬಗ್ಗೆ ಪೂರ್ಣ ಮಾಹಿತಿ ಇರುವ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಎರಡು ವಾರಗಳಲ್ಲಿ ಎಲ್ಲಾ ವಿವರಗಳನ್ನೂ ಪ್ರಮಾಣಪತ್ರದಲ್ಲಿ ಸಲ್ಲಿಸುವಂತೆ ಕೋರ್ಟ್ ಹೇಳಿದೆ. ಸಂಗ್ರಹ ಮಾಡಿರುವ ಲಸಿಕೆಗಳ ದಿನಾಂಕ, ಸಂಗ್ರಹಕ್ಕೆ ಆದೇಶ ನೀಡಿದ ದಿನಾಂಕ, ಲಸಿಕೆಗಳ ಪ್ರಮಾಣ ಸಹಿತ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಕೋರ್ಟ್ ಹೇಳಿದೆ. ಇನ್ನು ಶೇಕಡವಾರು ಜನಸಂಖ್ಯೆಗೆ ನೀಡಿರುವ ಲಸಿಕೆಯ ವಿವರಗಳನ್ನೂ ಕೋರ್ಟ್ ಕೇಳಿದೆ. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಎಲ್. ನಾಗೇಶ್ವರ್ ರಾವ್, ಎಸ್. ರವೀಂದ್ರ ಭಟ್ ಅವರಿದ್ದ ಪೀಠ ಕೋವಿಡ್-೧೯ ನಿರ್ವಹಣೆಗೆ ಸಂಬAಧಿಸಿದAತೆ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಮೇ ೩೧ ರಂದು ಕೋರ್ಟ್ ಈ ಆದೇಶ ನೀಡಿದ್ದು, ಜೂ. ೨ ರಂದು ಬಹಿರಂಗಗೊAಡಿದೆ. ಇದೇ ವೇಳೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೂ ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಹೇಳಿದೆ.
ಭಾರತಕ್ಕಾಗಿ ನಿಧಿ ಸಂಗ್ರಹಿಸಲು ಆಸ್ಟೆçÃಲಿಯಾ ಕ್ರಿಕೆಟಿಗರು ಭಾಗಿ!
ಸಿಡ್ನಿ, ಜೂ. ೨: ಕೋವಿಡ್ ಸಂಕಷ್ಟದಲ್ಲಿರುವ ಭಾರತಕ್ಕಾಗಿ ಯುನಿಸೆಫ್ ಆಸ್ಟೆçÃಲಿಯಾದ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದು ಇದರಲ್ಲಿ ಆಸ್ಟೆçÃಲಿಯಾ ಸ್ಟಾರ್ ವೇಗಿ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಉನ್ನತ ಕ್ರಿಕೆಟಿಗರು ಗುರುವಾರ ೧೨ ಗಂಟೆಗಳ ಗೇಮಿಂಗ್ ಲೈವ್ ಸ್ಟಿçÃಮ್ನಲ್ಲಿ ಭಾಗವಹಿಸಲಿದ್ದಾರೆ. ೧೦೦,೦೦೦ ಆಸ್ಟೆçÃಲಿಯನ್ ಡಾಲರ್ ಸಂಗ್ರಹಿಸುವ ಪ್ರಯತ್ನದಲ್ಲಿ ವೇಗಿ ಜೋಶ್ ಲಾಲರ್, ಕಮ್ಮಿನ್ಸ್, ಸ್ಪಿನ್ನರ್ ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಝಲ್ವುಡ್ ನೇರ ಪ್ರಸಾರದಲ್ಲಿ ಕ್ರಿಕೆಟ್ ಮತ್ತು ಗೇಮಿಂಗ್ ಕೌಶಲ್ಯಗಳ ಬಗ್ಗೆ ಮಾತನಾಡುತ್ತಾರೆ. ಮಧ್ಯಾಹ್ನ ೧:೩೦ ಕ್ಕೆ ನಿಧಿ ಸಂಗ್ರಹ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಆಲ್ರೌಂಡರ್ ಮೊಯಿಸಸ್ ಹೆನ್ರಿಕ್ಸ್, ಮಹಿಳಾ ಕ್ರಿಕೆಟಿಗ ಅಲಿಸಾ ಹೀಲಿ ಮತ್ತು ದಕ್ಷಿಣ ಆಫ್ರಿಕಾದ ರಿಲೀ ರೊಸ್ಸೌ ಇತರರು ಭಾಗವಹಿಸಲಿದ್ದಾರೆ. ಆಸ್ಟೆçÃಲಿಯಾದ ಕ್ರಿಕೆಟಿಗನಾಗಿರುವುದರಿಂದ, ನಾವು ಭಾರತೀಯರ ಜೊತೆ ವಿಶಿಷ್ಟ ಸಂಬAಧವನ್ನು ಹೊಂದಿದ್ದೇವೆ ಎಂದು ಲಾಲೋರ್ ಕ್ರಿಕೆಟ್ ಡಾಟ್ ಕಾಮ್ಗೆ ತಿಳಿಸಿದ್ದು, ಇದು ವಿಶ್ವದ ಒಂದು ಸುಂದರವಾದ ಭಾಗವಾಗಿದೆ. ಭಾರತೀಯರು ಸಂಪೂರ್ಣವಾಗಿ ಕ್ರಿಕೆಟ್ ಹುಚ್ಚರಾಗಿದ್ದು ಅವರು ಎಲ್ಲಾ ಕ್ರಿಕೆಟಿಗರನ್ನು ಸ್ವಾಗತಿಸುತ್ತಾರೆ ಎಂದರು. ಭಾರತಕ್ಕಾಗಿ ನಮ್ಮ ಕೈಲಾದಷ್ಟು ಹಣ ಸಂಗ್ರಹ ಮಾಡುವ ಗುರಿ ಹೊಂದಿದ್ದು ಇದು ಮತ್ತು ಮುಂದಕ್ಕೆ ಹೋಗುತ್ತದೆ ಎಂದು ಕ್ರಿಕೆಟ್ ಆಸ್ಟೆçÃಲಿಯಾದ ಹೊಸ ಸಿಇಓ, ನಿಕ್ ಹಾಕ್ಲೆ ಮತ್ತು ಆಸ್ಟೆçÃಲಿಯಾದ ಕ್ರಿಕೆಟಿಗರ ಸಂಘದ ಸಿಇಓ ಟಾಡ್ ಗ್ರೀನ್ಬರ್ಗ್ ಹೇಳಿದ್ದು ಅವರು ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಾಲೋರ್ನ ಟ್ವಿಟ್ ಖಾತೆಯಲ್ಲಿ ಲೈವ್-ಸ್ಟಿçÃಮ್ ಲಭ್ಯವಿರುತ್ತದೆ. ಯುನಿಸೆಫ್ ಆಸ್ಟೆçÃಲಿಯಾದ ಇಂಡಿಯಾ ಕೋವಿಡ್ ಸಂಕಷ್ಟಕ್ಕಾಗಿ ಆಸ್ಟೆçÃಲಿಯಾ ಕ್ರಿಕೆಟ್ ಇದುವರೆಗೆ ೨೮೦,೦೦೦ಗಿಂತ ಹೆಚ್ಚು ಆಸ್ಟೆçÃಲಿಯನ್ ಡಾಲರ್ ಹಣ ಸಂಗ್ರಹಿಸಿದೆ.