ಸಿದ್ದಾಪುರ, ಜೂ. ೩: ವೀರಾಜಪೇಟೆ ತಾಲೂಕಿನ ವಿವಿಧ ಪಂಚಾಯಿತಿಗಳಿಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ವೀರಾಜಪೇಟೆ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಜಯಣ್ಣ ಭೇಟಿ ನೀಡಿ ಕೋವಿಡ್ ಸಂಬAಧ ಮಾಹಿತಿ ಪಡೆದರು.

ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನಕೋಟೆ, ಪಾಲಿಬೆಟ್ಟ ಪಂಚಾಯಿತಿ ಹಾಗೂ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ಮಾತನಾಡಿದ ಅವರು, ಕೋವಿಡ್-೧೯ನ್ನು ತಡೆಗಟ್ಟಲು ೧೮ ರಿಂದ ೪೦ ಹಾಗೂ ೪೦ ರಿಂದ ೬೦ ವರ್ಷದೊಳಗಿನವರು ವ್ಯಾಕ್ಸೀನ್ ತೆಗೆದುಕೊಳ್ಳುವ ನೋಂದಾಯಿತ ಕಟ್ಟಡ ಕಾರ್ಮಿಕರು ತಾಲೂಕು ಕಾರ್ಮಿಕ ಇಲಾಖೆಯಿಂದ ಅಥವಾ ಕಾರ್ಮಿಕ ಸಂಘಟನೆಗಳಿAದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕರ ಸಹಿ ಪಡೆದಕೊಳ್ಳುವಂತೆ ಮನವಿ ಮಾಡಿದರು.